Webdunia - Bharat's app for daily news and videos

Install App

ಭಾರತ-ಆಸ್ಟ್ರೇಲಿಯಾ ಸರಣಿಗೆ ಕಾರ್ಮೋಡ

Webdunia
ಭಾನುವಾರ, 2 ಜುಲೈ 2017 (11:43 IST)
ಸಿಡ್ನಿ: ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯೊಂದಿಗೆ ವೇತನ ವಿಚಾರಕ್ಕೆ ಸಂಬಂಧಿಸಿದಂತೆ  ಅಸಮಾಧಾನ ತಾರಕಕ್ಕೇರಿರುವ ಬೆನ್ನಲ್ಲಿ ಆಸ್ಟ್ರೇಲಿಯಾ ಮತ್ತು ಭಾರತದ ನಡುವೆ ಅಕ್ಟೋಬರ್ ನಲ್ಲಿ ನಡೆಯಬೇಕಿರುವ ಏಕದಿನ ಸರಣಿ ಅನಿಶ್ಚಿತತೆಯಲ್ಲಿದೆ.


ಅಕ್ಟೋಬರ್ ನಲ್ಲಿ ನಡೆಯಲಿರುವ ಸರಣಿಯನ್ನೇ ದಾಳವಾಗಿಟ್ಟಕೊಂಡು ಆಸ್ಟ್ರೇಲಿಯಾ ಕ್ರಿಕೆಟಿಗರು ತಮ್ಮ ಬೇಡಿಕೆ ಈಡೇರಿಸಿಕೊಳ್ಳುವ ಸಾಧ್ಯತೆಯೂ ಇದೆ ಎಂದು ಮೂಲಗಳು ಹೇಳಿವೆ. ಸದ್ಯಕ್ಕೆ ಆಸ್ಟ್ರೇಲಿಯಾದ ದ. ಆಫ್ರಿಕಾ ಪ್ರವಾಸದ ಬಗ್ಗೆ ಸಣ್ಣ ಭರವಸೆಯೊಂದು ಉಳಿದುಕೊಂಡಿದೆ.

ಅದಾದ ಮೇಲೆ ಆಗಸ್ಟ್ ನಲ್ಲಿ ನಡೆಯಬೇಕಿರುವ ಬಾಂಗ್ಲಾದೇಶ ಸರಣಿಗೂ ಮುನ್ನ ಯಾವುದಾದರೊಂದು ತೀರ್ಮಾನಕ್ಕೆ ಬರಲೇಬೇಕೆಂದು ಆಟಗಾರರು ಪಟ್ಟು ಹಿಡಿಯುವ ಸಾಧ್ಯೆತೆಯಿದೆ. ಆದರೆ ಭಾರತದೊಂದಿಗಿನ ಏಕದಿನ ಸರಣಿ ರದ್ದುಗೊಳಿಸಿದರೆ ಬಿಸಿಸಿಐ ಸುಮ್ಮನಿರದು.

ಆ ಭಯ ಕ್ರಿಕೆಟ್ ಆಸ್ಟ್ರೇಲಿಯಾಕ್ಕಿದೆ. ಯಾವ ಸರಣಿಯನ್ನು ತಪ್ಪಿಸಿಕೊಂಡರೂ ಸರಿಯೇ. ಆದರೆ ಭಾರತ ಸರಣಿಯನ್ನು ತಪ್ಪಿಸಿಕೊಂಡರೆ ಕ್ರಿಕೆಟ್ ಆಸ್ಟ್ರೇಲಿಯಾ ಭಾರೀ ಬೆಲೆ ತೆರಬೇಕಾದೀತು ಎಂಬ ಚಿಂತೆಯ್ಲಿ ಕ್ರಿಕೆಟ್ ಆಸ್ಟ್ರೇಲಿಯಾವಿದೆ. ಇದಕ್ಕಿಂತ ಮೊದಲು ಇಂಗ್ಲೆಂಡ್ ನೊಂದಿಗೆ ಆಷಸ್ ಸರಣಿಯಿದ್ದು ಅದೂ ರದ್ದಾದರೆ ಕ್ರಿಕೆಟ್ ಆಸ್ಟ್ರೇಲಿಯಾಕ್ಕೆ ಭಾರೀ ನಷ್ಟವಾಗಬಹುದು. ಹೀಗಾಗಿ ಉಭಯ ಸಂಕಟದಲ್ಲಿ ಆಸ್ಟ್ರೇಲಿಯಾವಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಚುಕ್ಕಾಣಿ ಹಿಡಿದ ಮೊದಲ ಪಂದ್ಯದಲ್ಲೇ ಶುಭಮನ್‌ ಗಿಲ್‌ ಸ್ಮರಣೀಯ ಶತಕ: ದಿಗ್ಗಜರ ಸಾಲಿಗೆ ಯುವ ನಾಯಕ

IND vs ENG: ಕೊಹ್ಲಿ, ರೋಹಿತ್ ಕೊರತೆ ಸ್ವಲ್ಪವೂ ಕಾಡದಂತೆ ನೋಡಿಕೊಂಡ ಯುವ ಬ್ಯಾಟಿಗರು

IND vs ENG: ಆಹಾ.. ಕೆಎಲ್ ರಾಹುಲ್ ಈ ಕ್ಲಾಸಿಕಲ್ ಶಾಟ್ ನೀವು ನೋಡಲೇಬೇಕು video

IND vs ENG: ಟಾಸ್ ಗೆದ್ದ ಇಂಗ್ಲೆಂಡ್, ತಂಡಕ್ಕಾಗಿ ತ್ಯಾಗ ಮಾಡಿದ ಶುಬ್ಮನ್ ಗಿಲ್

ಎಂಟು ವರ್ಷಗಳ ವನವಾಸ ಮುಗಿಸಿದ ಕರುಣ್‌ ನಾಯರ್‌: ಟೆಸ್ಟ್‌ ಅಗ್ನಿಪರೀಕ್ಷೆಗೆ ಸಜ್ಜಾದ ಕನ್ನಡಿಗ

ಮುಂದಿನ ಸುದ್ದಿ
Show comments