Select Your Language

Notifications

webdunia
webdunia
webdunia
webdunia

ಧೋನಿಯ ಫೀಡ್‌ಬ್ಯಾಕ್ ಸಕಾರಾತ್ಮಕವಾಗಿ ತೆಗೆದುಕೊಂಡೆ: ಅಜಿಂಕ್ಯಾ ರಹಾನೆ

ಧೋನಿಯ ಫೀಡ್‌ಬ್ಯಾಕ್ ಸಕಾರಾತ್ಮಕವಾಗಿ ತೆಗೆದುಕೊಂಡೆ: ಅಜಿಂಕ್ಯಾ ರಹಾನೆ
ಮುಂಬೈ , ಸೋಮವಾರ, 6 ಜುಲೈ 2015 (19:19 IST)
ಅಜಿಂಕ್ಯ ರಹಾನೆ ಅವರು 50 ಓವರು ಸ್ವರೂಪದ ಕ್ರಿಕೆಟ್‌ನಲ್ಲಿನ ಬ್ಯಾಟಿಂಗ್ ವಿಧಾನದ ಬಗ್ಗೆ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ  ಟೀಕೆಗಳಿಂದ ಅನೇಕ ಮಂದಿಯ ಕಣ್ಣುಗಳನ್ನು ಹುಬ್ಬೇರಿಸುವಂತೆ ಮಾಡಿದೆ. ಆದರೆ ತಮ್ಮ ಸೀನಿಯರ್ ಮಾಹಿತಿಯನ್ನು ಸಕಾರಾತ್ಮಕ ದೃಷ್ಟಿಕೋನದಿಂದ ತೆಗೆದುಕೊಳ್ಳಲು ರಹಾನೆ ನಿರ್ಧರಿಸಿದ್ದಾರೆ.

ರಹಾನೆ ಅವರನ್ನು ಬಾಂಗ್ಲಾದೇಶದ ಏಕದಿನದ ಎರಡು ಪಂದ್ಯಗಳಿಗೆ ಕೈಬಿಡಲಾಗಿತ್ತು.  ಇದಕ್ಕೆ ಧೋನಿ ನೀಡಿದ ಕಾರಣವೇನೆಂದರೆ ರಹಾನೆ ಅವರಿಗೆ ನಿಧಾನಗತಿಯ ಪಿಚ್ ಪರಿಸ್ಥಿತಿಯಲ್ಲಿ ಆಡುವುದು ಸಮಸ್ಯೆಯಾಗಿದೆ ಎಂದು ಹೇಳಿದ್ದರು. ಆದರೆ ಹಾಗೆ ಹೇಳಿದ ವಾರದಲ್ಲಿಯೇ ರಹಾನೆಯನ್ನು ಜಿಂಬಾಬ್ವೆ ತಂಡಕ್ಕೆ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ.
 
 ಧೋನಿ ಭಾಯಿ ನನಗೆ ಫೀಡ್‌ಬ್ಯಾಕ್ ನೀಡಿದ್ದು, ಅದನ್ನು ನಾನು ಸಕಾರಾತ್ಮಕವಾಗಿ ತೆಗೆದುಕೊಂಡು ಮುಂದುವರಿದಿದ್ದೇನೆ. ನನ್ನ ಗುರಿ ಏಕದಿನ ಪಂದ್ಯಗಳಲ್ಲಿ ಹೆಚ್ಚು ಸ್ಥಿರವಾಗಿ ಆಡುವುದಾಗಿದೆ ಎಂದು ಜಿಂಬಾಬ್ವೆಗೆ ನಿರ್ಗಮನ ಪೂರ್ವ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು. ಆಟಗಾರರನ್ನು ಸೀನಿಯರ್ ಮತ್ತು ಜೂನಿಯರ್ ಎಂದು ವರ್ಗೀಕರಣದಲ್ಲಿ ತಮಗೆ ನಂಬಿಕೆಯಿಲ್ಲ ಎಂದು ರಹಾನೆ  ಹೇಳಿದರು.
 
ಎಲ್ಲಾ 15 ಆಟಗಾರರು ಸಮಾನವಾಗಿ ಮುಖ್ಯರಾಗಿದ್ದು, ಅವರ ಸಾಮರ್ಥ್ಯಗಳ ಮೇಲೆ ನಂಬಿಕೆ ಇರಿಸಿರುತ್ತಾರೆ. ನನಗೆ ಎಲ್ಲಾ ಆಟಗಾರರ ಬೆಂಬಲವಿದೆ. ನಾಯಕನಾಗಿ ನನ್ನದೇ ಕೆಲವು ಐಡಿಯಾಗಳಿದ್ದು, ನನ್ನ ಸಹಜಪ್ರವೃತ್ತಿಯನ್ನು ಬೆಂಬಲಿಸುತ್ತೇನೆ ಎಂದು ರಹಾನೆ ಹೇಳಿದರು. ಏಕದಿನ ಪಂದ್ಯಗಳಿಗೆ ಕಮ್ ಬ್ಯಾಕ್ ಆಗಿರುವ ಹರ್ಭಜನ್ ಸಿಂಗ್ ಅವರನ್ನು ಹೊಗಳಿದ ರಹಾನೆ, ಅವರ ಸಲಹೆ ಪಡೆಯುವುದಾಗಿ ತಿಳಿಸಿದರು. 
 
 
 

Share this Story:

Follow Webdunia kannada