Webdunia - Bharat's app for daily news and videos

Install App

ಐಪಿಎಲ್ 2024: ಆರ್ ಸಿಬಿ ಗೆದ್ದ ಬೆನ್ನಲ್ಲೇ ವಿರಾಟ್ ಕೊಹ್ಲಿ ಮುಖದಲ್ಲಿ ನಗುವೋ ನಗು

Krishnaveni K
ಶುಕ್ರವಾರ, 26 ಏಪ್ರಿಲ್ 2024 (10:34 IST)
Photo Courtesy: Twitter
ಬೆಂಗಳೂರು: ಅಂತೂ ಇಂತೂ ಆರ್ ಸಿಬಿ ಗೆಲುವಿನ ನಿಟ್ಟುಸಿರು ಬಿಟ್ಟಿದೆ. ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ನಿನ್ನೆ ನಡೆದ ಪಂದ್ಯವನ್ನು 35 ರನ್ ಗಳಿಂದ ಗೆದ್ದ ಆರ್ ಸಿಬಿ ಮುಖದಲ್ಲಿ ಸಮಾಧಾನ ಕಂಡುಬಂದಿದೆ.

ಅದರಲ್ಲೂ ಕಳೆದ ಪಂದ್ಯದಲ್ಲಿ ಸೋತ ಬಳಿಕ ವಿರಾಟ್ ಕೊಹ್ಲಿ ತೀವ್ರ ಸಿಟ್ಟಿಗೊಳಗಾಗಿದ್ದರು. ಆರ್ ಸಿಬಿಗೆ ಈ ಗೆಲುವು ಈ ಐಪಿಎಲ್ ಟೂರ್ನಿಯ ಮೇಲೆ ಏನೂ ಪರಿಣಾಮ ಬೀರದು. ಆದರೆ ಸತತ ಸೋಲುಗಳಿಂದ ಕಂಗೆಟ್ಟಿದ್ದ ತಂಡಕ್ಕೆ ಈ ಗೆಲುವು ಹೊಸ ಭರವಸೆ ಮೂಡಿಸಿದೆ.

ಹೀಗಾಗಿ ನಿನ್ನೆಯ ಗೆಲುವಿನ ಬಳಿಕ ಆರ್ ಸಿಬಿ ಸ್ಟಾರ್ ಪ್ಲೇಯರ್ ವಿರಾಟ್ ಕೊಹ್ಲಿ ಮುಖದಲ್ಲಿ ಎಲ್ಲಿಲ್ಲದ ಸಂಭ್ರಮವಿತ್ತು. ಸನ್ ರೈಸರ್ಸ್ ಹೈದರಾಬಾದ್ ಈ ಟೂರ್ನಿಯುದ್ದಕ್ಕೂ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿತ್ತು. ಆದರೆ ನಿನ್ನೆಯ ಪಂದ್ಯದಲ್ಲಿ ಹೈದರಾಬಾದ್ ನ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಆರ್ ಸಿಬಿ 171 ರನ್ ಗಳಿಗೆ ಕಟ್ಟಿ ಹಾಕಿತ್ತು. ಇದು ಅದ್ಭುತ ಸಾಧನೆಯೇ ಸರಿ.

ಈ ಗೆಲುವಿನ ಬಳಿಕ ಹೈದರಾಬಾದ್ ಮಾಲಕಿ ಕಾವ್ಯಾ ಮಾರನ್ ಮುಖದಲ್ಲಿ ತೀವ್ರ ನಿರಾಸೆ ಎದ್ದು ಕಾಣುತ್ತಿತ್ತು. ಆದರೆ ತವರಿನ ಪ್ರೇಕ್ಷಕರ ಎದುರು ಗೆದ್ದ ವಿರಾಟ್ ಕೊಹ್ಲಿ ಮುಖದಲ್ಲಿ ನಗುವೇ ತುಂಬಿತ್ತು. ಕೊನೆಯ ಓವರ್ ನಲ್ಲಿ ರನ್ ಡಿಫೆಂಡ್ ಮಾಡಿದ ಯಶ್ ದಯಾಳ್ ಬಳಿ ಹೋಗಿ ಕೊಹ್ಲಿ ತಮ್ಮ ಸಂಭ್ರಮ ಆಚರಿಸಿಕೊಂಡಿದ್ದಾರೆ. ಈ ಕ್ಷಣಗಳು ಅವರ ಅಭಿಮಾನಿಗಳಿಗೂ ಖುಷಿ ಕೊಟ್ಟಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ನಿಮ್ಗೆ ಸ್ವಿಂಗ್ ಆಡುವ ಯೋಗ್ಯತೆ ಇಲ್ಲ ಎಂದ ಹ್ಯಾರಿ ಬ್ರೂಕ್ ಗೆ ಕೆಎಲ್ ರಾಹುಲ್ ಉತ್ತರ ಏನಿತ್ತು ಗೊತ್ತಾ

Video: ಡ್ರಾ ಮಾಡಿಕೊಳ್ಳೋಣ್ವಾ ಎಂದರೆ ತಡಿ ಸೆಂಚುರಿ ಮಾಡ್ತೀನಿ ಎಂದ ರವೀಂದ್ರ ಜಡೇಜಾ

ಕಾಲಿನ ಬೆರಳು ಮುರಿದರೂ ಮತ್ತೆ ಕಣಕ್ಕೆ ಇಳಿಯಲು ಸಜ್ಜಾದ ರಿಷಭ್‌ ಪಂತ್‌: ಕುತೂಹಲ ಘಟ್ಟದತ್ತ ನಾಲ್ಕನೇ ಟೆಸ್ಟ್‌

IND vs ENG: ಕೆಎಲ್ ರಾಹುಲ್ ಟೀಂ ಇಂಡಿಯಾಗೆ ನೀವೇ ಗತಿ

IND vs ENG: ದ್ವಿತೀಯ ಇನಿಂಗ್ಸ್ ನಲ್ಲಿ ಟೀಂ ಇಂಡಿಯಾಕ್ಕೆ ಇದೆಂಥಾ ಅವಸ್ಥೆ

ಮುಂದಿನ ಸುದ್ದಿ
Show comments