Select Your Language

Notifications

webdunia
webdunia
webdunia
webdunia

ನಾನು ಜವಾಬ್ದಾರಿಯಿಂದ ಆಡುವುದರಿಂದ ಟೆಸ್ಟ್ ನಾಯಕನಾಗಿದ್ದೇನೆ: ವಿರಾಟ್ ಕೊಹ್ಲಿ

ನಾನು ಜವಾಬ್ದಾರಿಯಿಂದ ಆಡುವುದರಿಂದ ಟೆಸ್ಟ್ ನಾಯಕನಾಗಿದ್ದೇನೆ: ವಿರಾಟ್ ಕೊಹ್ಲಿ
ಚೆನ್ನೈ , ಶನಿವಾರ, 1 ಆಗಸ್ಟ್ 2015 (16:16 IST)
ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ಫಾರಂ ಇತ್ತೀಚೆಗೆ ಚೆನ್ನಾಗಿಲ್ಲದಿದ್ದರೂ, ತಾವು  ಬ್ಯಾಟಿಂಗ್ ವಿಭಾಗದಲ್ಲಿ ಹೆಚ್ಚುವರಿ ಶ್ರಮ ಪಡುವ ಅಗತ್ಯವಿಲ್ಲ. ಏಕೆಂದರೆ ತಾವು ಸದಾ ತಂಡಕ್ಕೆ ಜವಾಬ್ದಾರಿಯಿಂದ ಆಡುವುದಾಗಿ ಅವರು ಹೇಳಿದ್ದಾರೆ. 16 ಮತ್ತು 45 ರನ್ ಸ್ಕೋರ್ ಮಾಡಿದ್ದ  ವಿರಾಟ್ ಕೊಹ್ಲಿ ಆಡಿದ  ಸ್ವದೇಶಿ ತಂಡವು ಆಸ್ಟ್ರೇಲಿಯಾ ಎ ವಿರುದ್ಧ 10 ವಿಕೆಟ್‌ಗಳಿಂದ ಸೋತಿದೆ.
 
 ಭಾರತ ಈ ವರ್ಷ ಅಷ್ಟೊಂದು ಟೆಸ್ಟ್ ಕ್ರಿಕೆಟ್ ಆಡಿಲ್ಲ ಮತ್ತು ಕೊಹ್ಲಿ ಏಕದಿನ ಸ್ವರೂಪದ ಕ್ರಿಕೆಟ್‌ನಲ್ಲಿ ಕೂಡ ಫೆಬ್ರವರಿಯಿಂದ ಒಂದೂ ಶತಕ ಬಾರಿಸಿಲ್ಲವಾದ್ದರಿಂದ ಅವರ ಫಾರಂ ಕೂಡ ಅಷ್ಟೇನೂ ಚೆನ್ನಾಗಿಲ್ಲ.
 
ಶ್ರೀಲಂಕಾ ಪ್ರವಾಸದಲ್ಲಿ ತಮ್ಮ ಆಕ್ರಮಣಕಾರಿ ಮನೋಭಾವಕ್ಕೆ ಕಡಿವಾಣ ಹಾಕುತ್ತೀರಾ ಎಂಬ ಪ್ರಶ್ನೆಗೆ ಇಲ್ಲ ಎಂದೇ ಕೊಹ್ಲಿ ಉತ್ತರಿಸಿದರು.  ಬ್ಯಾಟ್ಸ್‌ಮನ್ ಆಗಿ ನಾನು ಕ್ರಿಕೆಟ್ ಆಡುವ ರೀತಿಯ ಬಗ್ಗೆ ಜವಾಬ್ದಾರಿಯಿಂದ ಇರುತ್ತೇನೆ ಎಂದು ಕೊಹ್ಲಿ ಹೇಳಿದರು. 

 ತಂಡಕ್ಕೆ ಜಯ ತಂದುಕೊಡಬೇಕಾದ ಸಂದರ್ಭದಲ್ಲಿ ಪ್ರತಿ ಭಾರಿ ನಾನು ಆಡುತ್ತೇನೆ. ಆದ್ದರಿಂದ ಆ ದಿಕ್ಕಿನಲ್ಲಿ ಹೆಚ್ಚು ಬದಲಾಗುವ ಅಗತ್ಯವಿದೆಯೆಂದು ನಾನು ಭಾವಿಸುವುದಿಲ್ಲ. ಈ ಕಾರಣದಿಂದಾಗಿಯೇ ತಂಡದ ಜವಾಬ್ದಾರಿ ವಹಿಸಿಕೊಳ್ಳಲು ಸೂಕ್ತ ವ್ಯಕ್ತಿ ಎಂದು ಮಂಡಳಿ ನಿರ್ಧರಿಸಲು ಕಾರಣ ಎಂದು ಕೊಹ್ಲಿ ಹೇಳಿದರು. 
 

Share this Story:

Follow Webdunia kannada