Webdunia - Bharat's app for daily news and videos

Install App

ಭಾರತದ 100 ಮೀ. ಓಟದ ಸ್ಪರ್ಧಿ ದುತಿ ಚಾಂದ್‌ ಹೊಸ ರನ್ನಿಂಗ್ ಶೂಗೆ ಬೇಡಿಕೆ

Webdunia
ಸೋಮವಾರ, 8 ಆಗಸ್ಟ್ 2016 (12:42 IST)
ಭಾರತದ ದುತಿ ಚಾಂದ್ ಶ್ರಮಪಟ್ಟು ಅಭ್ಯಾಸ ಮಾಡುತ್ತಿದ್ದು, 2016ರ ರಿಯೊ ಒಲಿಂಪಿಕ್ಸ್‌ನ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕದ ಮೇಲೆ ಕಣ್ಣಿರಿಸಿದ್ದಾರೆ. ದುತಿ ರಾಷ್ಟ್ರೀಯ ದಾಖಲೆಯೊಂದಿಗೆ ಒಲಿಂಪಿಕ್‌ ಕ್ರೀಡಾಕೂಟಕ್ಕೆ ಅರ್ಹತೆ ಹಳಿಸಿದ್ದರು. ಒಡಿಶಾದ 20 ವರ್ಷದ ಯುವತಿಗೆ ಯಾವ ಅಥ್ಲೀಟ್ ಕೂಡ ಇದುವರೆಗೆ ಮಾಡಿರದ ಸಾಹಸ ಮಾಡಬೇಕೆಂಬ ಹೆಬ್ಬಯಕೆ.  ಜಗತ್ತಿನಲ್ಲೇ ಅತ್ಯಂತ ಶ್ರೇಷ್ಟ ಪ್ರದರ್ಶನ ನೀಡುವ ಮೂಲಕ ಚಿನ್ನದ ಪದಕ ಗೆಲ್ಲುವುದು ಅವರ ಹೆಗ್ಗುರಿಯಾಗಿದೆ.
 
ನಾನು ಜಗತ್ತಿನ ಶ್ರೇಷ್ಟ ಒಟಗಾರರ ಜತೆ ಸ್ಪರ್ಧಿಸಲಿರುವ ಹಿನ್ನೆಲೆಯಲ್ಲಿ ಕಠಿಣ ತರಬೇತಿ ಪಡೆಯುತ್ತಿದ್ದು, ನನ್ನ ಪ್ರದರ್ಶನ ಸುಧಾರಣೆಗೆ ಎಲ್ಲಾ ಸಮಯವನ್ನು ಮುಡುಪಾಗಿಟ್ಟು ಚಿನ್ನ ಗೆಲ್ಲುವ ಗುರಿ ಹೊಂದಿದ್ದೇನೆ ಎಂದು ದುತಿ ಸಂದರ್ಶನದಲ್ಲಿ ತಿಳಿಸಿದರು.
 ಆದರೆ ಸರ್ಕಾರದಿಂದ ಸಾಕಷ್ಟು ಪ್ರೋತ್ಸಾಹ ಸಿಗುತ್ತಿಲ್ಲ ಎಂದು ದುತಿ ಅಸಮಾಧಾನ ವ್ಯಕ್ತಪಡಿಸಿದರು. ನಾನು ಒಡಿಶಾ ಮುಖ್ಯಮಂತ್ರಿ ಶುಭಾಶಯ ಮತ್ತು ಆಶೀರ್ವಾದದಿಂದ ಚಿನ್ನದ ಪದಕವನ್ನು ಖಂಡಿತವಾಗಿ ಗೆಲ್ಲಲು ಯತ್ನಿಸುತ್ತೇನೆ.  ಆದರೆ ನಾನು ಸ್ಪೈಕ್ ಶೂನ ಹೊಸ ಜೊತೆಯನ್ನು ಈಗ ಪಡೆಯುವುದು ಮುಖ್ಯವಾಗಿದೆ ಎಂದು ಹೇಳಿದರು.
 
ರನ್ನಿಂಗ್ ಶೂಗಳು ದುಬಾರಿಯಾಗಿದ್ದು, ನನಗೆ ಒಂದು ಸೆಟ್ ಟ್ರಾಕ್‌ಸೂಟ್ ಮತ್ತು ರನ್ನಿಂಗ್ ಶೂಗಳ ಜೊತೆಯನ್ನು ಒದಗಿಸಿದರೆ ನಾನು ಶ್ರೇಷ್ಟ ಪ್ರದರ್ಶನ ನೀಡಲು ಸಾಧ್ಯವಾಗುತ್ತದೆ ಎಂದು ದುತಿ ಹೇಳಿದರು. ನಾನು ಇಷ್ಟೊಂದು ಸಾಧನೆ ಮಾಡಿದ್ದರೂ ಸರ್ಕಾರದಿಂದ ಭಿಕ್ಷೆ ಬೇಡಬೇಕಾದ ಪರಿಸ್ಥಿತಿ ಬಂದಿದೆ. ಸರ್ಕಾರವೇ ಇವೆಲ್ಲಾ  ಒದಗಿಸಬೇಕಿತ್ತು ಎಂದು ದುತಿ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments