IPL 2025 Final: ಆರ್ ಸಿಬಿ ಕಪ್ ಗೆಲ್ತು ಎಂದು ಸಂಭ್ರಮಾಚರಣೆ ಮಾಡುವ ಮುನ್ನ ಹುಷಾರ್: ಈ ಸೂಚನೆ ಗಮನಿಸಿ

Krishnaveni K
ಮಂಗಳವಾರ, 3 ಜೂನ್ 2025 (14:51 IST)
ಬೆಂಗಳೂರು: ಐಪಿಎಲ್ 2025 ರ ಫೈನಲ್ ನಲ್ಲಿ ಇಂದು ಪಂಜಾಬ್ ಕಿಂಗ್ಸ್ ವಿರುದ್ಧ ಆರ್ ಸಿಬಿ ಆಡಲಿದ್ದು ಒಂದು ವೇಳೆ ಫೈನಲ್ ಪಂದ್ಯ ಗೆದ್ದ ಬಳಿಕ ಅಭಿಮಾನಿಗಳೇನಾದರೂ ಬೆಂಗಳೂರಿನಲ್ಲಿ ಸಂಭ್ರಮಾಚರಣೆ ನೆಪದಲ್ಲಿ ಬೇಡದ ಕೆಲಸಕ್ಕೆ ಕೈ ಹಾಕಿದಿರೋ  ನಿಮಗೆ ಕಾದಿದೆ ಶಿಕ್ಷೆ. ಈ ಬಗ್ಗೆ ಬೆಂಗಳೂರು ಪೊಲೀಸ್ ಕಮಿಷನರ್ ಬಿ ದಯಾನಂದ್ ಎಚ್ಚರಿಕೆ ರವಾನಿಸಿದ್ದಾರೆ.

ಆರ್ ಸಿಬಿ ಪ್ರತೀ ಪಂದ್ಯ ಗೆದ್ದಾಗಲೂ ನಗರದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸುವವರ ಸಂಖ್ಯೆಗೇನೂ ಕಡಿಮೆಯಿರಲಿಲ್ಲ. ಮೊನ್ನೆ ಫೈನಲ್ ಗೇರುತ್ತಿದ್ದಂತೆಯೂ ಬೀದಿಗಳಿದು ಅಭಿಮಾನಿಗಳು ಸಂಭ್ರಮಿಸಿದ್ದರು.

ಹೀಗಿರುವಾಗ ಎಲ್ಲಾದರೂ ಇಂದು ಕಪ್ ಗೆದ್ದರೆ ಕೇಳಬೇಕೇ? ಅಭಿಮಾನಿಗಳ ಸಂಭ್ರಮ ಮೇರೆ ಮೀರುವುದು ಪಕ್ಕಾ. ಹಾಗಂತ ಸಂಭ್ರಮಾಚರಣೆ ನೆಪದಲ್ಲಿ ಸಾರ್ವಜನಿಕರಿಗೆ ತೊಂದರೆ ಕೊಡುವುದು, ಆಸ್ತಿ ಪಾಸ್ತಿಗಳಿಗೆ ಹಾನಿ ಮಾಡುವುದು ಮಾಡಿದರೆ ತಕ್ಕ ಶಿಕ್ಷೆ ಎದುರಿಸಬೇಕಾಗುತ್ತದೆ ಎಂದು ಕಮಿಷನರ್ ಎಚ್ಚರಿಕೆ ನೀಡಿದ್ದಾರೆ.

ಪೊಲೀಸರಿಗೆ ಮಾಹಿತಿ ನೀಡದೇ ಸಾರ್ವಜನಿಕ ಸ್ಥಳದಲ್ಲಿ ಸ್ಕ್ರೀನ್ ಅಳವಡಿಸುವುದು, ರಸ್ತೆಯಲ್ಲಿ ಸಂಭ್ರಮಾಚರಿಸಿ ಸಾರ್ವಜನಿಕರಿಗೆ ತೊಂದರೆ ಕೊಟ್ಟರೆ ಅಂತಹವರ ವಿರುದ್ಧ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು ಎಂದು ಕಮಿಷನರ್ ಎಚ್ಚರಿಕೆ ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Virat Kohli birthday: ಎಂಜಿ ರೋಡ್ ನಲ್ಲಿ ಮೊದಲು ಟ್ಯಾಟೂ ಹಾಕಿಸಿದ್ದ ಕೊಹ್ಲಿ ಆಮೇಲೆ ಮುಚ್ಚಿಟ್ಟಿದ್ದು ಯಾಕೆ

ತಿಲಕ ಬೇಡ ಎಂದ ಸ್ಮೃತಿ ಮಂಧಾನ: ಯಾಕೆ ಹೀಗೆ ನೆಟ್ಟಿಗರ ಪ್ರಶ್ನೆ: video

ಜಯ್ ಶಾ ಎಂದ್ರೆ ಸುಮ್ನೇ ಅಲ್ಲ, ಮಹಿಳಾ ಕ್ರಿಕೆಟ್ ತಾರೆಯರಿಗೆ ಇದಕ್ಕೇ ಜಯ್ ಶಾ ಮೆಲೆ ಪ್ರೀತಿ

ಪ್ರಧಾನಿ ಭೇಟಿಗೆ ಸಿದ್ಧರಾದ ಚಾಂಪಿಯನ್ ಭಾರತ ಮಹಿಳಾ ಕ್ರಿಕೆಟಿಗರು: ಮೋದಿಗೆ ಏನು ಗಿಫ್ಟ್ ಕೊಡಲಿದ್ದಾರೆ

ಹರ್ಮನ್ ಪ್ರೀತ್ ಕೌರ್ ಪಡೆಗಿಲ್ಲ ವಿಕ್ಟರಿ ಪೆರೇಡ್ ಭಾಗ್ಯ: ಇದಕ್ಕೆಲ್ಲಾ ಬೆಂಗಳೂರೇ ಕಾರಣ

ಮುಂದಿನ ಸುದ್ದಿ
Show comments