Select Your Language

Notifications

webdunia
webdunia
webdunia
webdunia

ಟಿ 20 ಸರಣಿಯಲ್ಲಿ ಆಸ್ಟ್ರೇಲಿಯಾ ವಾಷ್‌ಔಟ್: 3ನೇ ಪಂದ್ಯವನ್ನೂ ಗೆದ್ದ ಭಾರತ

ಟಿ 20 ಸರಣಿಯಲ್ಲಿ ಆಸ್ಟ್ರೇಲಿಯಾ ವಾಷ್‌ಔಟ್: 3ನೇ ಪಂದ್ಯವನ್ನೂ ಗೆದ್ದ ಭಾರತ
ಸಿಡ್ನಿ: , ಭಾನುವಾರ, 31 ಜನವರಿ 2016 (17:36 IST)
ಕೊನೆಯ ಓವರಿನಲ್ಲಿ ಭಾರತಕ್ಕೆ 17 ರನ್ ಬೇಕಾಗಿತ್ತು. ಸ್ಫೋಟಕ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ ಅವರು ಒಂದು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿದರು. ಕೊನೆಯ ಎಸೆತದಲ್ಲಿ ಸುರೇಶ್ ರೈನಾ ಗೆಲುವಿನ ಬೌಂಡರಿ ಬಾರಿಸುವ ಮೂಲಕ  ಭಾರತ ರೋಮಾಂಚಕ ಗೆಲುವನ್ನು ಗಳಿಸಿ ಮೂಲಕ ಆಸ್ಟ್ರೇಲಿಯಾವನ್ನು ಟಿ20ಯಲ್ಲಿ ವಾಷ್ ಔಟ್ ಮಾಡಿತು.

ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಮೂರನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾದ 197 ಬೃಹತ್ ಮೊತ್ತವನ್ನು ಬೆನ್ನಟ್ಟಿದ ಭಾರತ ರೋಹಿತ್ ಶರ್ಮಾ ಅವರ ಬಿರುಸಿನ 38 ಎಸೆತಗಳಲ್ಲಿ 52 ರನ್ ಮತ್ತು ವಿರಾಟ್ ಕೊಹ್ಲಿಯ 36 ಎಸೆತಗಳಲ್ಲಿ 50 ರನ್ ನೆರವಿನಿಂದ ಹಾಗೂ ಕಡೆಯ ಓವರುಗಳಲ್ಲಿ ಸುರೇಶ್ ರೈನಾ ಮತ್ತು ಯುವರಾಜ್ ಸಿಂಗ್ ಅವರ ಬಿರುಸಿನ ಹೊಡೆತಗಳಿಂದ 200 ರನ್ ಬಾರಿಸಿ ಗೆಲುವಿನ ಗುರಿಯನ್ನು ಮುಟ್ಟಿತು.

ಸುರೇಶ್ ರೈನಾ 25 ಎಸೆತಗಳಲ್ಲಿ 49 ರನ್ ಮಾಡಿ ಅಜೇಯರಾಗಿ ಉಳಿದರು.  ಆರಂಭದಲ್ಲೇ ವೇಗದಲ್ಲಿ ರನ್ ಬಾರಿಸಲು ಆರಂಭಿಸಿದ ಟೀಂ ಇಂಡಿಯಾ ಓವರಿಗೆ 10 ರನ್‌ಗಳಿಗಿಂತ ಹೆಚ್ಚು ಸರಾಸರಿಯನ್ನು ಉಳಿಸಿಕೊಂಡು ಬಂದಿತ್ತು. ಮೊದಲಿಗೆ ಬ್ಯಾಟಿಂಗ್ ಆಡಿದ ಆಸ್ಟ್ರೇಲಿಯಾ ಪರ ಶೇನ್ ವಾಟ್ಸನ್ ಅವರ ಬಿರುಸಿನ 71 ಎಸೆತಗಳಲ್ಲಿ 124 ರನ್ ನೆರವಿನಿಂದ  5ವಿಕೆಟ್ ಕಳೆದುಕೊಂಡು 197 ರನ್ ಮಾಡಿತು. ಆಶಿಶ್ ನೆಹ್ರಾ, ಬಮ್ರಾ, ಅಶ್ವಿನ್, ರವೀಂದ್ರ ಜಡೇಜಾ, ಯುವರಾಜ್ ಸಿಂಗ್ ತಲಾ ಒಂದು ವಿಕೆಟ್ ಕಬಳಿಸಿದರು. 

Share this Story:

Follow Webdunia kannada