Daily Horoscope
✕

IND vs ENG test: ಈ ಕಾರಣಕ್ಕೆ ಇಂದಿನ ದಿನದಾಟಕ್ಕೆ ರವಿಚಂದ್ರನ್ ಅಶ್ವಿನ್ ಗೈರು

Krishnaveni K
ಶನಿವಾರ, 17 ಫೆಬ್ರವರಿ 2024 (09:35 IST)
Photo Courtesy: Twitter
ರಾಜ್ ಕೋಟ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಮೂರನೇ ದಿನದಾಟದಲ್ಲಿ ಇಂದು ರವಿಚಂದ್ರನ್ ಅಶ್ವಿನ್‍ ಕೌಟುಂಬಿಕ ಕಾರಣಗಳಿಂದಾಗಿ ಗೈರಾಗಲಿದ್ದಾರೆ.
 

ಇಂದಿನ ದಿನದಾಟದಲ್ಲಿ ಅಶ್ವಿನ್ ಗೈರಾಗಲಿದ್ದಾರೆ. ಆದರೆ ನಾಳೆ ಅವರು ಪಂದ್ಯಕ್ಕೆ ಲಭ್ಯರರಿರಲಿದ್ದಾರೆ. ಕ್ರಿಕೆಟ್ ನಲ್ಲಿ ಈ ರೀತಿ ಆಗುವುದು ಬಲು ಅಪರೂಪ. ಆದರೆ ಅಶ್ವಿನ್ ಅನಿವಾರ್ಯ ಕಾರಣಗಳಿಗೆ ಮನೆಗೆ ತೆರಳಲೇಬೇಕಾದ ಪರಿಸ್ಥಿತಿ ಬಂದಿದೆ. ಹೀಗಾಗಿ ಅವರು ನಿನ್ನೆಯೇ ಚೆನ್ನೈಗೆ ಮರಳಿದ್ದಾರೆ. ಅಂತಹ ಸಂದರ್ಭವೇನು?

ರವಿಚಂದ್ರನ್ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದು ಅವರನ್ನು ನೋಡಲು ಅನಿವಾರ್ಯವಾಗಿ ಅಶ್ವಿನ್ ತೆರಳಬೇಕಾಗಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಅಶ್ವಿನ್ ತಾಯಿಗೆ ಅನಾರೋಗ್ಯವಾಗಿದ್ದು, ಅದಕ್ಕಾಗಿ ಅವರು ರಾಜ್ ಕೋಟ್ ನಿಂದ ನೇರವಾಗಿ ಮನೆಗೆ ತೆರಳಲಿದ್ದಾರೆ. ಅವರು ಬೇಗನೇ ಹುಷಾರಾಗಲಿ ಎಂದು ಹಾರೈಸಿದ್ದಾರೆ.

ಇಂಗ್ಲೆಂಡ್ ಮೊದಲ ಇನಿಂಗ್ಸ್ ನಲ್ಲಿ ನಿನ್ನೆಯ ದಿನ ಅಶ್ವಿನ್ ಮೊದಲ ವಿಕೆಟ್ ಕೀಳುವುದರ ಮೂಲಕ ಭಾರತಕ್ಕೆ ಬ್ರೇಕ್ ಥ್ರೂ ನೀಡಿದ್ದರು. ಜೊತೆಗೆ ಟೆಸ್ಟ್ ಕ್ರಿಕೆಟ್ ನಲ್ಲಿ 500 ವಿಕೆಟ್ ಕಿತ್ತು ದಾಖಲೆ ಮಾಡಿದ್ದರು. ವಿಪರ್ಯಾಸವೆಂದರೆ ಇಂತಹ ಖುಷಿಯ ಸಂದರ್ಭದಲ್ಲಿಯೇ ಅಮ್ಮನ ಅನಾರೋಗ್ಯದ ಸುದ್ದಿ ಅವರನ್ನು ಕಂಗೆಡಿಸಿದೆ. ಮತ್ತೊಂದೆಡೆ ಬೀಡು ಬೀಸಾಗಿ ಬ್ಯಾಟ್ ಮಾಡುತ್ತಿರುವ ಇಂಗ್ಲೆಂಡ್ ಗೆ ಕಡಿವಾಣ ಹಾಕಲು ಇಂದು ಅಶ‍್ವಿನ್ ಇರಲೇಬೇಕಿತ್ತು. ಅವರ ಅನುಪಸ್ಥಿತಿ ಟೀಂ ಇಂಡಿಯಾಗೂ ಕಾಡಲಿದೆ.
 

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs WI : ಇಂದಿನ ಪಂದ್ಯದ ಪಿಚ್ ವರದಿ, ಲೈವ್ ಸ್ಟ್ರೀಮಿಂಗ್ ಮತ್ತು ಟೀಂ ಇಂಡಿಯಾ ಸಂಭಾವ್ಯ ಬದಲಾವಣೆಗಳು

ಬೌಲರ್‌ಗಳ ವೃತ್ತಿಜೀವನ ಅಪಾಯದಲ್ಲಿದೆ: ಸೀಮಿತ ಓವರ್‌ಗಳ ಪಿಚ್‌ಗಳ ವಿರುದ್ಧ ಗೌತಮ್ ಗಂಭೀರ್ ಆಕ್ರೋಶ

ಮನೆಯಲ್ಲಿ ಟಿವಿ ನೋಡುತ್ತಲೇ ಲಾಸ್ಟ್ ಐದು ಓವರ್ ಬೌಲಿಂಗ್ ಪ್ಲ್ಯಾನ್ ಮಾಡಿದ ಸೂರ್ಯಕುಮಾರ್ ಯಾದವ್ Video

IND vs WI: ಅಯ್ಯೋ ಚೇಟಾ ಸೆಂಚುರಿ ಮಿಸ್ ಆಯ್ತಲ್ಲಾ.. ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಸಂಜು ಸ್ಯಾಮ್ಸನ್

IND vs WI 2nd T20I: ರಾಂಚಿಯಲ್ಲಿ ರೋಚಕ ಸಮರ, ಪಂದ್ಯದ ಸಮಯ, ಟಿವಿ ಹಾಗೂ ಲೈವ್ ಸ್ಟ್ರೀಮಿಂಗ್ ವಿವರ ಇಲ್ಲಿದೆ

ಮುಂದಿನ ಸುದ್ದಿ
Show comments