Daily Horoscope
✕

ಐಪಿಎಲ್ 2023: ಸತತ ಎರಡನೇ ಬಾರಿಗೆ ಗುಜರಾತ್ ಫೈನಲ್ ಗೆ

Webdunia
ಶನಿವಾರ, 27 ಮೇ 2023 (08:30 IST)
ಅಹಮ್ಮದಾಬಾದ್: ಐಪಿಎಲ್ 2023 ರಲ್ಲಿ ಗುಜರಾತ್ ಟೈಟನ್ಸ್ ಫೈನಲ್ ಗೇರಿದೆ. ಮುಂಬೈ ಇಂಡಿಯನ್ಸ್ ವಿರುದ್ಧ 62 ರನ್ ಗಳ ಗೆಲುವು ಸಾಧಿಸಿದ ಗುಜರಾತ್ ಸತತ ಎರಡನೇ ಬಾರಿಗೆ ಫೈನಲ್ ತಲುಪಿದೆ.

ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಶುಬ್ಮನ್ ಗಿಲ್ ಅವರ ಭರ್ಜರಿ ಶತಕದ ನೆರವಿನಿಂದ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 233 ರನ್ ಗಳಿಸಿತು. ಗಿಲ್ ನಾಲ್ಕನೇ ಪಂದ್ಯದಲ್ಲಿ ಮೂರನೇ ಶತಕ ಸಿಡಿಸಿ ಮಿಂಚಿದರು. 60 ಎಸೆತಗಳಲ್ಲಿ 10 ಸಿಕ್ಸರ್ ಸಹಿತ 129 ರನ್ ಗಳಿಸಿ ಮುಂಬೈ ಬೌಲರ್ ಗಳನ್ನು ಗೋಳಾಡಿಸಿದರು. ಅವರಿಗೆ ಆರಂಭದಲ್ಲೇ ಸಿಕ್ಕ ಜೀವದಾನ ಮುಂಬೈಗೆ ದುಬಾರಿಯಾಯಿತು. ತಕ್ಕ ಸಾಥ್ ನೀಡಿದ ಸಾಯಿ ಸುದರ್ಶನ್ 43 ರನ್ ಗಳಿಸಿದರು.

ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಮುಂಬೈಗೆ ಆರಂಭಿಕರು ಕೈಕೊಟ್ಟರು. ಇಶಾನ್ ಕಿಶನ್ ಗಾಯಗೊಂಡಿದ್ದರಿಂದ ರೋಹಿತ್ ಶರ್ಮಾ ಜೊತೆಗೆ ನೆಹಾಲ್ ವಧೇರಾ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಕ್ಯಾಮರೂನ್ ಗ್ರೀನ್ 30, ಸೂರ್ಯಕುಮಾರ್ ಯಾದವ್ 61, ತಿಲಕ್ ವರ್ಮ 43 ರನ್ ಗಳಿಸಿದರು. ಈ ಮೂವರನ್ನು ಬಿಟ್ಟರೆ ಉಳಿದ ಎಲ್ಲರದ್ದು ಏಕಂಕಿ ಸಾಧನೆ. ಇದರಿಂದಾಗಿ ಮುಂಬೈ 18.2 ಓವರ್ ಗಳಲ್ಲಿ 171 ರನ್ ಗಳಿಗೆ ಆಲೌಟ್ ಆಯಿತು.  ಗುಜರಾತ್ ಪರ ಅತ್ಯುತ್ತಮ ಬೌಲಿಂಗ್ ಮಾಡಿದ ಮೋಹಿತ್ ಶರ್ಮಾ 5 ವಿಕೆಟ್ ಗಳ ಗೊಂಚಲು ಪಡೆದರು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

ಸ್ಮೃತಿ ಮಂಧಾನ, ಹರ್ಮನ್ ಪ್ರೀತ್ ಕೋಲ್ಡ್ ವಾರ್ ಇನ್ನೂ ನಿಂತಿಲ್ವಾ: ಮೈದಾನದಲ್ಲಿ ಇಬ್ಬರ ವರ್ತನೆಗೆ ಫ್ಯಾನ್ಸ್ ಶಾಕ್ Video

ತಣ್ಣೀರು ಕುಡೀಬೇಡಪ್ಪಾ… ವೈಭವ್ ಸೂರ್ಯವಂಶಿಗೆ ಮೈದಾನದಲ್ಲಿದ್ದ ಯುವತಿಯಿಂದ ಅಕ್ಕರೆಯ ಸಲಹೆ Video

IND vs NZ: ನ್ಯೂಜಿಲೆಂಡ್ ಬೌಲರ್ ಗಳ ಅಕ್ಷರಶಃ ಮರ್ಡರ್ ಮಾಡಿದ ಅಭಿಷೇಕ್, ವೈಭವ್: ಟೀಂ ಇಂಡಿಯಾ ಸ್ಕೋರ್ ಕಾರ್ಡ್ ನೋಡಿ ಶಾಕ್ Video

ಪತ್ನಿ ಜೊತೆ ಭಜನೆಗೆ ಎಷ್ಟು ಶಿಸ್ತಾಗಿ ಕೂತಿದ್ರು ನೋಡಿ ವಿರಾಟ್ ಕೊಹ್ಲಿ: ಅಂದು ಹೀಗೆ ಹೇಳಿದ್ದು ಇವರೇನಾ ಎಂದ ನೆಟ್ಟಿಗರು Video

ಕನ್ನಡಿಗ ಕ್ರಿಕೆಟಿಗ ದೇವದತ್ತ ಪಡಿಕ್ಕಲ್ ಗೆ ಇದೆಂಥಾ ಅನ್ಯಾಯ.. 199 ರನ್ ಗಳಿಸಿದ್ದಾಗ ಹೀಗೆ ಮಾಡೋದಾ.. Video

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮುಂದಿನ ಸುದ್ದಿ
Show comments