Webdunia - Bharat's app for daily news and videos

Install App

IPL 2025 Final: ಮೂರು ಆರ್ ಸಿಬಿ ಹೀಗೇ ಸೋತಿತ್ತು, ಇಂದೂ ಅದೇ ತಪ್ಪಾಗದಿದ್ರೆ ಸಾಕು

Krishnaveni K
ಮಂಗಳವಾರ, 3 ಜೂನ್ 2025 (10:21 IST)
ಅಹಮ್ಮದಾಬಾದ್: ಐಪಿಎಲ್ 2025 ರಲ್ಲಿ ಇಂದು ಪಂಜಾಬ್ ಕಿಂಗ್ಸ್ ವಿರುದ್ಧ ಆಡಲಿರುವ ಆರ್ ಸಿಬಿ ಈ ಹಿಂದೆ ಮೂರು ಬಾರಿ ಒಂದೇ ತಪ್ಪು ಮಾಡಿತ್ತು. ಇಂದೂ ಆ ತಪ್ಪಾಗದಿರಲಿ ಎಂದೇ ಅಭಿಮಾನಿಗಳ ಪ್ರಾರ್ಥನೆ.
 

ಆರ್ ಸಿಬಿಗೆ ಇದು ನಾಲ್ಕನೇ ಫೈನಲ್. ಇದಕ್ಕೆ ಮೊದಲು 2009, 2011 ಮತ್ತು 2016 ರಲ್ಲಿ ಆರ್ ಸಿಬಿ ಫೈನಲ್ ಗೇರಿತ್ತು. ಈ ಮೂರೂ ಬಾರಿ ಆರ್ ಸಿಬಿ ಚೇಸಿಂಗ್ ಮಾಡಿತ್ತು. ಮೂರೂ ಬಾರಿಯೂ ಚೇಸ್ ಮಾಡಿದಾಗಲೆಲ್ಲಾ ಸೋತಿದೆ. ಹೀಗಾಗಿ ಈ ಬಾರಿ ಚೇಸಿಂಗ್ ಮಾಡೋದು ಬೇಡ ಎನ್ನುತ್ತಿದ್ದಾರೆ ಫ್ಯಾನ್ಸ್.

2009 ರಲ್ಲಿ ಟಾಸ್ ಗೆದ್ದ ನಾಯಕ ಅನಿಲ್ ಕುಂಬ್ಳೆ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದರು. ಮೊದಲು ಬ್ಯಾಟಿಂಗ್ ಮಾಡಿದ ಡೆಕ್ಕನ್ ಚಾರ್ಜಸ್ ಗಳಿಸಿದ್ದು ಕೇವಲ 143 ರನ್. ಇದನ್ನು ಚೇಸ್ ಮಾಡಿದ ಆರ್ ಸಿಬಿ 9 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಲಷ್ಟೇ ಶಕ್ತವಾಯಿತು.

2011 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಟಾಸ್ ಗೆದ್ದಿತ್ತು. ಆ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್ ಕೆ 205 ರನ್ ಗಳಿಸಿತು. ಈ ಮೊತ್ತ ಬೆನ್ನತ್ತಿದ ಆರ್ ಸಿಬಿ 8 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಲಷ್ಟೇ ಶಕ್ತವಾಯಿತು. 2016 ರಲ್ಲಿ ಹೈದರಾಬಾದ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ 208 ರನ್ ಗಳಿಸಿತು. ಇದನ್ನು ಬೆನ್ನತ್ತಿದ ಆರ್ ಸಿಬಿ ಉತ್ತಮ ಆರಂಭ ಪಡೆದರೂ ಕೊನೆಗೆ 200 ರನ್ ಗಳಿಸಲಷ್ಟೇ ಶಕ್ತವಾಯಿತು. ಹೀಗಾಗಿ ಮೂರೂ ಬಾರಿ ಚೇಸ್ ಮಾಡಿಯೇ ಸೋತಿದೆ. ಹೀಗಾಗಿ ಈ ಬಾರಿ ಮೊದಲು ಬ್ಯಾಟಿಂಗ್ ಮಾಡಿ ಗೆಲ್ಲಲಿ ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

R Ashwin video: ಮಹಿಳಾ ಅಂಪಾಯರ್ ಮೇಲೆ ಆರ್ ಅಶ್ವಿನ್ ರೋಷಾವೇಷ

IPL 2026: ಟ್ರೋಫಿ ಗೆದ್ದ ಬೆನ್ನಲ್ಲೇ ಆರ್ ಸಿಬಿ ಐಪಿಎಲ್ ನಿಂದ ಬ್ಯಾನ್

ಕ್ರಿಕೆಟಿಗ ರಿಂಕು ಸಿಂಗ್‌ ನಿಶ್ಚಿತಾರ್ಥ: ಕೈ ಹಿಡಿಯಲಿರುವ ಯುವತಿ ಹಿನ್ನೆಲೆ ಕೇಳಿದ್ರೆ ಶಾಕ್ ಆಗ್ತೀರಾ

French Open: ಯಾನಿಕ್‌ ಸಿನ್ನರ್‌- ಕಾರ್ಲೋಸ್‌ ಅಲ್ಕರಾಜ್‌ ಪೈಪೋಟಿಯಲ್ಲಿ ಯಾರಿಗೆ ಒಲಿಯಲಿದೆ ಫ್ರೆಂಚ್‌ ಓಪನ್‌ ಕಿರೀಟ

IPL 2025: ಆರ್‌ಸಿಬಿಗೆ ಐಪಿಎಲ್‌ ಕಿರೀಟ: ಇಡೀ ಗ್ರಾಮಕ್ಕೆ ಮಾಂಸದೂಟ ಹಾಕಿ ಸಂಭ್ರಮಿಸಿದ ಯುವಕರು

ಮುಂದಿನ ಸುದ್ದಿ
Show comments