Webdunia - Bharat's app for daily news and videos

Install App

ಇಮ್ರಾನ್ ತಾಹಿರ್ 7 ವಿಕೆಟ್ ಸಾಧನೆ: ವೆಸ್ಟ್ ಇಂಡೀಸ್‌ಗೆ ಹೀನಾಯ ಸೋಲು

Webdunia
ಗುರುವಾರ, 16 ಜೂನ್ 2016 (19:23 IST)
ದಕ್ಷಿಣ ಆಫ್ರಿಕಾ ತ್ರಿಕೋನ ಏಕ ದಿನ ಸರಣಿಯ 6 ನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 139 ರನ್ ಜಯಗಳಿಸುವ ಮೂಲಕ  ಇಮ್ರಾನ್ ತಾಹಿರ್ ದಾಖಲೆ ಪುಸ್ತಕದಲ್ಲಿ ತಮ್ಮ ಹೆಸರು ಬರೆದಿದ್ದಾರೆ. 343ಕ್ಕೆ ನಾಲ್ಕು ವಿಕೆಟ್‌ಗಳ ಸದೃಢ ಮೊತ್ತವನ್ನು ಗಳಿಸಿದ ದ. ಆಫ್ರಿಕಾ ಪರ ಲೆಗ್ ಸ್ಪಿನ್ನರ್ 9 ಓವರುಗಳಲ್ಲಿ 45 ರನ್ ನೀಡಿ ಏಳು ವಿಕೆಟ್ ಕಬಳಿಸಿದ್ದು, ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ದಕ್ಷಿಣ ಆಫ್ರಿಕಾ ಬೌಲರ್ ಅತ್ಯುತ್ತಮ ಸಾಧನೆಯೆನಿಸಿದೆ.
 
ತಾಹಿರ್ ತಮ್ಮ 58ನೇ ಪಂದ್ಯದಲ್ಲಿ ಮಾರ್ನ್ ಮಾರ್ಕೆಲ್ ಅವರ ಅತೀ ವೇಗದ 100 ಏಕದಿನ ವಿಕೆಟ್‌ಗಳ ದಾಖಲೆಯನ್ನು ಮುರಿದಿದ್ದಾರೆ.

ಇದಕ್ಕೆ ಮುಂಚೆ ಹಷೀಮ್ ಆಮ್ಲಾ ಅವರ 110 ರನ್ ಶತಕ, ಕ್ವಿಂಟನ್ ಡಿ ಕಾಕ್ ಅವರ 71 ರನ್ ಮತ್ತು ಪ್ಲೆಸಿಸ್ 73 ರನ್ ನೆರವಿನಿಂದ ದಕ್ಷಿಣ ಆಫ್ರಿಕಾ  4 ವಿಕೆಟ್ ಕಳೆದುಕೊಂಡು 343 ರನ್ ಗಳಿಸಿತ್ತು.

ತಾಹಿಲ್ ಮತ್ತು ಶಾಮ್ಶಿ(  41ಕ್ಕೆ 2) ವೆಸ್ಟ್ ಇಂಡೀಸ್ ಬ್ಯಾಟಿಂಗ್‌ ಪತನಕ್ಕೆ ಕಾರಣರಾದರು. ತಾಹಿರ್ ದಾಖಲೆಯ ವಿಕೆಟ್ ಪತನ ಒಂದು ಓವರಿನಲ್ಲಿ ಮೂರು ವಿಕೆಟ್‌ಗಳಾಗಿದ್ದು, 38 ಓವರುಗಳಲ್ಲಿ ಆತಿಥೇಯರು 204 ರನ್‌ಗಳಿಗೆ ಆಲೌಟ್‌ ಆದರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 
 
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IPL 2025: ಐಪಿಎಲ್ 2025 ರ ಹೊಸ ವೇಳಾಪಟ್ಟಿ ವಿವರ

Virat Kohli retirement: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗೆ ವಿದಾಯ ಪಂದ್ಯವನ್ನೂ ನೀಡದೇ ಗೇಟ್ ಪಾಸ್

Virat Kohli: ವಿರಾಟ್ ಕೊಹ್ಲಿ ಸ್ಥಾನಕ್ಕೆ ಕ್ಯೂನಲ್ಲಿ ನಿಂತಿರುವ ಟೀಂ ಇಂಡಿಯಾ ಕ್ರಿಕೆಟಿಗರು

Virat Kohli: ಪತಿ ನಿವೃತ್ತಿ ಬಗ್ಗೆ ಹೃದಯಸ್ಪರ್ಶಿ ಪೋಸ್ಟ್ ಹಂಚಿದ ಅನುಷ್ಕಾ ಶರ್ಮಾ

Virat Kohli: ಟೆಸ್ಟ್‌ಗೆ ವಿದಾಯ ಘೋಷಿಸುವ ಕೆಲ ಕ್ಷಣಗಳ ಮುಂಚೆ ವಿರಾಟ್ ಕೊಹ್ಲಿ ಕಾಣಿಸಿಕೊಂಡಿದ್ದು ಎಲ್ಲಿ ಗೊತ್ತಾ

ಮುಂದಿನ ಸುದ್ದಿ
Show comments