Select Your Language

Notifications

webdunia
webdunia
webdunia
webdunia

2ನೇ ಟಿ20 ಗೆದ್ದ ಭಾರತಕ್ಕೆ ಆಸ್ಟ್ರೇಲಿಯಾ ವಿರುದ್ಧ ಸರಣಿ ಜಯ

2ನೇ ಟಿ20 ಗೆದ್ದ ಭಾರತಕ್ಕೆ ಆಸ್ಟ್ರೇಲಿಯಾ ವಿರುದ್ಧ ಸರಣಿ ಜಯ
ಮೆಲ್ಬೋರ್ನ್: , ಶುಕ್ರವಾರ, 29 ಜನವರಿ 2016 (18:03 IST)
ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಎರಡನೇ ಟಿ 20 ಪಂದ್ಯದಲ್ಲಿ ಕೂಡ ಭಾರತ 27 ರನ್‌ಗಳಿಂದ ಜಯಭೇರಿ ಬಾರಿಸುವ ಮೂಲಕ ಟಿ 20 ಸರಣಿಯನ್ನು ಗೆದ್ದುಕೊಂಡಿದೆ.

ಮೊದಲ ಪಂದ್ಯವನ್ನೂ ಗೆದ್ದಿದ್ದ ಭಾರತ ಸರಣಿಯಲ್ಲಿ 2-0ಯಿಂದ ಮುನ್ನಡೆ ಸಾಧಿಸುವ ಮೂಲಕ ಸರಣಿಯನ್ನು ಬುಟ್ಟಿಗೆ ಹಾಕಿಕೊಂಡಿತು.  ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ನಡೆದ ಟಿ 20 ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ಭಾರತದ 3 ವಿಕೆಟ್‌ಗೆ 184 ರನ್ ಸ್ಕೋರಿಗೆ ಉತ್ತರವಾಗಿ ಆಸ್ಟ್ರೇಲಿಯಾ 8 ವಿಕೆಟ್‌ಗೆ 20 ಓವರುಗಳಲ್ಲಿ 157 ರನ್ ಮಾತ್ರ ಗಳಿಸಲು ಸಾಧ್ಯವಾಯಿತು.

ಭಾರತ ಟಿ ಟ್ವೆಂಟಿ ಸರಣಿ ಗೆಲುವಿನ ಮೂಲಕ ಏಕ ದಿನ ಪಂದ್ಯಾವಳಿಯಲ್ಲಿ 4-1ರ ಸೋಲಿನ ಸೇಡನ್ನು ತೀರಿಸಿಕೊಂಡಿದೆ. ಭಾರತದ ಪರ ಬೂಮ್ರಾ ಮತ್ತು ಜಡೇಜಾಗೆ ತಲಾ ಎರಡು ವಿಕೆಟ್ ಲಭ್ಯವಾಗಿದೆ. 

Share this Story:

Follow Webdunia kannada