Webdunia - Bharat's app for daily news and videos

Install App

ನಾಳೆ ಭಾರತ-ಇಂಗ್ಲೆಂಡ್ ನಡುವೆ ಮೊದಲ ಕದನ, ವಿರಾಟ್ ಕೊಹ್ಲಿಗೆ ಪ್ರಥಮ ಪರೀಕ್ಷೆ

Webdunia
ಶನಿವಾರ, 14 ಜನವರಿ 2017 (13:13 IST)
ಪುಣೆ: ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿದ್ದಾಯ್ತು. ಇದೀಗ ಏಕದಿನ ಸರಣಿಯಲ್ಲಿ ಕಾದಾಡಲು ಭಾರತ-ಇಂಗ್ಲೆಂಡ್ ಸಜ್ಜಾಗಿವೆ. ಅದಕ್ಕಾಗಿ ವೇದಿಕೆಯೂ ಸಿದ್ಧಗೊಂಡಿದೆ.

ಎಲ್ಲರ ಚಿತ್ರ ಇದೀಗ ವಿರಾಟ್ ಕೊಹ್ಲಿಯತ್ತ ನೆಟ್ಟಿದೆ. ಇದು ಅವರಿಗೆ ಪೂರ್ಣ ಪ್ರಮಾಣದ ನಾಯಕನಾಗಿ ಮೊದಲ ಪಂದ್ಯ. ಅಲ್ಲದೆ ಇದುವರೆಗೆ ನಾಯಕತ್ವ ವಹಿಸಿದ್ದ ಧೋನಿ ಈ ಪಂದ್ಯದಲ್ಲಿ ಸಾಮಾನ್ಯ ಆಟಗಾರನಾಗಿ ಕಣಕ್ಕಿಳಿಯಲಿದ್ದಾರೆ.  ಪಂದ್ಯಕ್ಕೆ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಈಗಾಗಲೇ ಕೊಹ್ಲಿ ಪಂದ್ಯದ ನಡುವೆ ಧೋನಿ ಸಲಹೆ  ಪಡೆಯುವುದಾಗಿ ಹೇಳಿದ್ದಾರೆ.

ಹಿರಿಯ ಆಟಗಾರರಾದ ಯುವರಾಜ್ ಸಿಂಗ್, ಆಶಿಶ್ ನೆಹ್ರಾ ಹಲವು ದಿನಗಳ ನಂತರ ತಂಡಕ್ಕೆ ಮರಳಿದ್ದು, ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಈಗಾಗಲೇ ಅಜಿಂಕ್ಯಾ ರೆಹಾನೆಯನ್ನು ಆರಂಭಿಕರಾಗಿ ಕಣಕ್ಕಿಳಿಸುವ ಬಗ್ಗೆ ಕೋಚ್ ಅನಿಲ್ ಕುಂಬ್ಳೆ ಸೂಚನೆ ನೀಡಿದ್ದಾರೆ.

ಅತ್ತ ಇಂಗ್ಲೆಂಡ್ ತಂಡವೂ, ಹೊಸ ನಾಯಕ, ಹೊಸ ತಂಡದೊಂದಿಗೆ ಹಳೆಯ ಸೋಲಿನ ಕಹಿಯನ್ನು ಮರೆತು ಹೊಸ ಗೆಲುವಿನ ಉತ್ಸಾಹದೊಂದಿಗೆ ತವರಿನಿಂದ ಭಾರತಕ್ಕೆ ವಾಪಸಾಗಿದೆ. ನಾಯಕನೇ ಅವರ ಪ್ರಮುಖ ಶಕ್ತಿ. ಹೀಗಾಗಿ ಅವರನ್ನೂ ಹಗುರವಾಗಿ ಪರಿಗಣಿಸುವಂತಿಲ್ಲ.

ಜೂನ್ ನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೆ ಮೊದಲು ಭಾರತಕ್ಕೆ ಇದು ಕೊನೆಯ ಏಕದಿನ ಸರಣಿ. ಹಾಗಾಗಿ ಮಿನಿ ವಿಶ್ವಕಪ್ ಗೆ ಇದು ಪೂರ್ವಭಾವಿ ಪಂದ್ಯ ಎಂದೇ ಹೇಳಬಹುದು. ಸದ್ಯಕ್ಕೆ ಏಕದಿನ ಕ್ರಿಕೆಟ್ ನಲ್ಲಿ ಮೂರನೇ ಶ್ರೇಯಾಂಕ ಹೊಂದಿರುವ ಭಾರತ ಮತ್ತೆ ನಂ.1 ಪಟ್ಟಕ್ಕೆ ತರುವುದಾಗಿ ಕೊಹ್ಲಿ ಪಣ ತೊಟ್ಟಿದ್ದಾರೆ. ಅವರ ಆಶಯ ನಿಜವಾಗಬೇಕಾದರೆ ಭಾರತ ಅದಕ್ಕೆ ತಕ್ಕ ಆಟವಾಡಬೇಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಚೆನ್ನೈ ಸೂಪರ್‌ ಕಿಂಗ್ಸ್ ತಂಡ ಸೇರಿದ ಬೇಬಿ ಎಬಿ: ಇನ್ನಾದರೂ ಪುಟದೇಳುತ್ತಾ ಧೋನಿ ಪಡೆ

KL Rahul Daughter: ಬರ್ತ್ ಡೇ ದಿನ ಮಗಳ ಹೆಸರು ರಿವೀಲ್ ಮಾಡಿದ ಕೆಎಲ್ ರಾಹುಲ್: ಈ ಹೆಸರಿನಲ್ಲಿದೆ ಒಂದು ವಿಶೇಷ

RCB vs PBKS Match: ಈ ಸಲ ಕಪ್ ನಮ್ದೆ ಎಂದಾಗಲೆಲ್ಲ ನಾವು ಕಪ್ ಎತ್ತಿಲ್ಲ, ಅನಿಲ್ ಕುಂಬ್ಳೆ

KL Rahul: ಹ್ಯಾಪೀ ಬರ್ತ್ ಡೇ ಕೆಎಲ್ ರಾಹುಲ್ ಎಂದ ಆರ್ ಸಿಬಿ: ವಿಶ್ ಮಾಡಕ್ಕಾಗುತ್ತೆ, ಟೀಂಗೆ ತಗೊಳ್ಳಕ್ಕೆ ಆಗಲ್ವಾ ಎನ್ನೋದಾ..

Viral video: ಎಂಥಾ ಕ್ಯಾರೆಕ್ಟರ್ ಗುರೂ.. ಅಭಿಮಾನಿಗಳ ಜೊತೆ ರೋಹಿತ್ ಶರ್ಮಾ ಫನ್

ಮುಂದಿನ ಸುದ್ದಿ
Show comments