Webdunia - Bharat's app for daily news and videos

Install App

ಅಗ್ರ ಸ್ಥಾನಕ್ಕೇರುತ್ತಾ ಕೊಹ್ಲಿ ಪಡೆ?

Webdunia
ಶುಕ್ರವಾರ, 30 ಸೆಪ್ಟಂಬರ್ 2016 (11:05 IST)
5 ವರ್ಷಗಳ ಬಳಿಕ ಟೆಸ್ಟ್ ವಿಭಾಗದಲ್ಲಿ ನಂಬರ್ 1 ಪಟ್ಟಕ್ಕೇರುವ ಸುವರ್ಣ ಅವಕಾಶ ಕೊಹ್ಲಿ ಪಡೆಗೆ ಒದಗಿ ಬಂದಿದೆ. ಕಿವೀಸ್ ವಿರುದ್ಧ ಇಂದಿನಿಂದ ನಡೆಯುತ್ತಿರುವ ಟೆಸ್ಟ್ ಸರಣಿಯನ್ನು 2-0 ಅಂತರದಿಂದ ಗೆದ್ದರೆ ಭಾರತ ವೈಟ್ ಜರ್ಸಿಯಲ್ಲಿ ಪಾಕಿಸ್ತಾನವನ್ನು ಹಿಂದಿಕ್ಕಿ ನಂಬರ್ 1 ಪಟ್ಟಕ್ಕೆ ಲಗ್ಗೆ ಇಡಲಿದೆ.


 
ಭಾರತದ ಕ್ರಿಕೆಟ್ ಕಾಶಿ ಈಡನ್ ಗಾರ್ಡನ್ಸ್ ಅನೇಕ ಸಂಭ್ರಮಗಳಿಗೆ, ಕಹಿ ನೆನಪುಗಳಿಗೆ ಸಾಕ್ಷಿಯಾದ ಮೈದಾನ. 500ನೇ ಟೆಸ್ಟ್ ಪಂದ್ಯವನ್ನು ಗೆದ್ದು ಬೀಗುತ್ತಿರುವ ಕೊಹ್ಲಿ ಪಡೆ ಇಂದು ಈಡನ್ ಮೈದಾನದಲ್ಲಿ ಐತಿಹಾಸಿಕ 250ನೇ ತವರು ಟೆಸ್ಟ್ ಗೆಲ್ಲುವ ಉತ್ಸಾಹದೊಂದಿಗೆ ಕಣಕ್ಕಿಳಿಯಲಿದೆ.  
 
ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ಈಗಾಗಲೇ 1-0 ಯಿಂದ ಮುಂದಿದೆ. ಇಂದಿನಿಂದ ನಡೆಯಲಿರುವ ಐತಿಹಾಸಿಕ 250 ಕ್ರಿಕೆಟ್ ಕಾಶಿ ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನ ಭಾರತದ ನಂಬರ್ 1 ಸ್ಥಾನವನ್ನು ನಿರ್ಧರಿಸಲಿದೆ. 
 
ಮೊದಲ ಸ್ಥಾನಿ ಪಾಕ್‌ಗಿಂತ (111) ಭಾರತ ಕೇವಲ ಒಂದು ಅಂಕ ಹಿಂದಿದ್ದು ( 110) ಕೊಹ್ಲಿ ತನ್ನ ಸಾಂಪ್ರದಾಯಿಕ ಎದುರಾಳಿಯನ್ನು ಹಿಂದಿಕ್ಕಿ ತಂಡವನ್ನು ಅಗ್ರ ಸ್ಥಾನಕ್ಕೇರಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. 
 
ನಂಬರ್ 1 ಸ್ಥಾನವನ್ನು ಕಾಪಾಡಿಕೊಳ್ಳಲು ಪಾಕ್ ಹಾದಿ ಬಹಳ ಕಠಿಣವಾಗಿದೆ. ಅಗ್ರ ಸ್ಥಾನದಲ್ಲಿ ಮುಂದುವರೆಯಲು ಅದು ಮುಂಬರುವ ಸರಣಿಯಲ್ಲಿ ವಿಂಡೀಸ್ ತಂಡವನ್ನು ವೈಟ್ ವಾಶ್ ಮಾಡಬೇಕು.
 
