ಐಪಿಎಲ್ 2023 ರ ಫೈನಲ್: ಗುಜರಾತ್-ಚೆನ್ನೈ ನಡುವೆ ಗೆಲುವು ಯಾರಿಗೆ?

Webdunia
ಭಾನುವಾರ, 28 ಮೇ 2023 (07:30 IST)
Photo Courtesy: Twitter
ಅಹಮ್ಮದಾಬಾದ್: ಐಪಿಎಲ್ 2023 ರ ಫೈನಲ್ ಪಂದ್ಯ ಇಂದು ನರೇಂದ್ರ ಮೋದಿ ಮೈದಾನದಲ್ಲಿ ನಡೆಯಲಿದ್ದು, ಸಿಎಸ್ ಕೆ ಮತ್ತು ಗುಜರಾತ್ ಟೈಟನ್ಸ್ ಮುಖಾಮುಖಿಯಾಗಲಿದೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡ 10 ನೇ ಬಾರಿ ಫೈನಲ್ ಪ್ರವೇಶಿಸಿದ್ದು ಐದನೇ ಬಾರಿಗೆ ಚಾಂಪಿಯನ್ ಆಗಿ ಮುಂಬೈ ದಾಖಲೆಯನ್ನು ಸರಿಗಟ್ಟುವ ಉತ್ಸಾಹದಲ್ಲಿದೆ. ಇದುವರೆಗೆ ನಡೆದ ಪಂದ್ಯದಲ್ಲಿ ಸಿಎಸ್ ಕೆ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ತನ್ನ ಸಾಮರ್ಥ್ಯ ಸಾಬೀತುಪಡಿಸಿದೆ. ಋತುರಾಜ್ ಗಾಯಕ್ ವಾಡ್, ರವೀಂದ್ರ ಜಡೇಜಾ ಚೆನ್ನೈ ಶಕ್ತಿಯಾಗಿದ್ದಾರೆ.

ಇತ್ತ ಗುಜರಾತ್ ಟೈಟನ್ಸ್ ಇದು ಎರಡನೇ ಬಾರಿಗೆ ಸತತವಾಗಿ ಫೈನಲ್ ಪ್ರವೇಶಿಸಿದ ದಾಖಲೆ ಮಾಡಿದೆ. ಕಳೆದ ಬಾರಿ ಚೊಚ್ಚಲ ಆವೃತ್ತಿಯಲ್ಲೇ ಚಾಂಪಿಯನ್ ಆಗಿ ಮೆರೆದಿದ್ದ ಹಾರ್ದಿಕ್ ಪಾಂಡ್ಯ ಪಡೆ ಮತ್ತೊಮ್ಮೆ ಚಾಂಪಿಯನ್ ಆಗುವ ಕನಸು ಹೊತ್ತಿದೆ. ಟೀಂ ಇಂಡಿಯಾದ ಭವಿಷ್ಯದ ನಾಯಕ ಎಂದೇ ಬಿಂಬಿತವಾಗಿರುವ ಹಾರ್ದಿಕ್ ಗೆ ಮತ್ತೆ ಐಪಿಎಲ್ ಗೆದ್ದು ಟೀಂ ಇಂಡಿಯಾ ನಾಯಕತ್ವ ಪಟ್ಟದ ಹಾದಿ ಸುಗಮವಾಗಿಸಬಹುದು. ಗುಜರಾತ್ ಟೈಟನ್ಸ್ ಗೆ ಬ್ಯಾಟಿಂಗ್ ನಲ್ಲಿ ಶುಬ್ಮನ್ ಗಿಲ್ ಆಧಾರ ಸ್ತಂಬ. ಗಿಲ್ ಏಕಾಂಗಿಯಾಗಿ ಪಂದ್ಯ ಗೆಲ್ಲಿಸುವ ಸಾಮರ್ಥ್ಯ ಹೊಂದಿದ್ದಾರೆ. ಜೊತೆಗೆ ಫಿನಿಶರ್ ಆಗಿ ರಶೀದ್ ಖಾನ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಬೌಲಿಂಗ್ ನಲ್ಲಿ ಕೂಡಾ ಗುಜರಾತ್ ಪ್ರಬಲವಾಗಿದೆ. ಆದರೆ ಪ್ಲೇ ಆಫ್ ಪಂದ್ಯದಲ್ಲಿ ಗುಜರಾತ್ ಚೆನ್ನೈ ವಿರುದ್ಧ ಸೋತಿತ್ತು. ಹೀಗಾಗಿ ಸಿಎಸ್ ಕೆ ವಿರುದ್ಧ ಆಲ್ ರೌಂಡರ್ ಪ್ರದರ್ಶನ ನೀಡಲೇಬೇಕಿದೆ. ಈ ಪಂದ್ಯ ಸಂಜೆ 7.30 ಕ್ಕೆ ನಡೆಯುವುದು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs NZ: ಮೊದಲ ಪಂದ್ಯ ಗೆದ್ದಿರುವ ಭಾರತ ತಂಡದಲ್ಲಿ ಇಂದು ಎರಡು ಬದಲಾವಣೆ

ಭಾರತದಲ್ಲಿ ಆಡಲ್ಲ ಎಂದ ಬಾಂಗ್ಲಾದೇಶಕ್ಕೆ ತಕ್ಕ ಪಾಠ ಕಲಿಸಿದ ಐಸಿಸಿ

IPL 2026: ಆರ್ ಸಿಬಿ ಬೆಂಗಳೂರಿನಲ್ಲಿ ಆಡಲು ಹಿಂದೇಟು ಹಾಕುತ್ತಿರುವುದು ಇದೇ ಕಾರಣಕ್ಕೆ

IND vs NZ: ಟೀಂ ಇಂಡಿಯಾ, ನ್ಯೂಜಿಲೆಂಡ್ ಎರಡನೇ ಟಿ20 ಇಂದು, ಎಷ್ಟು ಗಂಟೆಗೆ ಆರಂಭ ನೋಡಿ

ಆರ್ ಸಿಬಿಗೆ ಒಡತಿಯಾಗಲು ಹೊರಟ ಅನುಷ್ಕಾ ಶರ್ಮಾ

ಮುಂದಿನ ಸುದ್ದಿ
Show comments