Webdunia - Bharat's app for daily news and videos

Install App

ಡೆಲ್ಲಿ ಡೇರ್‌ಡೆವಿಲ್ಸ್‌ಗೆ ಸನ್‌ರೈಸರ್ಸ್ ವಿರುದ್ಧ ಮಾಡು ಇಲ್ಲವೇ ಮಡಿ ಹೋರಾಟ

Webdunia
ಶುಕ್ರವಾರ, 20 ಮೇ 2016 (18:21 IST)
ಡೆಲ್ಲಿ ಡೇರ್ ಡೆವಿಲ್ಸ್ ತಂಡ ಮಾಡು ಇಲ್ಲವೇ ಮಡಿ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಟೇಬಲ್ ಟಾಪರ್ ಸನ್‌ರೈಸರ್ಸ್ ಹೈದರಾಬಾದ್‌ ತಂಡವನ್ನು ಶುಕ್ರವಾರದ ಐಪಿಎಲ್ ಪಂದ್ಯದಲ್ಲಿ ಎದುರಿಸುತ್ತಿದೆ.  ಡೇರ್ ಡೇವಿಲ್ಸ್ ಸುಸ್ಥಿರ ಗೆಲುವಿನ ಗತಿಯನ್ನು ಲೀಗ್‌ವುದ್ದಕ್ಕೂ ನಿರ್ಮಿಸಲು ವಿಫಲವಾಗಿದ್ದು, ಶುಕ್ರವಾರದ ಪಂದ್ಯದಲ್ಲಿ ಸೋಲುಗಳನ್ನು ಒಂದರ ಹಿಂದೊಂದು ಕಟ್ಟಿಕೊಂಡು ಆಡುತ್ತಿದೆ.

12 ಪಂದ್ಯಗಳಲ್ಲಿ 12 ಪಾಯಿಂಟ್‌ಗಳೊಂದಿಗೆ  ವೀರ್ ನಾರಾಯಣ್ ಸಿಂಗ್ ಸ್ಟೇಡಿಯಂನಲ್ಲಿ ಸನ್‌ರೈಸರ್ಸ್ ವಿರುದ್ಧ ಪಂದ್ಯವನ್ನು ಗೆಲ್ಲಲೇಬೇಕಾಗಿದೆ. ಶುಕ್ರವಾರ ಸೋತರೆ, ಪ್ಲೇಆಫ್ ಬರ್ತ್‌ ಸ್ಪರ್ಧೆಯಿಂದ ಅದು ಹೊರಬೀಳುತ್ತದೆ.
 
 ಸನ್‌ರೈಸರ್ಸ್ ಅಕ್ಷರಶಃ ಪ್ಲೇಆಫ್ ಹಂತ ಪ್ರವೇಶಿಸಿದ್ದು, 12 ಪಂದ್ಯಗಳಲ್ಲಿ 16 ಪಾಯಿಂಟ್‌ಗಳಿಂದ ಪಟ್ಟಿಯಲ್ಲಿ ಟಾಪ್‌ನಲ್ಲಿದ್ದಾರೆ.  ಡೇರ್ ಡೆವಿಲ್ಸ್ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ವಿರುದ್ಧ 19 ರನ್‌ಗಳಿಂದ ಸೋತಾಗ ಅದರ ಪ್ಲೇ ಆಫ್ ಬರ್ತ್‌ ಆಸೆಗೆ ಪೆಟ್ಟು ಬಿದ್ದಿತ್ತು.

 ಸ್ಥಳೀಯ ಆಟಗಾರರಾದ ಮಾಯಾಂಕ್ ಅಗರವಾಲ್, ಶ್ರೇಯಾಸ್ ಅಯ್ಯರ್ , ಕರುಣ್ ನಾಯರ್, ಸಂಜು ಸ್ಯಾಮ್ಸ್ ಮುಂತಾದವರು ಅಸ್ಥಿರತೆಯ ಪ್ರದರ್ಶನ ನೀಡಿದ್ದರಿಂದ ಡೇರ್‌ಡೆವಿಲ್ಸ್‌ಗೆ ಕೆಟ್ಟ ಪೆಟ್ಟು ನೀಡಿದೆ.  ಹಿರಿಯ ಬ್ಯಾಟ್ಸ್‌ಮನ್ ಡುಮಿನಿ ಟೀಂಗೆ ಅಷ್ಟೊಂದು ಕೊಡುಗೆ ನೀಡಿಲ್ಲ. ಅವರ ಫಾರಂ ಕಳೆದುಕೊಂಡ ಆಟದಿಂದ ಡೇರ್ ಡೆವಿಲ್ಸ್ ಲಯಕ್ಕೆ ಪೆಟ್ಟುಬಿದ್ದಿದೆ.
 ಸನ್‌ರೈಸರ್ಸ್  ಪಂದ್ಯಾವಳಿಯಲ್ಲಿ ಅತ್ಯಂತ ಸುಸ್ಥಿರ ತಂಡವಾಗಿದ್ದು, ಆರಂಭದ ಎರಡು ಪಂದ್ಯಗಳಲ್ಲಿ ಸೋತಿದ್ದನ್ನು ಬಿಟ್ಟರೆ ಲೀಗ್‌ನಲ್ಲಿ ಒಂದರ ಹಿಂದೊಂದು ಪಂದ್ಯಗಳನ್ನು ಸೋತಿಲ್ಲ. 
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs ENG: ಅಪರೂಪದ ದಾಖಲೆ ಮಾಡಿದ ಶುಭಮನ್ ಗಿಲ್

ಆಂಗ್ಲರ ನಾಡಲ್ಲಿ ಮತ್ತೇ ಅಬ್ಬರಿಸಿದ ಶುಭ್ಮನ್‌ ಗಿಲ್ ಬ್ಯಾಟಿಂಗ್‌: 8ನೇ ಶತಕ ಸಿಡಿಸಿದ ಕ್ಯಾಪ್ಟನ್‌

IND vs ENG Test: ವಿದೇಶಿ ನೆಲದಲ್ಲಿ ಹೊಸ ದಾಖಲೆ ಬರೆದ ರಿಷಭ್ ಪಂತ್

IND vs ENG: ಕರುಣ್ ನಾಯರ್ ನಿಮಗೆ ಎರಡನೇ ಚಾನ್ಸ್ ಸಿಕ್ತು, ನೀವು ಮಾಡಿದ್ದೇನು

IND vs ENG: ವೈಸ್ ಕ್ಯಾಪ್ಟನ್ಸಿ ಪಟ್ಟ ರಿಷಭ್ ಪಂತ್ ಗೆ ಕೆಲಸ ಮಾಡಲು ಕೆಎಲ್ ರಾಹುಲ್

ಮುಂದಿನ ಸುದ್ದಿ
Show comments