Select Your Language

Notifications

webdunia
webdunia
webdunia
webdunia

ನಾನು ಕೇವಲ ಅನುಭವವನ್ನು ಬಳಸಿಕೊಳ್ಳುತ್ತಿದ್ದೇನೆ: ಹರಭಜನ್ ಸಿಂಗ್

ನಾನು ಕೇವಲ ಅನುಭವವನ್ನು ಬಳಸಿಕೊಳ್ಳುತ್ತಿದ್ದೇನೆ: ಹರಭಜನ್ ಸಿಂಗ್
ಮುಂಬೈ , ಬುಧವಾರ, 6 ಮೇ 2015 (18:07 IST)
ದೆಹಲಿ ಡೇರ್ ಡೆವಿಲ್ಸ್ ವಿರುದ್ಧದ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಖ್ಯಾತ ಬೌಲರ್ ಹರಭಜನ್ ಸಿಂಗ್, ನಾನು ಉತ್ತಮ ಪ್ರದರ್ಶನ ನೀಡಲು ಕೇವಲ ನನ್ನ ಅನುಭವವನ್ನು ಧಾರೆಯರೆಯುತ್ತಿದ್ದೇನೆ ಎಂದು ಹೇಳಿದ್ದಾರೆ.

ವಾಂಖೇಡೆ ಕ್ರೀಡಾಂಗಣದಲ್ಲಿ ನಡೆದ ಡೇರ್ ಡೆವಿಲ್ಸ್ ಪಂದ್ಯದಲ್ಲಿ ಹರ್ಭಜನ್ ಅಲಿಯಾಸ್ ಟರ್ಬನೇಟರ್ ಭಜ್ಜಿ 4-1-11-2 ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿರುವುದು ಮುಂಬೈ ಇಂಡಿಯನ್ಸ್ ತಂಡದ ಗೆಲುವಿಗೆ ಕಾರಣವಾಯಿತು.

ವಾಂಖೇಡೆ ಕ್ರೀಡಾಂಗಣದ ಪಿಚ್‌ ನಿಧಾನತಿಯ ಬೌಲಿಂಗ್‌ಗೆ ಸ್ಪಂದಿಸುತ್ತಿರುವ ಹಿನ್ನೆಲೆಯಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಲು ನನ್ನ ಅನುಭವವನ್ನು ಬಳಸಿದೆ ಎಂದು ಪಂದ್ಯದ ಗೆಲುವಿನ ನಂತರ ಭಜ್ಜಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ನಾನು ಉತ್ತಮ ಆಲ್‌ರೌಂಡರ್ ಎನಿಸಿಕೊಳ್ಳಲು ಉತ್ತಮವಾಗಿ ಬ್ಯಾಟಿಂಗ್ ಮಾಡುವುದು ಅಗತ್ಯವಾಗಿದೆ. ಇನ್ನೂ ಹೆಚ್ಚಿನ ರನ್ ಗಳಿಸಬೇಕಾಗಿತ್ತು. ಆದರೆ, ಕೆಟ್ಟ ಹೊಡೆತಕ್ಕೆ ಮೊರೆಹೋಗಿದ್ದರಿಂದ ವಿಕೆಟ್ ಕಳೆದುಕೊಂಡಿದ್ದೇನೆ. ಮುಂಬರುವ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವುದಾಗಿ ತಿಳಿಸಿದ್ದಾರೆ.

ದೆಹಲಿ ಡೇರ್ ಡೆವಿಲ್ಸ್ ವಿರುದ್ಧದ ಪಂದ್ಯದಲ್ಲಿ ಭಜ್ಜಿ ಕೇವಲ 5 ರನ್ ಗಳಿಸಿ ನಾಥನ್ ಕೌಲ್ಟರ್ ನಿಲೇ ಬೌಲಿಂಗ್‌ನಲ್ಲಿ ಔಟಾಗಿದ್ದರು.

Share this Story:

Follow Webdunia kannada