ಐಪಿಎಲ್ 2023: ಐದನೇ ಬಾರಿಗೆ ಚೆನ್ನೈಗೆ ಐಪಿಎಲ್ ಕಿರೀಟ

Webdunia
ಮಂಗಳವಾರ, 30 ಮೇ 2023 (07:10 IST)
ಅಹಮ್ಮದಾಬಾದ್: ಐಪಿಎಲ್ ನಲ್ಲಿ ಮತ್ತೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ ಆಧಿಪತ್ಯ ಸಾಧಿಸಿದೆ. ಗುಜರಾತ್ ಟೈಟನ್ಸ್ ವಿರುದ್ಧ 5 ವಿಕೆಟ್ ಗಳ ರೋಚಕ ಗೆಲುವು ಸಾಧಿಸಿದ ಚೆನ್ನೈ ಐದನೇ ಬಾರಿಗೆ ಚಾಂಪಿಯನ್ ಆಯಿತು.

ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಸಾಯಿ ಸುದರ್ಶನ್ 96 ರನ್ ಗಳ ನೆರವಿನಿಂದ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 212 ರನ್ ಗಳ ಬೃಹತ್ ಮೊತ್ತ ಪೇರಿಸಿತು. ಇದಕ್ಕೆ ಉತ್ತರವಾಗಿ ಚೆನ್ನೈ ಬ್ಯಾಟಿಂಗ್ ಆರಂಭಿಸುತ್ತಿದ್ದಂತೇ ಮಳೆ ಸುರಿಯಿತು. ಹೀಗಾಗಿ ಡಕ್ ವರ್ತ್ ಲೂಯಿಸ್ ನಿಯಮದ ಪ್ರಕಾರ 15 ಓವರ್ ಗಳಲ್ಲಿ 171 ರನ್ ಗಳಿಸುವ ಗುರಿ ನೀಡಲಾಯಿತು.

ಚೆನ್ನೈ ಪರ ಪ್ರತಿಯೊಬ್ಬರೂ ಉಪಯುಕ್ತ ಕಾಣಿಕೆ ನೀಡಿದರು. ಋತುರಾಜ್ ಗಾಯಕ್ ವಾಡ್ 26, ಡ್ವಾನ್ ಕಾನ್ವೇ 47, ಶಿವಂ ದುಬೆ ಅಜೇಯ 32, ಅಜಿಂಕ್ಯಾ ರೆಹಾನ್ 27, ಅಂಬಟಿ ರಾಯುಡು 19 ರನ್ ಗಳಿಸಿದರು. ಆದರೆ ನಾಯಕ ಧೋನಿ ಮಾತ್ರ ಬಂದ ಬಾಲ್ ಗೇ ಔಟಾಗಿ ನಿರಾಸೆ ಅನುಭವಿಸಿದರು. ಆದರೆ ಒತ್ತಡದಲ್ಲಿದ್ದ ಚೆನ್ನೈಗೆ ಗೆಲುವು ಕೊಡಿಸಿದ್ದು ರವೀಂದ್ರ ಜಡೇಜಾ. ಕೊನೆಯ ಎರಡು ಎಸೆತದಲ್ಲಿ ಒಂದು ಬೌಂಡರಿ, ಒಂದು ಸಿಕ್ಸರ್ ಗಳೊಂದಿಗೆ ಚೆನ್ನೈ ಗೆಲುವು ಸಾಧ್ಯವಾಗಿಸಿದರು. ಅಂತಿಮವಾಗಿ ಸಿಎಸ್ ಕೆ 15 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿತು. ಇದರೊಂದಿಗೆ ಧೋನಿ ಪಡೆ ಸಂಭ್ರಮ ಮುಗಿಲುಮುಟ್ಟಿತ್ತು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND- SA 2nd ODI: ವಿರಾಟ್‌, ಋತುರಾಜ್‌ ಶತಕ ವ್ಯರ್ಥ; ರನ್‌ ಮಳೆಯಲ್ಲಿ ಗೆದ್ದು ಬೀಗಿದ ದಕ್ಷಿಣ ಆಫ್ರಿಕಾ,

ಶತಕದ ಬೆನ್ನಲ್ಲೇ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಕೊಹ್ಲಿಗೆ ಬಡ್ತಿ: ಅಗ್ರಸ್ಥಾನದಲ್ಲಿ ರೋಹಿತ್‌ ಶರ್ಮಾ

ವಿರಾಟ್‌ ಕೊಹ್ಲಿ ದಾಖಲೆಯ 53ನೇ ಏಕದಿನ ಶತಕ: ಟೀಕಾಕಾರರಿಗೆ ಬ್ಯಾಟ್‌ ಮೂಲಕವೇ ಉತ್ತರ

ಐಸಿಸಿ ನೀತಿ ಸಂಹಿತೆ ಉಲ್ಲಂಘನೆಗಾಗಿ ವಾಗ್ದಂಡನೆಗೆ ಗುರಿಯಾದ ಗಂಭೀರ್‌ ಮಾನಸಪುತ್ರ ಹರ್ಷಿತ್ ರಾಣಾ

IND vs SA ODI: ದಾಖಲೆಯ 20ನೇ ಬಾರಿ ಟಾಸ್ ಸೋತ ಭಾರತ: ದ.ಆಫ್ರಿಕಾ ತಂಡದಲ್ಲಿ ಮೂರು ಬದಲಾವಣೆ

ಮುಂದಿನ ಸುದ್ದಿ
Show comments