Webdunia - Bharat's app for daily news and videos

Install App

ನಾಳೆಯಿಂದ ಭಾರತ-ಆಸ್ಟ್ರೇಲಿಯಾ ದ್ವಿತೀಯ ಟೆಸ್ಟ್: ತಂಡದಲ್ಲಿ ಈ ಬದಲಾವಣೆ ಪಕ್ಕಾ

Webdunia
ಶುಕ್ರವಾರ, 25 ಡಿಸೆಂಬರ್ 2020 (09:13 IST)
ಮೆಲ್ಬೋರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಾಳೆಯಿಂದ ದ್ವಿತೀಯ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಈಗಾಗಲೇ ಮೊದಲ ಪಂದ್ಯವನ್ನು ಆಘಾತಕಾರಿಯಾಗಿ ಸೋತಿರುವ ಟೀಂ ಇಂಡಿಯಾ ಈ ಪಂದ್ಯಕ್ಕೆ ಗಮನಾರ್ಹ ಬದಲಾವಣೆಗಳೊಂದಿಗೆ ಕಣಕ್ಕಿಳಿಯಲಿದೆ.


ಈಗಾಗಲೇ ಪಿತೃತ್ವ ರಜೆ ಪಡೆದಿರುವ ನಾಯಕ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ತೊರೆದಿದ್ದಾರೆ. ಅವರ ಸ‍್ಥಾನದಲ್ಲಿ ಅಜಿಂಕ್ಯಾ ರೆಹಾನೆ ತಂಡವನ್ನು ಮುನ್ನಡೆಸಲಿದ್ದಾರೆ. ಇವರಲ್ಲದೆ ಆರಂಭಿಕ ಪೃಥ್ವಿ ಶಾ ತಂಡದಿಂದ ಹೊರಗುಳಿಯುವುದು ಬಹುತೇಕ ನಿಶ್ಚಿತವಾಗಿದೆ. ಕೊಹ್ಲಿ ಸ್ಥಾನಕ್ಕೆ ಕೆಎಲ್ ರಾಹುಲ್, ಶಾ ಸ್ಥಾನಕ್ಕೆ ಶಬ್ನಂ ಗಿಲ್ ಗೆ ಅವಕಾಶ ಸಿಗುವುದು ಬಹುತೇಕ ಖಾತ್ರಿಯಾಗಿದೆ. ಆದರೆ ಕಳಪೆ ಫಾರ್ಮ್ ನಲ್ಲಿರುವ ಹನುಮ ವಿಹಾರಿಗೆ ಕಡೆಯ ಅವಕಾಶ ನೀಡುವ ಸಾಧ‍್ಯತೆಯಿದೆ. ರವೀಂದ್ರ ಜಡೇಜಾ ಇನ್ನೂ ಸಂಪೂರ್ಣ ಫಿಟ್ ಆಗದೇ ಇರುವುದರಿಂದ ವಿಹಾರಿಗೆ ಅದೃಷ್ಟ ಖುಲಾಯಿಸುವ ನಿರೀಕ್ಷೆಯಿದೆ. ಗಾಯಗೊಂಡು ಸರಣಿಯಿಂದ ಹೊರಬಿದ್ದಿರುವ ವೇಗಿ ಮೊಹಮ್ಮದ್ ಶಮಿ ಬದಲಿಗೆ ಯುವ ವೇಗಿ ಮೊಹಮ್ಮದ್ ಸಿರಾಜ್ ಗೆ ಅವಕಾಶ ಸಿಗುವ ಸಾಧ್ಯತೆಯಿದೆ. ಪಂದ್ಯ ಭಾರತೀಯ ಕಾಲಮಾನ ಪ್ರಕಾರ ಬೆಳಿಗ್ಗಿನ ಜಾವ 5 ಗಂಟೆಗೆ ಆರಂಭವಾಗಲಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Australia one-day series: ಆಲ್‌ರೌಂಡರ್‌ ಹಾರ್ದಿಕ್ ಪಾಂಡ್ಯ ಸೇರ್ಪಡೆ

ಲಂಡನ್ ಬೀದಿಯಲ್ಲಿ ಪತ್ನಿ ಜೊತೆ ಸಾಮಾನ್ಯರಂತೆ ಸುತ್ತಿದ ವಿರಾಟ್ ಕೊಹ್ಲಿ: ಭಾರತದಲ್ಲಿದ್ದಿದ್ದರೆ ಹೀಗಾಗುತ್ತಿತ್ತಾ

ಹಳೆಯ ಸೇಡು… ಶ್ರೀಶಾಂತ್ ತನ್ನೆದುರೇ ಸಾಗುತ್ತಿದ್ದರೂ ಕ್ಯಾರೇ ಎನ್ನದೇ ಕೈ ಕಟ್ಟಿ ನಿಂತ ಸಂಜು ಸ್ಯಾಮ್ಸನ್: ವೈರಲ್ Video

ಪರ್ಫಾರ್ಮೆನ್ಸ್ ಬಿಗ್ ಶೂನ್ಯ ಆದ್ರೆ.. ಭಾರತದ ವಿರುದ್ಧ ಗೆಲ್ಲುವುದಕ್ಕೆ ಮುನ್ನ ಸೆಲೆಬ್ರೇಷನ್ ಪ್ರಾಕ್ಟೀಸ್ ಮಾಡಿದ್ದ ಪಾಕಿಸ್ತಾನ Video

ಚೊಚ್ಚಲ ಚೀನಾ ಮಾಸ್ಟರ್ಸ್‌ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಸಾತ್ವಿಕ್ ಚಿರಾಗ್ ಜೋಡಿ

ಮುಂದಿನ ಸುದ್ದಿ
Show comments