Webdunia - Bharat's app for daily news and videos

Install App

ಮಹಿಳಾ ವಿಶ್ವಕಪ್: ಒಂದು ನೋ ಬಾಲ್ ಭಾರತದ ಕನಸೇ ಭಗ್ನಗೊಳಿಸಿತು!

Webdunia
ಭಾನುವಾರ, 27 ಮಾರ್ಚ್ 2022 (16:34 IST)
ಕ್ರಿಸ್ಟ್ ಚರ್ಚ್: ದ.ಆಫ್ರಿಕಾ ವಿರುದ್ಧ ಇಂದು ಮಹಿಳಾ ಏಕದಿನ ವಿಶ್ವಕಪ್ ನಲ್ಲಿ ಕೊನೆಯ ಬಾಲ್ ನಲ್ಲಿ ಸೋತ ಭಾರತ ತಂಡದ ಸೆಮಿಫೈನಲ್ ಕನಸು ಭಗ್ನವಾಗಿದೆ.

ಇಂದಿನ ಪಂದ್ಯ ಗೆದ್ದರೆ ಭಾರತಕ್ಕೆ ಸೆಮಿಫೈನಲ್ ನಲ್ಲಿ ಆಡುವ ಅರ್ಹತೆ ಸಿಗುತ್ತಿತ್ತು. ಕೊನೆಯವರೆಗೂ ಈ ಆಸೆ ಜೀವಂತವಾಗಿಯೇ ಇತ್ತು. ಆದರೆ ರೋಚಕವಾಗಿ ಕೊನೆಗೊಂಡ ಕೊನೆಯ ಓವರ್ ನಲ್ಲಿ ದೀಪ್ತಿ ಶರ್ಮಾ ಎಸೆದ ಆ ಒಂದು ನೋ ಬಾಲ್ ಮಿಥಾಲಿ ಪಡೆ ವಿಶ್ವಕಪ್ ನಿಂದಲೇ ಹೊರಬೀಳುವಂತೆ ಮಾಡಿತು.

ಗೆಲುವಿಗೆ ಭಾರತ ನೀಡಿದ 276 ರನ್ ಗಳ ಗುರಿ ಬೆನ್ನತ್ತಿದ್ದ ದ.ಆಫ್ರಿಕಾ ಉತ್ತಮ ಬ್ಯಾಟಿಂಗ್ ನಡೆಸಿತು. ಹಾಗಿದ್ದರೂ ಕೊನೆಯ 10 ಓವರ್ ನಲ್ಲಿ ಬಾಲ್ ಮತ್ತು ರನ್ ನಡುವೆ ಸುಮಾರು 20 ರನ್ ಗಳ ವ್ಯತ್ಯಾಸವಿತ್ತು. ಹೀಗಾಗಿ ಭಾರತೀಯರು ಗೆಲ್ಲಬಹುದುಎಂಬುದೇ ಎಲ್ಲರ ಲೆಕ್ಕಾಚಾರವಾಗಿತ್ತು.

ಅಂತಿಮ ಓವರ್ ನಲ್ಲಿ 6 ಎಸೆತಗಳಿಂದ 7 ರನ್ ಬೇಕಾಗಿತ್ತು. ಈ ವೇಳೆ ದ್ವಿತೀಯ ಎಸೆತದಲ್ಲಿ ದೀಪ್ತಿ ಎದುರಾಳಿ ಆಟಗಾರ್ತಿ ಪ್ರೀಝ್ ವಿಕೆಟ್ ಪಡೆದರು.  ಮೂರನೇ ಎಸೆತದಲ್ಲಿ ಕೇವಲ 1 ರನ್ ಬಂತು. ಕೊನೆಯ ಎರಡು ಎಸೆತಗಳಲ್ಲಿ 3 ರನ್ ಬೇಕಾಗಿತ್ತು. ನಾಲ್ಕನೇ ಎಸೆತದಲ್ಲಿ ದೀಪ್ತಿ ಮತ್ತೊಂದು ವಿಕೆಟ್ ಕಿತ್ತರು ಎಂದೇ ಎಲ್ಲರೂ ಸಂಭ್ರಮಿಸಿದ್ದರು. ಆದರೆ ಆ ಎಸೆತ ನೋ ಬಾಲ್ ಆಗಿತ್ತು. ಇದುವೇ ಟರ್ನಿಂಗ್ ಪಾಯಿಂಟ್ ಆಯಿತು. ಈ ಒಂದು ತಪ್ಪಿನಿಂದಾಗಿ ಆಫ್ರಿಕಾ ಕೊನೆಯ ಎಸೆತದಲ್ಲಿ 1 ರನ್ ಗಳಿಸಿ 3 ವಿಕೆಟ್ ಗಳ ರೋಚಕ ಗೆಲುವು ಕಂಡಿತು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments