Select Your Language

Notifications

webdunia
webdunia
webdunia
webdunia

ಗ್ಲೆನ್ ಮ್ಯಾಕ್ಸ್‌ವೆಲ್ ಬಿರುಸಿನ 32: ಕಿಂಗ್ಸ್ ಇಲೆವನ್‌ಗೆ ಪುಣೆ ವಿರುದ್ಧ ಜಯ

ಗ್ಲೆನ್ ಮ್ಯಾಕ್ಸ್‌ವೆಲ್ ಬಿರುಸಿನ 32: ಕಿಂಗ್ಸ್ ಇಲೆವನ್‌ಗೆ ಪುಣೆ ವಿರುದ್ಧ ಜಯ
ಮೊಹಾಲಿ: , ಸೋಮವಾರ, 18 ಏಪ್ರಿಲ್ 2016 (11:47 IST)
ಮೊಹಾಲಿಯಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ವೇಗದ 14 ಎಸೆತಗಳಲ್ಲಿ ಅಜೇಯ 32 ರನ್ ನೆರವಿನಿಂದ ತೀವ್ರ ಒತ್ತಡದಲ್ಲಿದ್ದ ಕಿಂಗ್ಸ್ ಇಲೆವನ್ ಪಂಜಾಬ್ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ವಿರುದ್ಧ 6 ವಿಕೆಟ್ ಜಯಗಳಿಸಿದೆ. 153 ರನ್ ಗುರಿಯನ್ನು ಬೆನ್ನಟ್ಟಿದ ಕಿಂಗ್ಸ್ ಇಲೆವನ್ 17ನೇ ಓವರಿನಲ್ಲಿ 4 ವಿಕೆಟ್ ಕಳೆದುಕೊಂಡು 119 ರನ್ ಗಳಿಸಿತ್ತು. ಮನನ್ ವೋರ್ಹಾ(51) ಮತ್ತು ಮುರಳಿ ವಿಜಯ್ (53) ಅವರು 97 ರನ್ ಆರಂಭಿಕ ಜತೆಯಾಟ ನೀಡಿದರು. 
 
 
ಕಿಂಗ್ಸ್ ಇಲೆವನ್ ಸೋಲಿನ ದವಡೆಯಲ್ಲಿದ್ದಾಗ, ಮ್ಯಾಕ್ಸ್‌ವೆಲ್ ತಮ್ಮ ಸ್ಫೋಟಕ ಬ್ಯಾಟಿಂಗ್ ಕೌಶಲ್ಯವನ್ನು ತೋರಿಸಿ ಮೂರು ಬೌಂಡರಿಗಳು ಮತ್ತು ಎರಡು ಸಿಕ್ಸರುಗಳನ್ನು ಬಾರಿಸಿದರು.  ಮ್ಯಾಕ್ಸ್‌ವೆಲ್ ಮತ್ತು ವೃದ್ಧಿಮಾನ್ ಸಹಾ ನಡುವೆ 34 ರನ್ ಜತೆಯಾಟದಲ್ಲಿ  ಕಿಂಗ್ಸ್ ಇಲೆವನ್ ವಿಕೆಟ್ ಕೀಪರ್ ಕೇವಲ 4 ರನ್ ಗಳಿಸಿದ್ದರು.
 
 ಇದಕ್ಕೆ ಮುಂಚೆ ಪುಣೆ ಸೂಪರ್‌ಜೈಂಟ್ಸ್ 152ಕ್ಕೆ 7 ವಿಕೆಟ್ ಬಾರಿಸಿ ಪ್ಲೆಸಿಸ್ 67 ರನ್ ಸಿಡಿಸಿದ್ದರು. ಮೋಹಿತ್ ಶರ್ಮಾ 3 ವಿಕೆಟ್ ಮತ್ತು ಸಂದೀಪ್ ಶರ್ಮಾ 2 ವಿಕೆಟ್ ಕಬಳಿಸಿದ್ದರು. ಕೈಲ್ ಅಬಾಟ್ ಅವರಿಗೆ ಒಂದು ವಿಕೆಟ್ ದಕ್ಕಿತ್ತು. 

Share this Story:

Follow Webdunia kannada