Webdunia - Bharat's app for daily news and videos

Install App

ಭಾರತ-ಆಸ್ಟ್ರೇಲಿಯಾ ಏಕದಿನ ಸರಣಿ ಇಂದು ಶುರು: ವಿಶ್ವಕಪ್ ಗೆ ಪೂರ್ವತಯಾರಿ

Webdunia
ಶುಕ್ರವಾರ, 22 ಸೆಪ್ಟಂಬರ್ 2023 (08:20 IST)
ಮೊಹಾಲಿ: ಐಸಿಸಿ ಏಕದಿನ ವಿಶ್ವಕಪ್ ಗೆ ಕೆಲವೇ ದಿನಗಳು ಬಾಕಿಯಿದ್ದು, ಇಂದಿನಿಂದ ಭಾರತ ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ಆಡಲಿದೆ.

ಮೂರು ಪಂದ್ಯಗಳ ಏಕದಿನ ಸರಣಿ ಇದಾಗಿದ್ದು, ಮೊದಲ ಎರಡು ಪಂದ್ಯಗಳಿಗೆ ಕೆಎಲ್ ರಾಹುಲ್ ನೇತೃತ್ವದ ತಂಡ ಕಣಕ್ಕಿಳಿಯಲಿದೆ. ಈ ಎರಡು ಪಂದ್ಯಗಳಿಗೆ ವಿಶ್ವಕಪ್ ಆಡುವ ಪ್ರಮುಖರಿಗೆ ವಿಶ್ರಾಂತಿ ನೀಡಲಾಗಿದೆ.

ಇಂದಿನ ಪಂದ್ಯ ಮೊಹಾಲಿಯಲ್ಲಿ ನಡೆಯಲಿದೆ. ಭಾರತ ತಂಡದಲ್ಲಿ ಇಂದು ಆರಂಭಿಕರಾಗಿ ಶುಬ್ಮನ್ ಗಿಲ್ ಜೊತೆ ಋತುರಾಜ್ ಗಾಯಕ್ ವಾಡ್‍ ಕಣಕ್ಕಿಳಿಯುವ ನಿರೀಕ್ಷೆಯಿದೆ. ಗಾಯಗೊಂಡಿದ್ದ ಶ್ರೇಯಸ್ ಅಯ್ಯರ್ ಕಮ್ ಬ್ಯಾಕ್ ಮಾಡಲಿದ್ದಾರೆ. ಸ್ಪಿನ್  ವಿಭಾಗದಲ್ಲಿ ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ ಜೋಡಿ ಕಣಕ್ಕಿಳಿಯಬಹುದು. ಆಲ್ ರೌಂಡರ್ ಆಗಿ ವಾಷಿಂಗ್ಟನ್ ಸುಂದರ್ ಗೆ ಅವಕಾಶ ಸಿಕ್ಕರೂ ಅಚ್ಚರಿಯಿಲ್ಲ. ವೇಗದ ಬೌಲಿಂಗ್ ವಿಭಾಗದಲ್ಲಿ ಜಸ್ಪ್ರೀತ್ ಬುಮ್ರಾ ಇದ್ದರೂ ಅವರನ್ನು ಕಣಕ್ಕಿಳಿಸುವ ಸಾಧ‍್ಯತೆ ಕಡಿಮೆ. ಹಾಗಿದ್ದಲ್ಲಿ ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಗೆ ಕಣಕ್ಕಿಳಿಯಬಹುದು. ಅತ್ತ ಆಸ್ಟ್ರೇಲಿಯಾ ಕೂಡಾ ವಿಶ್ವಕಪ್ ಆಡುವ ಆಟಗಾರರನ್ನೊಳಗೊಂಡ ಸಮರ್ಥ ತಂಡವನ್ನೇ ಕಟ್ಟಿಕೊಂಡು ಬಂದಿದೆ. ಹೀಗಾಗಿ ಈ  ಸರಣಿಯಲ್ಲಿ ಪೈಪೋಟಿ ಎದುರಾಗಬಹುದು. ಈ ಪಂದ್ಯ ಮಧ್ಯಾಹ್ನ 1.30 ಕ್ಕೆ ಆರಂಭವಾಗುವುದು. ಜಿಯೋ ಆಪ್ ನಲ್ಲಿ ನೇರಪ್ರಸಾರ ವೀಕ್ಷಿಸಬಹುದು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

WTC Final: ರಬಾಡ ದಾಳಿಗೆ ತತ್ತರಿಸಿದ ಕಾಂಗರೂ ಪಡೆ: ದಕ್ಷಿಣ ಆಫ್ರಿಕಾ ತಂಡವೂ ಆರಂಭದಲ್ಲೇ ಕುಸಿತ

WTC Final: ಆಸ್ಟ್ರೇಲಿಯಾ, ಆಫ್ರಿಕಾ ನಡುವೆ ಫೈನಲ್, ಟೀಂ ಇಂಡಿಯಾಗೂ ಸಿಗಲಿದೆ ದುಡ್ಡು

RCB: ಆರ್ ಸಿಬಿ ತಂಡ ಮಾರಾಟಕ್ಕಿದೆ: ಕೊಳ್ಳಲು ದೊಡ್ಡ ಕುಳವೇ ಆಗಿರ್ಬೇಕು ಬಿಡಿ

29 ವರ್ಷಕ್ಕೆ ನಿಕೋಲಸ್‌ ಪೂರನ್‌ ಕ್ರಿಕೆಟ್‌ಗೆ ಗುಡ್‌ಬೈ: ಸ್ಫೋಟಕ ಬ್ಯಾಟರ್‌ನ ನಿರ್ಧಾರಕ್ಕೆ ಅಭಿಮಾನಿಗಳು ಶಾಕ್‌

IND vs ENG test: ಟೀಂ ಇಂಡಿಯಾ, ಇಂಗ್ಲೆಂಡ್ ಟೆಸ್ಟ್ ಸರಣಿ ವೇಳಾಪಟ್ಟಿ ಇಲ್ಲಿದೆ ನೋಡಿ

ಮುಂದಿನ ಸುದ್ದಿ
Show comments