Select Your Language

Notifications

webdunia
webdunia
webdunia
webdunia

ಸಚಿನ್, ಶೇನ್ ವಾರ್ನ್ ಟಿ 20 ಸರಣಿಗೆ ಐಸಿಸಿ ಹಸಿರು ನಿಶಾನೆ

ಸಚಿನ್, ಶೇನ್ ವಾರ್ನ್ ಟಿ 20 ಸರಣಿಗೆ ಐಸಿಸಿ ಹಸಿರು ನಿಶಾನೆ
ನವದೆಹಲಿ , ಮಂಗಳವಾರ, 15 ಸೆಪ್ಟಂಬರ್ 2015 (17:22 IST)
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ಸಚಿನ್ ತೆಂಡೂಲ್ಕರ್ ಮತ್ತು ಶೇನ್ ವಾರ್ನ್ ಪ್ರಾಯೋಜಕತ್ವದ  ಮೂರು ಪಂದ್ಯಗಳ ಟಿ20 ಸರಣಿಗೆ ಅನುಮತಿ ನೀಡಿದೆ. ಇಬ್ಬರು ಲೆಜೆಂಡ್‌ಗಳ ಜೊತೆ ಮಾತುಕತೆ ಬಳಿಕ ಐಸಿಸಿ ಅನುಮತಿ ಸಿಕ್ಕಿದೆ. ವಿಶ್ವ ಕ್ರಿಕೆಟ್ ಸಂಸ್ಥೆಯಿಂದ ಅನುಮತಿ ಪಡೆಯಲು ತೆಂಡೂಲ್ಕರ್ ಅವರ ಮನವೊಲಿಕೆಯ ಕೌಶಲ್ಯ ಬೇಕಾಯಿತು ಎಂದು ತಿಳಿದುಬಂದಿದೆ. 
 
ನವೆಂಬರ್‌ನಲ್ಲಿ ಈ ಪಂದ್ಯ ನಡೆಯಲಿದ್ದು, ಐಸಿಸಿಗೆ ಅದರಿಂದ ಯಾವುದೇ ಸಮಸ್ಯೆಯಿಲ್ಲ. ಆದರೆ ತೆಂಡೂಲ್ಕರ್ ಮತ್ತು ವಾರ್ನ್‌ಗೆ ಕೆಲವು ಷರತ್ತುಗಳನ್ನು ವಿಧಿಸಿದ್ದು, ಅದಕ್ಕೆ ಬದ್ಧರಾಗಲು ಅವರಿಬ್ಬರು ಒಪ್ಪಿದ್ದಾರೆ ಎಂದು ಸಮೀಪವರ್ತಿ ಮೂಲಗಳು ಹೇಳಿವೆ. 
 
ಮೊದಲಿಗೆ ಇದು ಮೂರುವರೆ ವರ್ಷಗಳಲ್ಲಿ ಕೆನಡಾ, ಸಿಂಗಪೂರ, ಹಾಂಕಾಂಗ್ ಮತ್ತು ಯುಎಇನಲ್ಲಿ ನಡೆಯುವ ಪ್ರದರ್ಶನ ಪಂದ್ಯಗಳ ಸರಣಿ ಎಂದು ಸಲಹೆ ಮಾಡಲಾಗಿತ್ತು.  ಆದರೆ ಮೂರು ಪಂದ್ಯಗಳ ಒಂದು ಸರಣಿಗೆ ಮಾತ್ರ ಅನುಮತಿ ಸಿಕ್ಕಿದ್ದು, ವಿಸ್ತರಣೆ ಮಾಡುವುದಾದರೆ ಮುಂದೆ ಚರ್ಚಿಸಬಹುದು ಎಂದು ಮೂಲಗಳು ಹೇಳಿವೆ. 
ಮೂರು ಟಿ20 ಪಂದ್ಯಗಳಿಂದ ಬಂದ ಗಳಿಕೆಯ ಕೆಲವು ಭಾಗವು ಐಸಿಸಿಗೆ ಹೋಗಲಿದ್ದು,ಅಮೆರಿಕದಲ್ಲಿ  ಕ್ರಿಕೆಟ್ ಆಟದ ಪ್ರಚಾರಕ್ಕೆ ಅದು ಬಳಸುತ್ತದೆ.

ಸಚಿನ್ ಮತ್ತು ವಾರ್ನ್ ಅವರಲ್ಲದೇ ರಾಹುಲ್ ದ್ರಾವಿಡ್, ಮೆಕ್‌ಗ್ರಾಥ್, ಕ್ಯಾಲಿಸ್, ಗಿಲ್‌ಕ್ರಿಸ್ಟ್, ಸೌರವ್ ಗಂಗೂಲಿ, ಬ್ರಿಯಾನ್ ಲಾರಾ, ಲಕ್ಷ್ಮಣ್ ಮತ್ತು ವಾಸಿಂ ಅಕ್ರಂ ಈ ಸರಣಿಗೆ ಸಹಿ ಹಾಕಿದ್ದಾರೆ.  ಈ ಆಟಗಾರರಿಗೆ ಒಳ್ಳೆಯ ಮಾರುಕಟ್ಟೆ ಮೌಲ್ಯವಿದ್ದು,  ಪಂದ್ಯ ವೀಕ್ಷಣೆಗಾಗಿ ಅಮೆರಿಕನ್ನರನ್ನು ತರಬಹುದು. ಇದು ಆಟವು ದೇಶದಲ್ಲಿ ಬೆಳೆಯುವುದಕ್ಕೆ ನೆರವಾಗುತ್ತದೆ ಎಂದು ಮೂಲಗಳು ಹೇಳಿವೆ. 

Share this Story:

Follow Webdunia kannada