Select Your Language

Notifications

webdunia
webdunia
webdunia
webdunia

ಅಶ್ವಿನ್ ಮಾರಕ ಸ್ಪಿನ್ ದಾಳಿ: ಶ್ರೀಲಂಕಾ ವಿರುದ್ಧ ಭಾರತಕ್ಕೆ ಐತಿಹಾಸಿಕ ಸರಣಿ ಜಯ

ಅಶ್ವಿನ್ ಮಾರಕ ಸ್ಪಿನ್ ದಾಳಿ: ಶ್ರೀಲಂಕಾ ವಿರುದ್ಧ ಭಾರತಕ್ಕೆ ಐತಿಹಾಸಿಕ ಸರಣಿ  ಜಯ
ಕೊಲಂಬೊ , ಮಂಗಳವಾರ, 1 ಸೆಪ್ಟಂಬರ್ 2015 (16:20 IST)
ಭಾರತ ಮತ್ತು ಶ್ರೀಲಂಕಾ ನಡುವೆ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ಐತಿಹಾಸಿಕ ಗೆಲುವು ದಾಖಲಿಸಿದೆ. ಭಾರತ 2-1ಅಂತರದಿಂದ ಸರಣಿ ಗೆದ್ದು 22 ವರ್ಷಗಳ ನಂತರ ಶ್ರೀಲಂಕಾ ನೆಲದಲ್ಲಿ ಸರಣಿ ಜಯವನ್ನು ಸಾಧಿಸಿದೆ. ರವಿಚಂದ್ರನ್ ಅಶ್ವಿನ್ ಮತ್ತು ಇಶಾಂತ್ ಶರ್ಮಾ ಅವರ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಶ್ರೀಲಂಕಾ ಎರಡನೇ ಇನ್ನಿಂಗ್ಸ್‌ನಲ್ಲಿ 201ರನ್‌ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡು ಸೋಲಪ್ಪಿದೆ.

ಒಂದು ಹಂತದಲ್ಲಿ ಶ್ರೀಲಂಕಾ 6 ವಿಕೆಟ್ ಕಳೆದುಕೊಂಡು 242 ರನ್ ಗಳಿಸಿತ್ತು. ಆದರೆ ಬಳಿಕ ಶ್ರೀಲಂಕಾ ಸ್ಕೋರ್ 277 ರನ್‌ಗಳಾಗಿದ್ದಾಗ ಮನೋಜ್ಞ ಶತಕ ಬಾರಿಸಿದ್ದ ಮ್ಯಾಥೀವ್ಸ್ 110 ರನ್‌ಗಳಿಸಿ ಔಟಾದ ಬಳಿಕ ಉಳಿದ ವಿಕೆಟ್‌ಗಳು ಬೇಗನೇ ಉರುಳಿದವು. ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 312 ರನ್‌ಗಳಿಗೆ ಆಲೌಟಾಗಿತ್ತು. ಚೊಚ್ಚಲ ಟೆಸ್ಟ್ ಆಡಿದ್ದ ಪೂಜಾರಾ 145 ರನ್ ಮಾಡಿ ಏಕಾಂಗಿಯಾಗಿ ಹೋರಾಡಿದ್ದರು.

ಮೊದಲ ಇನ್ನಿಂಗ್ಸ್‌ನಲ್ಲಿ ಶ್ರೀಲಂಕಾ  ಇಶಾಂತ್ ಶರ್ಮಾ ಅವರ 5 ವಿಕೆಟ್‌ ಮಾರಕ ಬೌಲಿಂಗ್ ದಾಳಿಗೆ ಗುರಿಯಾಗಿ 201ರನ್‌ಗಳಿಗೆ ಆಲೌಟ್ ಆಗಿತ್ತು. ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ 274 ರನ್ ಗಳಿಸಿತ್ತು.  ಶ್ರೀಲಂಕಾ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 268 ರನ್ ಗಳಿಸಲು ಸಾಧ್ಯವಾಗಿ 117 ರನ್ ‌ಗಳಿಂದ ಸೋಲಪ್ಪಿದೆ. ಎರಡನೇ ಇನ್ನಿಂಗ್ಸ್‌ನಲ್ಲಿ ಇಶಾಂತ್ 3 ವಿಕೆಟ್ ಮತ್ತು ಅಶ್ವಿನ್ 4 ವಿಕೆಟ್ ಕಬಳಿಸಿದರು. ಅಮಿತ್ ಮಿಶ್ರಾ ಮತ್ತು ಉಮೇಶ್ ಯಾದವ್ ತಲಾ ಒಂದು ಮತ್ತು ಎರಡು ವಿಕೆಟ್ ಗಳಿಸಿದರು. 

Share this Story:

Follow Webdunia kannada