Select Your Language

Notifications

webdunia
webdunia
webdunia
webdunia

ಮುರಳಿ ವಿಜಯ್ ಭರ್ಜರಿ ಶತಕ : ಬಾಂಗ್ಲಾ ವಿರುದ್ಧ ಭಾರತ 462ಕ್ಕೆ 6

ಮುರಳಿ ವಿಜಯ್ ಭರ್ಜರಿ ಶತಕ : ಬಾಂಗ್ಲಾ ವಿರುದ್ಧ  ಭಾರತ 462ಕ್ಕೆ 6
ಢಾಕಾ , ಶುಕ್ರವಾರ, 12 ಜೂನ್ 2015 (17:19 IST)
ಬಾಂಗ್ಲಾದೇಶದ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಭಾರತ  6 ವಿಕೆಟ್ ಕಳೆದುಕೊಂಡು 462 ಬೃಹತ್ ಮೊತ್ತವನ್ನು ಕಲೆಹಾಕಿದೆ. ಶಿಖರ್ ಧವನ್ ಮತ್ತು ಮುರಳಿ ವಿಜಯ್ ಅವರ ಭರ್ಜರಿ ಶತಕಗಳಿಂದ ಮತ್ತು ಅಜಿಂಕ್ಯ ರಹಾನೆ ಅವರ ಶತಕ ವಂಚಿತ 98 ರನ್‌ ನೆರವಿನಿಂದ ಭಾರತ ಈ ಮೊತ್ತವನ್ನು ಮುಟ್ಟಿದೆ. ಪದೇ ಪದೇ ಮಳೆಯಿಂದ ಕಾಡಿದ ಮೂರನೇ ದಿನದಾಟವು ಟೀ ವೇಳೆಗೆ ಮಳೆಯಿಂದಲೇ ಪಂದ್ಯಕ್ಕೆ ಬ್ರೇಕ್ ಬಿತ್ತು. 
 
 ಬಾಂಗ್ಲಾದೇಶದ ಎಡಗೈ ಸ್ಪಿನ್ನರ್ ಶಕೀಬ್ ಅಲ್ ಹಸನ್ ಭಾರತದ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ನಾಲ್ಕು ವಿಕೆಟ್ ಕಬಳಿಸಿದರು. 239 ನೋ ಲಾಸ್‌ಗೆ 3ನೇ ದಿನಟಾಟ ಮುಂದುವರಿಸಿದ ಭಾರತದ ಪರ ಶಕೀಬ್ 105 ರನ್ ನೀಡಿ 4 ವಿಕೆಟ್ ಕಬಳಿಸಿದರೆ, ಲೆಗ್ ಸ್ಪಿನ್ನರ್ ಜುಬೇರ್ ಹುಸೇನ್ 113 ರನ್ ನೀಡಿ 2 ವಿಕೆಟ್ ಗಳಿಸಿದರು.

ಪದೆ ಪದೇ ಸುರಿಯುವ ಮಳೆಯಿಂದಾಗಿ ಮೊದಲ ದಿನದ 34 ಓವರು ಮತ್ತು ಇಡೀ ಎರಡನೇ ದಿನದಾಟ ಕೊಚ್ಚಿ ಹೋಯಿತು.  ಶಕೀಬ್ ಭಾರತದ 283 ರನ್ ಓಪನಿಂಗ್ ಜೊತೆಯಾಟವನ್ನು ಶಿಖರ್ ಧವನ್ ಅವರನ್ನು ಔಟ್ ಮಾಡುವ ಮೂಲಕ ಮುರಿದರು. ಬಳಿಕ ಮುರಳಿ ವಿಜಯ್, ರೋಹಿತ್ ಶರ್ಮಾ, ರಹಾನೆ ವಿಕೆಟ್ ಕೂಡ ಶಕೀಬ್ ಕಬಳಿಸಿದರು. ರವಿಚಂದ್ರನ್ ಅಶ್ವಿನ್ ಮತ್ತು ಹರ್ಭಜನ್ ಸಿಂಗ್ ಕ್ರೀಸ್‌ನಲ್ಲಿದ್ದಾಗ ಮಳೆಯಿಂದ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು. 

Share this Story:

Follow Webdunia kannada