ತವರಿನಲ್ಲಿ ನಡೆಯುತ್ತಿರುವ 250ನೇ ಪಂದ್ಯವನ್ನು  ಸ್ಮರಣೀಯವಾಗಿಸಲು ಬಂಗಾಲ ಕ್ರಿಕೆಟ್ ಸಂಸ್ಥೆ ನಿರ್ಧರಿಸಿದೆ.ಪಂದ್ಯ ಆರಂಭವಾಗುವುದಕ್ಕೂ ಮೊದಲು ಎರಡು ತಂಡಗಳಿಗೆ ಸನ್ಮಾನ ಮಾಡಲು ಬಿಸಿಸಿಐ ಮತ್ತು ಬಂಗಾಳ್ ಕ್ರಿಕೆಟ್ ಸಂಸ್ಥೆ ಎಲ್ಲ ರೀತಿಯ ತಯಾರಿ ನಡೆಸಿದೆ.  ಇಂಗ್ಲೆಂಡ್‌ನ ಲಾರ್ಡ್ಸ್‌ನಲ್ಲಿ ಘಂಟೆ ಬಾರಿಸಿ ಟೆಸ್ಟ್ ಪಂದ್ಯಕ್ಕೆ ಚಾಲನೆ ನೀಡುವಂತೆ ಈಡನ್‌ನಲ್ಲೂ ಘಂಟಾನಾದದೊಂದಿಗೆ 2ನೇ ಟೆಸ್ಟ್‌ಗೆ ಚಾಲನೆ ನೀಡಲಾಗುವುದು.
 
ಅಲ್ಲದೇ ರಾಜ್ಯಾದ್ಯಾಂತ 4000 ವಿಶೇಷ ಚೇತನ ಮಕ್ಕಳಿಗೆ ಟೆಸ್ಟ್ ಪಂದ್ಯದ ಮೊದಲ ದಿನದಾಟವನ್ನು ಉಚಿತವಾಗಿ ವೀಕ್ಷಿಸಲು ಅವಕಾಶ ಮಾಡಿಕೊಡಲಾಗುವುದು ಎಂದು ಬಂಗಾಳ್ ಕ್ರಿಕೆಟ್ ಸಂಸ್ಥೆ ಜಂಟಿ ಕಾರ್ಯದರ್ಶಿ ಅವಿಷೇಕ್ ದಾಲ್ಮಿಯಾ ತಿಳಿಸಿದ್ದಾರೆ. 
 
ಇಂದಿನ ಬದಲಾವಣೆ ಎಂದರೆ ಮೊದಲ ಟೆಸ್ಟ್ ಪಂದ್ಯದಲ್ಲಿ ಗಾಯಗೊಂಡು ನಿರ್ಗಮಿಸಿರುವ ಆರಂಭಿಕ ಆಟಗಾರ ಕೆ.ಎಲ್ ರಾಹುಲ್ ಬದಲು ಹಿರಿಯ ಆಟಗಾರ ಗೌತಮ್ ಗಂಭೀರ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಆದರೆ ಅವರು 11 ಸದಸ್ಯರಲ್ಲಿ ಸ್ಥಾನ ಗಿಟ್ಟಿಸುತ್ತಾರೋ ಅಥವಾ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ರೋಹಿತ್ ಶರ್ಮಾ ಬೆನ್ನಲ್ಲೇ ಟೆಸ್ಟ್‌ಗೆ ಗುಡ್‌ಬೈ ಹೇಳಲು ಬಯಸಿದ್ದ ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿ

IPL 2025: ಮುಂದಿನ ಐಪಿಎಲ್ ಪಂದ್ಯಾಟ ನಡೆಯಲು ಐಡಿಯಾ ಕೊಟ್ಟ ಕ್ರಿಕೆಟಿಗ ಮೈಕೆಲ್ ವಾಘನ್

Rohit Sharma: ಈ ಸಂದರ್ಭದಲ್ಲಿ ಪ್ರತಿಯೊಬ್ಬನು ಜವಾಬ್ದಾರಿಯುತವಾಗಿರಬೇಕು: ರೋಹಿತ್ ಶರ್ಮಾ

Virat Kohli: ಭಾರತ ಪಾಕಿಸ್ತಾನ ಬಗ್ಗೆ ಕೊನೆಗೂ ತುಟಿಬಿಚ್ಚಿದ ವಿರಾಟ್ ಕೊಹ್ಲಿ ಹೇಳಿದ್ದೇನು

IPL 2025: ಐಪಿಎಲ್ 2025 ರದ್ದುಗೊಳಿಸಿದ ಬಿಸಿಸಿಐ

ಮುಂದಿನ ಸುದ್ದಿ
Show comments