IND vs ENG test: ದ್ವಿಶತಕದ ನಿರೀಕ್ಷೆಯಲ್ಲಿ ಯಶಸ್ವಿ ಜೈಸ್ವಾಲ್

Krishnaveni K
ಶುಕ್ರವಾರ, 2 ಫೆಬ್ರವರಿ 2024 (16:34 IST)
Photo Courtesy: Twitter
ವಿಶಾಖಪಟ್ಟಣಂ: ಭಾರತ ಮತ್ತು ಇಂಗ್ಲೆಂಡ್ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಟೀಂ ಇಂಡಿಯಾ 6 ವಿಕೆಟ್ ನಷ್ಟಕ್ಕೆ 336 ರನ್ ಗಳಿಸಿ ದಿನದಾಟ ಮುಗಿಸಿದೆ.

ಇಂದು ಶತಕ ಗಳಿಸಿ ಮಿಂಚಿದ ಯಶಸ್ವಿ ಜೈಸ್ವಾಲ್ 179 ರನ್ ಗಳಿಸಿ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಜೊತೆಗೆ ಚೊಚ್ಚಲ ದ್ವಿಶತಕದ ನಿರೀಕ್ಷೆಯಲ್ಲಿದ್ದಾರೆ. ಇಂದಿನ ದಿನದಾಟದಲ್ಲಿ ಭಾರತ ಉತ್ತಮ ಬ್ಯಾಟಿಂಗ್ ನಡೆಸಿದ್ದು, ನಾಳೆಗೆ ಮತ್ತಷ್ಟು ರನ್ ವಿಸ್ತರಿಸಿ ಎದುರಾಳಿಗೆ ದೊಡ್ಡ ಮೊತ್ತ ಸವಾಲು ನೀಡುವ ವಿಶ್ವಾಸದಲ್ಲಿದೆ.

ದಾಖಲೆಯ ಶತಕ ಸಿಡಿಸಿದ ಜೈಸ್ವಾಲ್
ಯಶಸ್ವಿ ಜೈಸ್ವಾಲ್ ಗೆ ಇದು ಟೆಸ್ಟ್ ಮಾದರಿಯಲ್ಲಿ ಎರಡನೇ ಶತಕವಾಗಿತ್ತು. 23 ವರ್ಷದ ಒಳಗಿನ ಕಿರಿಯ ವಯಸ್ಸಿನಲ್ಲಿ ಭಾರತ ಮತ್ತು ವಿದೇಶದಲ್ಲಿ ಶತಕ ಸಿಡಿಸಿದ ರವಿಶಾಸ್ತ್ರಿ, ಸಚಿನ್ ತೆಂಡುಲ್ಕರ್ ಸೇರಿದಂತೆ ಕೆಲವೇ ಆಟಗಾರರ ಪಟ್ಟಿಗೆ ಅವರೂ ಸೇರಿಕೊಂಡರು. ಹಾಗೆ ನೋಡಿದರೆ ಅವರು ಇಂದೇ ದ್ವಿಶತಕ ಪೂರೈಸಬಹುದು ಎಂಬ ನಿರೀಕ್ಷೆಯಿತ್ತು. ಆದರೆ 150 ರನ್ ಗಳ ನಂತರ ಜೈಸ್ವಾಲ್ ಕೊಂಚ ಎಚ್ಚರಿಕೆಯ ಆಟವಾಡಿದರು. ಕಳೆದ ಪಂದ್ಯದಲ್ಲಿ 80 ರನ್ ಗೆ ಔಟಾಗಿ ಶತಕ ವಂಚಿತರಾಗಿ ನಿರಾಸೆ ಅನುಭವಿಸಿದ್ದರು. ಆ ನಿರಾಸೆಯನ್ನು ಇಂದು ಬಡ್ಡಿ ಸಮೇತ ತೀರಿಸಿಕೊಂಡರು.

ಚೊಚ್ಚಲ ಪಂದ್ಯವಾಡುತ್ತಿರುವ ರಜತ್ ಪಟಿದಾರ್ 32 ರನ್ ಗಳಿಗೆ ತೃಪ್ತಿಪಟ್ಟುಕೊಂಡರು. ಅಕ್ಷರ್ ಪಟೇಲ್ 27 ರನ್ ಗಳ ಕೊಡುಗೆ ನೀಡಿದರು. ದಿನದಂತ್ಯಕ್ಕೆ ವಿಕೆಟ್ ಕಾಯ್ದುಕೊಳ್ಳುವಲ್ಲಿ ವಿಫಲರಾದ ವಿಕೆಟ್ ಕೀಪರ್ ಬ್ಯಾಟಿಗ ಕೆಎಸ್ ಭರತ್ 17 ರನ್ ಗೆ ಔಟಾದರು. ಇದರಿಂದಾಗಿ ಭಾರತಕ್ಕೆ ಕೊಂಚ ಹಿನ್ನಡೆಯಾಯಿತು.

ಅತ್ತ ಇಂಗ್ಲೆಂಡ್ ಪರ ಶೊಯೇಬ್ ಬಾಶಿರ್, ರೆಹಾನ್ ಅಹ್ಮದ್ ತಲಾ 2, ಜೇಮ್ಸ್ ಆಂಡರ್ಸನ್, ಟಾಮ್ ಹಾರ್ಟ್ಲೀ ತಲಾ 1 ವಿಕೆಟ್ ಕಬಳಿಸಿದರು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಐಪಿಎಲ್ ಹರಾಜು ಯಾಕೆ ಭಾರತದಲ್ಲಿ ನಡೆಯಲ್ಲ: ಪ್ರಿಯಾಂಕ್ ಖರ್ಗೆ ತಕರಾರು

ಆರ್‌ಸಿಬಿ ತವರು ನೆಲದಲ್ಲಿಯೇ ಐಪಿಎಲ್‌ ಉದ್ಘಾಟನಾ ಪಂದ್ಯ

IPL Auction 2026: ಕ್ಯಾಮರೂನ್ ಗ್ರೀನ್ ಗೆ 25 ಕೋಟಿ, ಮಹೇಶ್ ಪತಿರಾಣಗೆ 18 ಕೋಟಿ: ಐಪಿಎಲ್ ಭರ್ಜರಿ ಸೇಲ್

ಐಪಿಎಲ್‌ ಮಿನಿ ಹರಾಜಿಗೆ ಕ್ಷಣಗಣನೆ: ಯಾರಿಗೆ ಒಲಿಯಲಿದೆ ಜಾಕ್‌ಪಾಟ್‌, ನೇರಪ್ರಸಾರದ ಮಾಹಿತಿ ಇಲ್ಲಿದೆ

ಜಸ್ಪ್ರೀತ್ ಬುಮ್ರಾ ದಿಡೀರ್ ಮನೆಗೆ ಮರಳಿದ್ದೇಕೆ, ಕಾರಣ ಬಯಲು

ಮುಂದಿನ ಸುದ್ದಿ
Show comments