Select Your Language

Notifications

webdunia
webdunia
webdunia
webdunia

ಟಿ20 ಪಂದ್ಯದಲ್ಲಿ ಶ್ರೀಲಂಕಾವನ್ನು ಸೋಲಿಸಿದ ಭಾರತ: ಸರಣಿ 1-1 ಸಮ

ಟಿ20 ಪಂದ್ಯದಲ್ಲಿ ಶ್ರೀಲಂಕಾವನ್ನು ಸೋಲಿಸಿದ ಭಾರತ:  ಸರಣಿ 1-1 ಸಮ
ರಾಂಚಿ , ಶನಿವಾರ, 13 ಫೆಬ್ರವರಿ 2016 (16:34 IST)
ಭಾರತ ಮತ್ತು ಶ್ರೀಲಂಕಾ ನಡುವೆ ಶುಕ್ರವಾರ ರಾಂಚಿಯಲ್ಲಿ ನಡೆದ ಎರಡನೇ ಟಿ 20 ಪಂದ್ಯದಲ್ಲಿ ಶ್ರೀಲಂಕಾವನ್ನು 69 ರನ್‌ಗಳಿಂದ ಸೋಲಿಸಿದ ಭಾರತ ಟಿ 20 ಸರಣಿಯನ್ನು 1-1ರಿಂದ ಸಮ ಮಾಡಿಕೊಂಡಿದೆ. ಪುಣೆಯಲ್ಲಿ ಮೊದಲ ಪಂದ್ಯದಲ್ಲಿ ಹೀನಾಯವಾಗಿ ಸೋತಿದ್ದ ಭಾರತ ತೀವ್ರ ಒತ್ತಡದ ಸ್ಥಿತಿಯಲ್ಲಿತ್ತು. ದಿನೇಶ್ ಚಾಂಡಿಮಾಲ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದು ಭಾರತಕ್ಕೆ ವರದಾನವಾಗಿ ಪರಿಣಮಿಸಿತು.

ಧೋನಿ ತವರೂರಿನ ಪಿಚ್‌ನಲ್ಲಿ ಭಾರತ ತಂಡ ತಿರುಗೇಟು ನೀಡಲು ನಿರ್ಧರಿಸಿದ್ದರು. ಪುಣೆಯಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದ ರೋಹಿತ್ ಶರ್ಮಾ ಪ್ರಥಮ ಎಸೆತದಲ್ಲೇ ರಜಿತಾ ಬೌಲಿಂಗ್‌ನಲ್ಲಿ ಬೌಂಡರಿ ಬಾರಿಸಿ ಶುಭಾರಂಭ ಮಾಡಿದರು. 
 
 ಫಾರಂಗೆ ತಿಣುಕಾಡುತ್ತಿದ್ದ ಶಿಖರ್ ಧವನ್ ಈ ಪಿಚ್‌ನಲ್ಲಿ ಕೆಲವು ಸಿಕ್ಸರ್‌ಗಳನ್ನು ಸಿಡಿಸಿದರು ಮತ್ತು ರಜಿತಾ ಎರಡನೇ ಓವರಿನಲ್ಲಿ ಹ್ಯಾಟ್ರಿಕ್ ಬೌಂಡರಿಗಳನ್ನು ಬಾರಿಸಿ ಶಿಕ್ಷಿಸಿದರು. 22 ಎಸೆತಗಳಲ್ಲಿ ಚೊಚ್ಚಲ 50 ರನ್ ಗಳಿಸುವ ಮೂಲಕ ಭಾರತದ ಬ್ಯಾಟ್ಸ್‌ಮನ್‌ಗಳ ಪೈಕಿ ಐದನೇ ವೇಗದ ಅರ್ಧಶತಕ ಬಾರಿಸಿದರು.
 
 ಧವನ್ ಅವರ ಹೊಡೆತವು ಟೀಂ ಇಂಡಿಯಾದ ದೊಡ್ಡ ಸ್ಕೋರಿಗೆ ವೇದಿಕೆ ಒದಗಿಸಿತು. ಚಮೀರಾ ಅವರು ಧವನ್ ಅವರನ್ನು 51 ರನ್‌ಗಳಾಗಿದ್ದಾಗ ಔಟ್ ಮಾಡಿ ಅಪಾಯಕಾರಿ ಜತೆಯಾಟ ಮುರಿದರು. ರೋಹಿತ್ ಶರ್ಮಾ ಅವರನ್ನು ತಮ್ಮ ಬೌಲಿಂಗ್‌ನಲ್ಲಿ ಅದ್ಭುತ ಕ್ಯಾಚ್ ಹಿಡಿದು 43ಕ್ಕೆ ಚಮೀರಾ ಔಟ್ ಮಾಡಿದರು. 
 
