Select Your Language

Notifications

webdunia
webdunia
webdunia
webdunia

ಚೇತೇಶ್ವರ್ ಪೂಜಾರಾ ಏಳನೇ ಶತಕದ ಮೂಲಕ ರೋಚಕ ಕಮ್‌ಬ್ಯಾಕ್

ಚೇತೇಶ್ವರ್ ಪೂಜಾರಾ  ಏಳನೇ ಶತಕದ ಮೂಲಕ ರೋಚಕ ಕಮ್‌ಬ್ಯಾಕ್
ಕೊಲಂಬೊ , ಶನಿವಾರ, 29 ಆಗಸ್ಟ್ 2015 (17:24 IST)
ಚೇತೇಶ್ವರ್ ಪೂಜಾರಾ ಭಾರತ ತಂಡದ ಮೂರನೇ ಟೆಸ್ಟ್‌ನಲ್ಲಿ ಏಕಾಂಗಿಯಾಗಿ ಹೋರಾಡಿ ಭಾರತ ಸ್ಕೋರಿನ ಮೊತ್ತವನ್ನು ಹೆಚ್ಚಿಸಿದ್ದಲ್ಲದೇ  ತಮ್ಮ ಏಳನೇ ಟೆಸ್ಟ್ ಶತಕ ಬಾರಿಸುವ ಮೂಲಕ ರೋಚಕವಾಗಿ ಟೆಸ್ಟ್ ತಂಡಕ್ಕೆ ಕಮ್‌ಬ್ಯಾಕ್ ಆಗಿದ್ದಾರೆ. 
 
ರಾಹುಲ್, ರಹಾನೆ ಮತ್ತು ಕೊಹ್ಲಿ ಬೇಗನೇ ಔಟಾದ ಬಳಿಕ ಪೂಜಾರಾ ಟೀಂ ಇಂಡಿಯಾದ ರನ್ ಗಳಿಕೆಯ ಉಸ್ತುವಾರಿ ವಹಿಸಿಕೊಂಡು ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ  ಅವಮಾನಕರ ಮೊತ್ತಕ್ಕೆ ಔಟಾಗದಂತೆ ಮಾಡಲು ರಕ್ಷಣಾತ್ಮಕ ಆಟವಾಡಿ ತಮ್ಮ ಶತಕವನ್ನು214 ಎಸೆತಗಳಲ್ಲಿ ಬಾರಿಸಿದರು. ಅವರ ಸ್ಕೋರಿನಲ್ಲಿ 9 ಬೌಂಡರಿಗಳಿತ್ತು. 
 
ಆಸ್ಟ್ರೇಲಿಯಾದ ಮೆಲ್ಬರ್ನ್‌ನಲ್ಲಿ ಕೊನೆಯದಾಗಿ ಆಡಿದ್ದ ಪೂಜಾರಾ ಸಿಡ್ನಿ, ಫಾತುಲ್ಲಾ , ಗಾಲೆಯಲ್ಲಿ ಮತ್ತು ಸರಾ ಓವಲ್‌ನಲ್ಲಿ ಆಡಿರಲಿಲ್ಲ. 
 
ಕೊಹ್ಲಿ ಪೂರ್ಣಕಾಲಿಕ ನಾಯಕರಾಗಿ  ಪೂಜಾರಾ ಅವರ ಮೊದಲ ಪಂದ್ಯ ಇದಾಗಿದೆ.  ಪೂಜಾರಾ ಅವರನ್ನು  ವಿಜಯ್ ಮತ್ತು ಶಿಖರ್ ಧವನ್ ಅವರು ಗಾಯಗೊಂಡು ಪಂದ್ಯದಿಂದ ಹೊರಗುಳಿದ ಬಳಿಕ ಆಡಿಸಲಾಗುತ್ತಿದೆ. ಭಾರತ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳನ್ನು ಕಳೆದುಕೊಂಡು ಕಷ್ಟದ ಸ್ಥಿತಿಯಲ್ಲಿದ್ದಾಗಲೂ ಪೂಜಾರಾ ಜವಾಬ್ದಾರಿ ವಹಿಸಿಕೊಂಡು ಮನೋಜ್ಞವಾಗಿ  ಪ್ರತಿದಾಳಿ ಮಾಡಿದರು.

 ಬಲಗೈ ಆಟಗಾರ ಪೂಜಾರಾ ರಕ್ಷಣಾತ್ಮಕ ಆಟದಲ್ಲಿ ದೃಢವಾಗಿ ಕಂಡುಬಂದು ರನ್ ವೇಗ ಹೆಚ್ಚಿಸುವಲ್ಲಿ ವಿಫಲರಾಗಿದ್ದರು. ಆದರೆ ಕೌಶಲ್ ಬೌಲಿಂಗ್‌ಗೆ ಇಳಿದ ಬಳಿಕ ಅವರ ಸ್ಕೋರಿಂಗ್ ವೇಗ ಹೆಚ್ಚಿ ಸತತ ಮೂರು ಬೌಂಡರಿಗಳನ್ನು ಬಾರಿಸಿದರು. ಉಳಿದೆಲ್ಲಾ ಮೇಲಿನ ಕ್ರಮಾಂಕದ ಬ್ಯಾಟ್ಸ್‌ಮನ್‌‍ಗಳ ವೈಫಲ್ಯದ ನಡುವೆ ಪೂಜಾರಿ ಏಕಾಂಗಿಯಾಗಿ ಹೋರಾಟ ಮಾಡಿ ಭಾರತದ ಮಾನ ರಕ್ಷಿಸಿದರು. 
 

Share this Story:

Follow Webdunia kannada