Select Your Language

Notifications

webdunia
webdunia
webdunia
webdunia

ಭಾರತಕ್ಕೆ ಕೈತಪ್ಪಿದ 2024ರ ಒಲಿಂಪಿಕ್ಸ್‌ ಆತಿಥ್ಯ

ಭಾರತಕ್ಕೆ ಕೈತಪ್ಪಿದ 2024ರ ಒಲಿಂಪಿಕ್ಸ್‌ ಆತಿಥ್ಯ
ನವದೆಹಲಿ , ಮಂಗಳವಾರ, 28 ಏಪ್ರಿಲ್ 2015 (13:51 IST)
ಭಾರತ 2024ರ ಒಲಿಂಪಿಕ್ ಕ್ರೀಡಾಕೂಟವನ್ನು ಯಶಸ್ವಿಯಾಗಿ ನಡೆಸುವುದು ಕಷ್ಟ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುವ ಮೂಲಕ ಭಾರತ 2024ರ ಒಲಿಂಪಿಕ್ ಕ್ರೀಡಾಕೂಟಕ್ಕೆ ಬಿಡ್ ಮಾಡಬಹುದು ಎಂಬ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. 
 
ಭಾರತ 2024ರ ಒಲಿಂಪಿಕ್ಸ್ ಕ್ರೀಡಾ ಕೂಡ ಆಯೋಜನೆಗೆ ಬಿಡ್ ಮಾಡಲಿದೆ ಎಂಬ ವರದಿಗಳಿಂದ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಅಧ್ಯಕ್ಷ ಥಾಮಸ್ ಬಾಕ್ ಅಚ್ಚರಿ ವ್ಯಕ್ತಪಡಿಸಿದ್ದರು.   ಭಾರತ ಈ ಕ್ರೀಡಾಕೂಟದ ಆತಿಥ್ಯ ವಹಿಸಲು ಇನ್ನೂ ಕಾಲ ಕೂಡಿಬಂದಿಲ್ಲ ಎಂದು ಹೇಳಿದರು. ನಾವು ಈ ಊಹಾಪೋಹದ ವರದಿಗಳಿಂದ ಅಚ್ಚರಿಗೊಂಡೆವು. ಯಶಸ್ವಿ ಒಲಿಂಪಿಕ್ ಕ್ರೀಡಾಕೂಟ ಆಯೋಜಿಸುವುದಕ್ಕೆ ಇಷ್ಟು ಬೇಗ ಭಾರತಕ್ಕೆ ಸಾಧ್ಯವಾಗುವುದಿಲ್ಲ ಎಂದು ನಾವು ಭಾವಿಸಿದ್ದೇವೆ. 

 ಭಾರತ ಉತ್ತಮ ಅಥ್ಲೇಟ್‌ಗಳನ್ನು ನಿರ್ಮಿಸುವ ಅಗತ್ಯವಿದೆ. ಅವರ ನಡುವೆ ಐಕಮತ್ಯ ಮೂಡಿಸಿ ರಿಯೋ ಒಲಿಂಪಿಕ್ಸ್‌ನಲ್ಲಿ ಪ್ರಬಲ ತಂಡವನ್ನು ಕಣಕ್ಕಿಳಿಸಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.  ಒಲಿಂಪಿಕ್ ಕ್ರೀಡಾಕೂಟಕ್ಕೆ ಭಾರತ ಆತಿಥ್ಯ ವಹಿಸಬಹುದು ಎಂಬ ನಿರೀಕ್ಷೆಗಳ ನಡುವೆ ಪ್ರಧಾನಿ ನರೇಂದ್ರ ಮೋದಿ ಜತೆ ಮಾತುಕತೆ ನಂತರ ಭಾರತಕ್ಕೆ ಒಲಿಂಪಿಕ್ಸ್ ನಡೆಸಲು ಬಾಗಿಲು ಸದಾ ತೆರೆದಿದೆ ಎಂದು ಬಾಕ್ ಹೇಳಿದರು. 
 
 ನಾವು ಪ್ರಧಾನಿ ಜತೆ ಈ ಕುರಿತು ಮಾತನಾಡಿದಾಗ ತಾವು ಅದಕ್ಕೆ ಸಕಲ ಸಿದ್ಧತೆ ಮತ್ತು ಕೌಶಲ್ಯ ಗಳಿಸಬೇಕಾಗುತ್ತದೆ. 2024ರಲ್ಲಿ ಯಶಸ್ವಿ ಬಿಡ್ ಮಾಡುವುದು ಕಷ್ಟ ಎಂದು ಮೋದಿ ಹೇಳಿದ್ದಾಗಿ ಬಾಕ್ ತಿಳಿಸಿದರು.  ಜಗತ್ತಿನ ಎರಡನೇ ಜನಭರಿತ ರಾಷ್ಟ್ರವಾಗಿದ್ದರೂ ಒಲಿಂಪಿಕ್ ಸ್ಪರ್ಧೆಯಲ್ಲಿ ಭಾರತ ಕಳಪೆ ದಾಖಲೆ ಹೊಂದಿದೆ. 2008ರಲ್ಲಿ 10 ಮೀಟರ್ ಏರ್ ರೈಫಲ್ ಪಂದ್ಯದಲ್ಲಿ ಶೂಟರ್ ಅಭಿನವ್ ಭಿಂದ್ರಾ ಚಿನ್ನ ಗೆದ್ದಿದ್ದನ್ನು ಬಿಟ್ಟರೆ ಉಳಿದಂತೆ ಭಾರತದ ಸಾಧನೆ ಕಳಪೆಯಾಗಿದೆ.

Share this Story:

Follow Webdunia kannada