ಈ ಸಂದರ್ಭದಲ್ಲಿ ಶ್ರೀಲಂಕಾ ಭಾರತದ ರನ್ ವೇಗಕ್ಕೆ ಕಡಿವಾಣ ಹಾಕಿತು. ಕ್ರಮಾಂಕದಲ್ಲಿ ಬಡ್ತಿ ಪಡೆದ ಹಾರ್ದಿಕ್ ಪಾಂಡ್ಯ ಕೆಲವು ಸಿಕ್ಸರುಗಳನ್ನು ಭಾರಿಸಿ ರನ್ ಗತಿಯನ್ನು ಹೆಚ್ಚಿಸಿದರು. ಸುರೇಶ್ ರೈನಾ ಜತೆ 59 ರನ್ ಜತೆಯಾಟವನ್ನು ಹಂಚಿಕೊಂಡರು.  ಅವರು ಸುರೇಶ್ ರೈನಾ ಜತೆ 59 ರನ್ ಜತೆಯಾಟವಾಡಿ ಭಾರತ 200 ರನ್ ಗಡಿದಾಟುವ ಗುರಿಯನ್ನು ಹೊಂದಿತ್ತು.
 
 ಆದರೆ 19ನೇ ಓವರಿನಲ್ಲಿ ತೀಸರಾ ಪೆರೀರಾ ಹ್ಯಾಟ್ರಿಕ್ ವಿಕೆಟ್ ಸಂಪಾದಿಸುವ ಮೂಲಕ ಪಂದ್ಯದ ದಿಕ್ಕನ್ನು ಬದಲಾಯಿಸಿದರು. ಅವರು ಪಾಂಡ್ಯ, ರೈನಾ ಮತ್ತು ಯುವರಾಜ್ ವಿಕೆಟ್ ಕಬಳಿಸಿ ಟ್ವೆಂಟಿ 20 ಯಲ್ಲಿ ಹ್ಯಾಟ್ರಿಕ್ ಗಳಿಸಿದ ನಾಲ್ಕನೇ ಬೌಲರ್ ಮತ್ತು ಈ ಸಾಧನೆ ಮಾಡಿದ ಮೊದಲ ಶ್ರೀಲಂಕಾ ಬೌಲರ್ ಎನಿಸಿದರು. ಭಾರತ 196 ರನ್‌ಗೆ 6 ವಿಕೆಟ್ ಕಬಳಿಸಿದರು. 
 
 197 ರನ್ ಬೆನ್ನಟ್ಟಿದ ಶ್ರೀಲಂಕಾ ಪರ ತಿಲಕರತ್ನೆ ಅಶ್ವಿನ್ ಬೌಲಿಂಗ್‌ನಲ್ಲಿ ಧೋನಿಗೆ ಕ್ಯಾಚಿತ್ತು ಔಟಾದರು. ಆಶಿಶ್ ನೆಹ್ರಾ ಆರಂಭದ ಓವರುಗಳಲ್ಲಿ ಎರಡು ವಿಕೆಟ್ ಕಬಳಿಸಿದರು. ಕಾಪುಗೆಡೆರಾ ಮತ್ತು ದಿನೇಶ್ ಚಾಂಡಿಮಾಲ್  52 ರನ್ ಜತೆಯಾಟದಿಂದ ಶ್ರೀಲಂಕಾಗೆ ಚೇತರಿಕೆ ನೀಡಿದರು. ಆದಾಗ್ಯೂ ಜಡೇಜಾ ಬೌಲಿಂಗ್‌ನಲ್ಲಿ ಒಬ್ಬರ ಹಿಂದೊಬ್ಬರು ಔಟಾದ ಬಳಿಕ ಉಳಿದ ಶ್ರೀಲಂಕಾ ಬ್ಯಾಟ್ಸ್‌ಮನ್‌ಗಳು ಯಾರೂ ಪ್ರತಿರೋಧ ತೋರದೇ ವಿಫಲರಾದರು. ಬುಮ್ರಾ 16ನೇ ಓವರಿನಲ್ಲಿ ಎರಡು ವಿಕೆಟ್ ಕಬಳಿಸಿದರು.
 ಶ್ರೀಲಂಕಾ 9 ವಿಕೆಟ್‌ಗೆ 127 ರನ್ ಹೊಡೆಯಲು ಮಾತ್ರ ಶಕ್ತವಾಗಿ 69 ರನ್‌ಗಳಿಂದ ಪಂದ್ಯವನ್ನು ಸೋತರು. ಧವನ್ ಅವರನ್ನು ಪಂದ್ಯಶ್ರೇಷ್ಠರೆಂದು ಹೆಸರಿಸಲಾಯಿತು. 

Share this Story:

Follow Webdunia kannada