Select Your Language

Notifications

webdunia
webdunia
webdunia
webdunia

ಸತತ ಟೆಸ್ಟ್ ಸರಣಿ ಗೆಲುವನ್ನು ಕಂಡ ದಕ್ಷಿಣ ಆಫ್ರಿಕಾಗೆ ಸೋಲಿನ ಭೀತಿ

ಸತತ ಟೆಸ್ಟ್ ಸರಣಿ ಗೆಲುವನ್ನು ಕಂಡ ದಕ್ಷಿಣ ಆಫ್ರಿಕಾಗೆ ಸೋಲಿನ ಭೀತಿ
ನಾಗ್ಪುರ , ಮಂಗಳವಾರ, 24 ನವೆಂಬರ್ 2015 (17:14 IST)
ದಕ್ಷಿಣ ಆಫ್ರಿಕಾ ವಿದೇಶಿ ನೆಲದಲ್ಲಿ 10 ಟೆಸ್ಟ್ ಸರಣಿ ಜಯಗಳಿಸಿದ 9 ವರ್ಷದ ಸತತ ದಾಖಲೆಗೆ ಭಾರತ ಗಂಭೀರ ಅಪಾಯವನ್ನು ಒಡ್ಡಿದೆ. ಉಭಯ ತಂಡಗಳು ನಾಗ್ಪುರದ ಜಾಮ್ತಾದ ವಿಸಿಎ ಕ್ರೀಡಾಂಗಣದಲ್ಲಿ ಮೂರನೇ ಟೆಸ್ಟ್ ಪಂದ್ಯದಲ್ಲಿ ನಾಳೆ ಮುಖಾಮುಖಿಯಾಗಲಿದ್ದು, 2006ರಲ್ಲಿ ಶ್ರೀಲಂಕಾ ವಿರುದ್ಧ 0-2ರಲ್ಲಿ ಸೋತ ಬಳಿಕ ದಕ್ಷಿಣ ಆಫ್ರಿಕಾ ವಿದೇಶದಲ್ಲಿ ಯಾವುದೇ ಟೆಸ್ಟ್ ಸರಣಿಯನ್ನು ಸೋತಿರಲಿಲ್ಲ.

 ದಕ್ಷಿಣ ಆಫ್ರಿಕಾದ ಗೆಲವುಗಳಲ್ಲಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ 2008-09 ಮತ್ತು 2012-13ರಲ್ಲಿ ಎರಡು ಸರಣಿಗಳಲ್ಲಿ ಗೆಲುವು, ಇಂಗ್ಲೆಂಡ್ , ವೆಸ್ಟ್ ಇಂಡೀಸ್, ನ್ಯೂಜಿಲೆಂಡ್, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಜಿಂಬಾಬ್ವೆ ವಿರುದ್ದ ತಲಾ ಒಂದು ಗೆಲುವುಗಳನ್ನು ಗಳಿಸಿದ್ದರು. ಗಮನಾರ್ಹ ಸಂಗತಿಯೆಂದರೆ, 
ದಕ್ಷಿಣ ಆಫ್ರಿಕಾ ಹಿಂದಿನ ಎರಡು ಭಾರತ ಪ್ರವಾಸಗಳಲ್ಲಿ 1-1ರಿಂದ ಡ್ರಾ ಮಾಡಿಕೊಂಡಿತ್ತು.  ಭಾರತಕ್ಕೆ ಐದು ಪ್ರವಾಸಗಳಲ್ಲಿ ದಕ್ಷಿಣ ಆಫ್ರಿಕಾ ಒಂದು ಟೆಸ್ಟ್ ರಬ್ಬರ್ ಮಾತ್ರ ಗೆದ್ದುಕೊಂಡಿದೆ.
 
 1996-97ರಲ್ಲಿ ಮತ್ತು 2004-05ರಲ್ಲಿ ದಕ್ಷಿಣ ಆಫ್ರಿಕಾ ಭಾರತ ವಿರುದ್ಧ ಎರಡು ಟೆಸ್ಟ್ ಸರಣಿಗಳಲ್ಲಿ ಕ್ರಮವಾಗಿ  1-2 ಮತ್ತು 0-1ರಿಂದ ಸೋತಿತ್ತು. ಭಾರತ ಸ್ಪಿನ್‌ಗೆ ನೆರವಾಗುವ ಈ ಪಿಚ್‌ನಲ್ಲಿ ಪಂದ್ಯವನ್ನು ಗೆದ್ದುಕೊಂಡರೆ,  ಭಾರತದ ನೆಲದಲ್ಲಿ 6 ಟೆಸ್ಟ್ ರಬ್ಬರ್‌ಗಳ ಪೈಕಿ ಮೂರನೇ ಸರಣಿ ಸೋಲನ್ನು ದಕ್ಷಿಣ ಆಫ್ರಿಕಾ ಅನುಭವಿಸಿದಂತಾಗುತ್ತದೆ. 
 

Share this Story:

Follow Webdunia kannada