Select Your Language

Notifications

webdunia
webdunia
webdunia
webdunia

ಮಧ್ಯಪ್ರದೇಶದಿಂದ ಕಡೆಗಣನೆ: ದೇಶ ತೊರೆದು ಓಮನ್ ಪರ ಆಡುವ ಭಾರತೀಯ ಬೌಲರ್

ಮಧ್ಯಪ್ರದೇಶದಿಂದ  ಕಡೆಗಣನೆ:  ದೇಶ ತೊರೆದು ಓಮನ್ ಪರ ಆಡುವ ಭಾರತೀಯ ಬೌಲರ್
ಭೂಪಾಲ್ , ಸೋಮವಾರ, 27 ಜುಲೈ 2015 (20:32 IST)
ಮಧ್ಯಪ್ರದೇಶದ ಸಿಹೋರ್ ಎಕ್ಸ್‌ಪ್ರೆಸ್ ಎಂದೇ ಹೆಸರಾಗಿದ್ದ ಮುನಿಷ್ ಅನ್ಸಾರಿ ಭಾರತದಲಸ್ಲಿ ಮುಂದಿನ ವರ್ಷ ನಡೆಯುವ ವಿಶ್ವ ಟ್ವೆಂಟಿ 20ಯಲ್ಲಿ ಆಡಲಿದ್ದಾರೆ. ಆದರೆ ಅವರು ಭಾರತದ ತಂಡದಲ್ಲಿ ಆಡುತ್ತಿಲ್ಲ. ಅವರು ಆಡುತ್ತಿರುವುದು ಓಮನ್ ತಂಡದಲ್ಲಿ. ಮಧ್ಯಪ್ರದೇಶ ತಂಡಕ್ಕೆ ಆಯ್ಕೆಯಾಗದ ಅನ್ಸಾರಿ ಓಮನ್‌ಗೆ ಹಾರಿ ಅಲ್ಲಿ ವೃತ್ತಿನಿರತ ಕ್ರಿಕೆಟ್ ಆಡುವ ಕನಸನ್ನು ನನಸು ಮಾಡಿಕೊಂಡರು.

ನಮೀಬಿಯಾ ವಿರುದ್ದ ಓಮನ್ ನಿರ್ಣಾಯಕ ಪಂದ್ಯದಲ್ಲಿ  ಅನ್ಸಾರಿ 23 ರನ್ ನೀಡಿ 3 ವಿಕೆಟ್ ಕಬಳಿಸಿ ನಬೀಬಿಯಾವನ್ನು 148 ರನ್‌ಗೆ ನಿರ್ಬಂಧಿಸಿತು. ಇದಕ್ಕೆ ಉತ್ತರವಾಗಿ ಓಮನ್ 19 ಓವರುಗಳಲ್ಲಿ ಗುರಿಯನ್ನು ಮುಟ್ಟಿ ವಿಶ್ವ ಟಿ20ಗೆ ಅರ್ಹತೆ ಪಡೆಯಿತು. 
 
ಇಡೀ ಕುಟುಂಬ ಅವರ ಬಗ್ಗೆ ಹೆಮ್ಮೆ ಹೊಂದಿದೆ. ಗಂಟೆಗೆ 145 ಕಿಮೀ ವೇಗದ ಗುರಿಯನ್ನು ಮುಟ್ಟಿದ್ದರೂ ಮಧ್ಯಪ್ರದೇಶ ತಂಡಕ್ಕೆ ಆಯ್ಕೆಯಾಗಿರಲಿಲ್ಲ. ಇದರಿಂದ ಬೇಸತ್ತು ದೇಶವನ್ನು ತೊರೆದು ಇನ್ನೊಂದು ದೇಶದ ಪರ ಆಡಿದರು ಎಂದು ಮುನಿಷ್ ಸೋದರ ಯುನುಸ್ ಹೇಳಿದ್ದಾರೆ. 
 
 ಸ್ಥಳೀಯ ತಂಡದಲ್ಲಿ ತಾರತಮ್ಯದಿಂದ ಅವನಿಗೆ ಅವಕಾಶ ಸಿಗಲಿಲ್ಲ. ಕೆಲವೇ ವೇಗಿಗಳಲ್ಲಿ ಒಬ್ಬರಾಗಿದ್ದರೂ, ಡಿವಿಷನ್ ಟೀಂನಲ್ಲಿ ಅವರನ್ನು ಪರಿಗಣಿಸಲಿಲ್ಲ. ಆದ್ದರಿಂದ ಅವರು 6 ತಿಂಗಳ ಹಿಂದೆ ದೇಶವನ್ನು ತೊರೆದರು ಎಂದು ಯುನುಸ್ ಹೇಳಿದ್ದಾರೆ.

Share this Story:

Follow Webdunia kannada