IPL 2024: ಆರ್ ಸಿಬಿಗೆ ಪ್ಲೇ ಆಫ್ ಗೇರಲು ದಾರಿ ಯಾವುದು

Krishnaveni K
ಸೋಮವಾರ, 13 ಮೇ 2024 (11:39 IST)
ಬೆಂಗಳೂರು: ಐಪಿಎಲ್ 2024 ರಲ್ಲಿ ಸತತ ಐದು ಗೆಲುವುಗಳಿಂದ ಪ್ಲೇ ಆಫ್ ಕನಸು ಜೀವಂತವಾಗಿಟ್ಟಿರುವ ಆರ್ ಸಿಬಿಗೆ ಮುಂದಿನ ಹಾದಿ ಹೇಗೆ ಎಂಬ ಬಗ್ಗೆ ಇಲ್ಲಿದೆ ಒಂದು ವಿಶ್ಲೇಷಣೆ.

ಒಟ್ಟು 13 ಲೀಗ್ ಪಂದ್ಯಗಳನ್ನಾಡಿರುವ ಆರ್ ಸಿಬಿ 6 ಗೆಲುವು ಕಂಡಿದ್ದು 12 ಅಂಕ ಸಂಪಾದಿಸಿದೆ. ಸದ್ಯಕ್ಕೆ ಆರ್ ಸಿಬಿ ಅಂಕಪಟ್ಟಿಯಲ್ಲಿ ಐದನೇ ಸ್ಥಾನಕ್ಕೇರಿದೆ. ಆರ್ ಸಿಬಿ ಜೊತೆಗೆ 12 ಅಂಕ ಪಡೆದುಕೊಂಡ ತಂಡಗಳೆಂದರೆ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡ.

ಇವೆರಡೂ ತಂಡಗಳು ಸದ್ಯಕ್ಕೆ ಅಂಕಪಟ್ಟಿಯಲ್ಲಿ ಆರ್ ಸಿಬಿಗಿಂತ ಕೆಳಗಿನ ಸ್ಥಾನದಲ್ಲಿವೆ. ನೆಟ್ ರನ್ ರೇಟ್ ಆಧಾರದಲ್ಲಿ ಆರ್ ಸಿಬಿಯೇ ಮುಂದಿದೆ. ಆದರೆ ಆರ್ ಸಿಬಿಗಿಂತ ಮೊದಲಿರುವ ತಂಡಗಳೆಂದರೆ ಕೆಕೆಆರ್, ಎಸ್ ಆರ್ ಎರ್, ರಾಜಸ್ಥಾನ್ ರಾಯಲ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡ.

ಆರ್ ಸಿಬಿಗೆ ಪ್ಲೇ ಆಫ್ ಗೇರುವುದು ಅಷ್ಟು ಸುಲಭವಲ್ಲ. ಯಾಕೆಂದರೆ ಇನ್ನು ಉಳಿದಿರುವುದು ಒಂದೇ ಲೀಗ್ ಪಂದ್ಯ. ಅದಕ್ಕಿಂತ ಮೊದಲು ಇಂದು ಕೆಕೆಆರ್ ಮತ್ತು ಗುಜರಾತ್ ಟೈಟನ್ಸ್ ನಡುವೆ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಕೆಕೆಆರ್ ಸೋಲಬೇಕು. ಮುಂದಿನ ಪಂದ್ಯದಲ್ಲಿ ಆರ್ ಸಿಬಿ 18 ರನ್ ಗಿಂತ ಅಧಿಕ ರನ್ ಅಂತರದಲ್ಲಿ ಗೆಲ್ಲಬೇಕು. ಒಂದು ವೇಳೆ ರನ್‍ ಚೇಸ್ ಮಾಡುವುದಾದರೆ 11 ಬಾಲ್ ಬಾಕಿ ಇರುವಾಗಲೇ ಗೆಲ್ಲಬೆಕು. ಆಗ ಸಿಎಸ್ ಕೆಯನ್ನು ರನ್ ಸರಾಸರಿಯಲ್ಲಿ ಹಿಂದಿಕ್ಕಬಹುದು. ಹೀಗಾದಲ್ಲಿ ಮಾತ್ರ ಆರ್ ಸಿಬಿಗೆ ಪ್ಲೇ ಆಫ್ ಹಾದಿ ಸುಗಮವಾಗಲಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಏಕದಿನ ಕ್ರಿಕೆಟ್‌ನಲ್ಲಿ ಮೋಡಿ ಬೆನ್ನಲ್ಲೇ ಕೊಹ್ಲಿ ವೈಜಾಗ್‌ನ ಪ್ರಮುಖ ದೇವಸ್ಥಾನಕ್ಕೆ ಭೇಟಿ

ಕೊನೆಗೂ ಪಲಾಶ್ ಮುಚ್ಚಲ್ ಜತೆಗಿನ ಮದುವೆ ಬಗ್ಗೆ ಮೌನ ಮುರಿದ ಸ್ಮೃತಿ ಮಂಧಾನ

ಆರ್‌ಸಿಬಿ ಅಭಿಮಾನಿಗಳಿಗೆ ಗುಡ್‌ನ್ಯೂಸ್‌: ಬೆಂಗಳೂರಿನಿಂದ ಐಪಿಎಲ್‌ ಪಂದ್ಯ ಕೈತಪ್ಪಲ್ಲ ಎಂದ ಡಿಕೆಶಿ

ಜೈಸ್ವಾಲ್ ಕೇಕ್ ತಿನ್ನಿಸಲು ಹೋದ್ರೆ ರೋಹಿತ್ ಶರ್ಮಾ ಹೀಗೇ ನಡೆದುಕೊಳ್ಳುವುದಾ, Video

ವಿಕೆಟ್ ಪಡೆದ ಕುಲ್‌ದೀಪ್‌ ಜತೆ ಕಪಲ್ ಡ್ಯಾನ್ಸ್ ಮಾಡಿದ ಕಿಂಗ್ ಕೊಹ್ಲಿ, ವೈರಲ್ ವಿಡಿಯೋ

ಮುಂದಿನ ಸುದ್ದಿ
Show comments