Select Your Language

Notifications

webdunia
webdunia
webdunia
webdunia

ಮಹಿಳಾ ಕ್ರಿಕೆಟಿಗರೂ ತಾವೇನು ಕಮ್ಮಿಯಿಲ್ಲವೆಂದು ತೋರಿಸಿದ್ದಾರೆ ನೋಡಿ

ಮಹಿಳಾ ಕ್ರಿಕೆಟಿಗರೂ ತಾವೇನು ಕಮ್ಮಿಯಿಲ್ಲವೆಂದು ತೋರಿಸಿದ್ದಾರೆ ನೋಡಿ
ಬ್ಯಾಂಕಾಕ್ , ಶುಕ್ರವಾರ, 2 ಡಿಸೆಂಬರ್ 2016 (09:34 IST)
ಬ್ಯಾಂಕಾಕ್: ಭಾರತದ ಮಹಿಳಾ ಕ್ರಿಕೆಟಿಗರು ಪುರುಷ ಕ್ರಿಕೆಟಿಗರಿಗಿಂತ ತಾವೇನೂ ಕಡಿಮೆಯಿಲ್ಲ ಎಂದು ತೋರಿಸಿಕೊಂಡಿದ್ದಾರೆ. ಬ್ಯಾಕಾಂಕ್ ನಲ್ಲಿ  ನಡೆಯುತ್ತಿರುವ ಮಹಿಳಾ ಟಿ-ಟ್ವೆಂಟಿ ಏಷ್ಯಾ ಕಪ್ ನಲ್ಲಿ ಶ್ರೀಲಂಕಾ ತಂಡವನ್ನು 52 ರನ್ನುಗಳಿಂದ ಸೋಲಿಸಿ ಫೈನಲ್ ಗೆ ಲಗ್ಗೆಯಿಟ್ಟಿದ್ದಾರೆ.

ಹಾಲಿ ಚಾಂಪಿಯನ್ ಆಗಿರುವ ಇದು ಭಾರತಕ್ಕೆ ಸತತ ನಾಲ್ಕನೇ ಜಯವಾಗಿದ್ದು, ಈ ಬಾರಿಯೂ ಪ್ರಶಸ್ತಿ ಗೆಲ್ಲುವ ಫೇವರೇಟ್ ಎನಿಸಿಕೊಂಡಿದೆ. ಸೆಮಿಫೈನಲ್ ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ನಿಗದಿತ 20 ಓವರ್ ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು 121 ರನ್ ಗಳಿಸಿತ್ತು.

ಆದರೆ ಲಂಕಾ 20 ಓವರ್ ಗಳಲ್ಲಿ 69 ರನ್ ಗಳಿಸಲಷ್ಟೇ ಶಕ್ತವಾಯಿತು. ಭಾರತದ ಪರ ಮಾಜಿ ನಾಯಕಿ ಮಿಥಾಲಿ ರಾಜ್ 59 ಎಸೆತಗಳಿಂದ 62 ರನ್ ಗಳಿಸಿದರು. ಇಂದು ಭಾರತ ನೇಪಾಳ ವಿರುದ್ಧ ಫೈನಲ್ ಪಂದ್ಯವನ್ನು ಆಡಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಇನ್ನು ಶಾಲೆಗಳಲ್ಲಿ ಕ್ರೀಡಾ ಪರೀಕ್ಷೆಯಲ್ಲೂ ಪಾಸಾಗಬೇಕು