Select Your Language

Notifications

webdunia
webdunia
webdunia
webdunia

ಜಾನ್ ರೈಟ್, ಗ್ಯಾರಿ ಕಿರ್ಸ್ಟನ್ ಹೆಜ್ಜೆಗುರುತುಗಳನ್ನು ಅನುಸರಿಸುವೆ : ಅನಿಲ್ ಕುಂಬ್ಳೆ

ಜಾನ್ ರೈಟ್, ಗ್ಯಾರಿ ಕಿರ್ಸ್ಟನ್ ಹೆಜ್ಜೆಗುರುತುಗಳನ್ನು ಅನುಸರಿಸುವೆ : ಅನಿಲ್ ಕುಂಬ್ಳೆ
ನವದೆಹಲಿ: , ಶುಕ್ರವಾರ, 24 ಜೂನ್ 2016 (20:14 IST)
ನೂತನವಾಗಿ ನೇಮಕವಾದ ಕೋಚ್ ಅನಿಲ್ ಕುಂಬ್ಳೆ ತಮ್ಮ ಪೂರ್ವಾಧಿಕಾರಿಗಳಾದ ಜಾನ್ ರೈಟ್ ಮತ್ತು ಕಿರ್ಸ್ಟನ್ ಹೆಜ್ಜೆಗಳನ್ನು ಅನುರಿಸಲು ಆಸಕ್ತರಾಗಿದ್ದಾರೆ.  45 ವರ್ಷದ ಸ್ಪಿನ್ ಗ್ರೇಟ್ ನ್ಯೂಜಿಲೆಂಡ್ ರೈಟ್ ಮತ್ತು ದಕ್ಷಿಣ ಆಫ್ರಿಕಾದ ಕಿರ್ಸ್ಟನ್ ಕೈಕೆಳಗೆ ಸಾಕಷ್ಟು ಕ್ರಿಕೆಟ್ ಆಡಿದ್ದು, ಇವರಿಬ್ಬರ ಕೋಚಿಂಗ್ ಶೈಲಿಯನ್ನು ಅನುಕರಿಸಲು ಬಯಸುವುದಾಗಿ ಹೇಳಿದರು. 
 
 ರೈಟ್ ಅವರು 2000ದಿಂದ 2005ರವರೆಗೆ ಭಾರತದ ಹೆಡ್ ಕೋಚ್ ಆಗಿದ್ದರು. ಕುಂಬ್ಳೆ ಮುಂಬೈ ಇಂಡಿಯನ್ಸ್ ಮೆಂಟರ್ ಆಗಿದ್ದಾಗ ರೈಟ್ 2013-14ರಲ್ಲಿ ಕೋಚ್ ಹುದ್ದೆ ನಿರ್ವಹಿಸಿದ್ದರು.  ಜಾನ್ ರೈಟ್ ಸಾರಥ್ಯದಲ್ಲಿ ನಾನು ತುಂಬಾ ಕ್ರಿಕೆಟ್ ಆಡಿದ್ದೇನೆ. ಅವರು ನನ್ನ ಮೇಲೆ ತುಂಬಾ ಪ್ರಭಾವ ಬೀರಿದ್ದಾರೆ ಎಂದು ಕುಂಬ್ಳೆ ಬಿಸಿಸಿಐ ವೆಬ್‌ಸೈಟ್‌ನಲ್ಲಿ ತಿಳಿಸಿದ್ದಾರೆ. 
 
 ತಾವು ಟೆಸ್ಟ್ ಪಂದ್ಯಗಳಲ್ಲಿ ಮಾತ್ರ ಗ್ಯಾರಿ ಕಿರ್ಸ್ಟನ್ ಜತೆ ಭಾಗಿಯಾಗಿದ್ದೆ. ಅವರು ಹಿನ್ನೆಲೆಯಿಂದ ಕೆಲಸ ಮಾಡುತ್ತಿದ್ದರೆ ಹೊರತು ಕಣ್ಣಿಗೆ ಗೋಚರಿಸುತ್ತಿರಲಿಲ್ಲ ಎಂದು ಕುಂಬ್ಳೆ ಹೇಳಿದರು.  ಅದೇ ರೀತಿ ತಾವೂ ಸಹ ಕೆಲಸ ಮಾಡುವುದಾಗಿ ಹೇಳಿದರು.  

16 ವರ್ಷಗಳ ಹಿಂದೆ ಕಪಿಲ್ ದೇವ್ ಅವರು ಕೋಟ್ ಕಮ್ ಮ್ಯಾನೇಜರ್ ಹುದ್ದೆ ನಿರ್ವಹಿಸಿದ ಬಳಿಕ ಕುಂಬ್ಳೆ ಪೂರ್ಣಕಾಲಿಕ ಕೋಚ್ ಆಗುತ್ತಿರುವ ಮೊದಲ ಭಾರತೀಯರು. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಹೆಡ್ ಕೋಚ್ ಹುದ್ದೆ ಸಿಗದ ರವಿಶಾಸ್ತ್ರಿಗೆ ನಿರಾಶೆ