Select Your Language

Notifications

webdunia
webdunia
webdunia
webdunia

ಗಂಭೀರ ಗಾಯ : ಕ್ವಾರ್ಟರ್‌ಫೈನಲ್‌‌ಗೆ ಪಾಕಿಸ್ತಾನದ ವೇಗಿ ಮೊಹಮ್ಮದ್ ಇರ್ಫಾನ್ ಅಲಭ್ಯ

ಗಂಭೀರ ಗಾಯ : ಕ್ವಾರ್ಟರ್‌ಫೈನಲ್‌‌ಗೆ ಪಾಕಿಸ್ತಾನದ ವೇಗಿ ಮೊಹಮ್ಮದ್ ಇರ್ಫಾನ್ ಅಲಭ್ಯ
ಅಡಿಲೇಡ್ , ಮಂಗಳವಾರ, 17 ಮಾರ್ಚ್ 2015 (16:29 IST)
ಪಾಕಿಸ್ತಾನದ ವೇಗದ ಬೌಲರ್ ಮೊಹಮ್ಮದ್ ಇರ್ಫಾನ್ ಗಂಭೀರವಾಗಿ ಗಾಯಗೊಂಡ ಹಿನ್ನೆಲೆಯಲ್ಲಿ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಆಡುವುದಿಲ್ಲ ಎಂದು ಪಾಕ್ ಕ್ರಿಕೆಟ್ ಬೋರ್ಡ್ ಮಾಹಿತಿ ನೀಡಿದೆ.

ಕಳೆದ ಸೋಮುವಾರದಂದು ಮೊಹಮ್ಮದ್ ಇರ್ಫಾನ್ ಗಾಯದ ಬಗ್ಗೆ ಸ್ಕ್ಯಾನ್ ಮಾಡಲಾಗಿದ್ದು, ಮತ್ತಷ್ಟು ಪರೀಕ್ಷೆಯ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಗಾಯ ಗಂಭೀರ ಪ್ರಮಾಣದ್ದಾಗಿದ್ದರಿಂದ ಅವರಿಗೆ ವಿಶ್ರಾಂತಿ ಅಗತ್ಯವಿದೆ ಎಂದು ವೈದ್ಯರು ಹೇಳಿದ್ದರಿಂದ ಇರ್ಫಾನ್ ವಿಶ್ವಕಪ್ ಮುಂದಿನ ಪಂದ್ಯಗಳಲ್ಲಿ ಆಡುವ ಅವಕಾಶದಿಂದ ವಂಚಿತರಾಗಿದ್ದಾರೆ.

ವೇಗಿ ಮೊಹಮ್ಮದ್ ಇರ್ಫಾನ್ ಅವರ ಬದಲಿಗೆ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಆಡುವ ಆಟಗಾರನ ಹೆಸರನ್ನು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಬಹಿರಂಗಪಡಿಸಿಲ್ಲ ಎಂದು ಮೂಲಗಳು ತಿಳಿಸಿವೆ.

Share this Story:

Follow Webdunia kannada