Webdunia - Bharat's app for daily news and videos

Install App

ಐಪಿಎಲ್ 2024: ಪಂದ್ಯಶ್ರೇಷ್ಠ ಪ್ರಶಸ್ತಿ ನಾನು ಅರ್ಹನಲ್ಲ ಎಂದು ಹೇಳಿಕೊಂಡ ಸಂಜು ಸ್ಯಾಮ್ಸನ್

Krishnaveni K
ಸೋಮವಾರ, 25 ಮಾರ್ಚ್ 2024 (11:46 IST)
Photo Courtesy: Twitter
ಜೈಪುರ: ಐಪಿಎಲ್ 2024 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಅಬ್ಬರದ ಬ್ಯಾಟಿಂಗ್ ನಿಂದ ಗೆಲುವು ಕಂಡಿತ್ತು.

52 ಎಸೆತ ಎದುರಿಸಿದ್ದ ಸಂಜು ಸ್ಯಾಮ್ಸನ್ 6 ಸಿಕ್ಸರ್ ಸಹಿತ ಅಜೇಯ 82 ರನ್ ಗಳಿಸಿದ್ದರು. ಈ ಪಂದ್ಯವನ್ನು ರಾಜಸ್ಥಾನ್ 20 ರನ್ ಗಳಿಂದ ಗೆದ್ದುಕೊಂಡಿತು. ಸಂಜು ಸ್ಯಾಮ್ಸನ್ ಅಬ್ಬರದ ಇನಿಂಗ್ಸ್ ಗಾಗಿ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಲಾಯಿತು. ಆದರೆ ಇದಕ್ಕೆ ತಾನು ಅರ್ಹನಲ್ಲ ಎಂದು ಹೇಳಿಕೊಂಡಿದ್ದಾರೆ.

ಪಂದ್ಯದ ಬಳಿಕ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಸಂಜು ‘ನಿಜ ಹೇಳಬೇಕೆಂದರೆ ನಾನು ಈ ಟ್ರೋಫಿಗೆ ಅರ್ಹನಲ್ಲ. ಇದನ್ನು ಬೌಲರ್ ಸಂದೀಪ್ ಶರ್ಮಗೆ ಕೊಡಬೇಕು. ಅವರು ಕೊನೆಯ ಆ ಓವರ್ ಅದ್ಭುತವಾಗಿ ಬೌಲಿಂಗ್ ಮಾಡದೇ ಇದ್ದಿದ್ದರೆ ನಾನು ಈವತ್ತು ಪಂದ್ಯಶ್ರೇಷ್ಠನಾಗುತ್ತಲೇ ಇರಲಿಲ್ಲ. ಹಾಗಾಗಿ ನಾನು ಅವರನ್ನು ಕರೆಯಬೇಕು ಎಂದುಕೊಂಡೆ. ಆಶ್ ಭಾಯಿ (ರವಿಚಂದ್ರನ್ ಅಶ‍್ವಿನ್) ಕೂಡಾ ಇದನ್ನೇ ಹೇಳಿದರು. ನಿಮ್ಮಲ್ಲಿ ಕೌಶಲ್ಯವಿರುವುದು ಮುಖ್ಯವಲ್ಲ, ಅದನ್ನು ಒತ್ತಡದ ಸಂದರ್ಭದಲ್ಲಿ ಹೇಗೆ ಅಳವಡಿಸಿಕೊಳ್ಳುತ್ತೀರಿ ಎನ್ನುವುದು ಮುಖ್ಯ. ಅದು ಈವತ್ತು ಸಂದೀಪ್ ಕಣ್ಣುಗಳಲ್ಲಿ, ಬಾಂಡಿ ಲ್ಯಾಂಗ್ವೇಜ್ ನಲ್ಲಿ ಕಾಣಿಸಿತ್ತು’ ಎಂದಿದ್ದಾರೆ.

ಸಂಜು ಸ್ಯಾಮ್ಸನ್ ಈ ಮಾತುಗಳನ್ನು ನೆಟ್ಟಿಗರು ಕೊಂಡಾಡಿದ್ದಾರೆ. ಒಬ್ಬ ನಾಯಕನಾದವರ ನಿಜ ಗುಣವಿದು. ತನ್ನ ವೈಯಕ್ತಿಕ ದಾಖಲೆಗಿಂತ ಇತರೆ ಆಟಗಾರರ ಶ್ರಮವನ್ನು ಗುರುತಿಸುವ ವಿಶಾಲ ಮನೋಭಾವವರಿಬೇಕು. ಅದು ಈವತ್ತು ಸಂಜುನಲ್ಲಿ ಇತ್ತು ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮುಂಬೈ ಇಂಡಿಯನ್ಸ್ ತಂಡದಿಂದ ಹೊರ ಇಡುತ್ತಿದ್ದ ಹಾಗೇ ಸಹೋದರಿ ಜತೆ ಫಾರಿನ್‌ಗೆ ಹೋದ ಅರ್ಜುನ್ ತೆಂಡೂಲ್ಕರ್‌

WTC Final: ಚೋಕರ್ಸ್‌ ಹಣೆಪಟ್ಟಿ ಕಳಚುವತ್ತ ದಕ್ಷಿಣ ಆಫ್ರಿಕಾ: ಹಿಡಿತ ಸಾಧಿಸಿದ ಹರಿಣ ಪಡೆ

ವಿರಾಟ್ ಕೊಹ್ಲಿ 7 ವರ್ಷದ ಹಳೆಯ ಟ್ವೀಟ್ ವೈರಲ್: ಅಂತಹದ್ದೇನಿದೆ ಅದರಲ್ಲಿ

ಏರ್ ಇಂಡಿಯಾ ವಿಮಾನ ಹತ್ತಲ್ಲ ಎಂದ ಡೇವಿಡ್ ವಾರ್ನರ್: ನಾವೂ ಹೋಗಲ್ಲ ಎಂದ ನೆಟ್ಟಿಗರು

ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್: ಇತಿಹಾಸ ನಿರ್ಮಿಸಲು ಹೊರಟ ದಕ್ಷಿಣ ಆಫ್ರಿಕಾ

ಮುಂದಿನ ಸುದ್ದಿ
Show comments