Select Your Language

Notifications

webdunia
webdunia
webdunia
webdunia

ಇಂಗ್ಲೆಂಡ್ ಸರಣಿಯ ಪ್ರತಿ ಪಂದ್ಯಕ್ಕೆ ಬಿಸಿಸಿಐ ಮಾಡಲಿರುವ ಖರ್ಚು ಎಷ್ಟು ಗೊತ್ತೇ?

ಇಂಗ್ಲೆಂಡ್ ಸರಣಿಯ ಪ್ರತಿ ಪಂದ್ಯಕ್ಕೆ ಬಿಸಿಸಿಐ ಮಾಡಲಿರುವ ಖರ್ಚು ಎಷ್ಟು ಗೊತ್ತೇ?
Mumbai , ಗುರುವಾರ, 8 ಡಿಸೆಂಬರ್ 2016 (13:32 IST)
ಮುಂಬೈ: ಮುಂದಿನ ಎರಡು ಟೆಸ್ಟ್ ಪಂದ್ಯ, ಮೂರು ಏಕದಿನ ಮತ್ತು ಎರಡು ಟಿ-ಟ್ವೆಂಟಿ ಪಂದ್ಯಗಳಿಗೆ ಬಿಸಿಸಿಐ ತಲಾ 25 ಲಕ್ಷ ರೂಪಾಯಿಗಳಂತೆ ಖರ್ಚು ಮಾಡಲಿದೆ. ಇದಕ್ಕೆ ಸುಪ್ರೀಂ ಕೋರ್ಟ್ ನ ಒಪ್ಪಿಗೆ ಪಡೆದುಕೊಂಡಿದೆ.

ಲೋಧಾ ಸಮಿತಿಯ ವರದಿಯ ಹಿನ್ನಲೆಯಲ್ಲಿ ಸುಪ್ರೀಂ ಕೋರ್ಟ್ ಬಿಸಿಸಿಐ ಹಣಕಾಸಿನ ವ್ಯವಹಾರಗಳಿಗೆ ಕಡಿವಾಣ ಹಾಕಿತ್ತು. ಹೀಗಾಗಿ ಕ್ರಿಕೆಟ್ ಸರಣಿ ನಡೆಸಲು ಬೇಕಾಗುವ ಹಣಕ್ಕೆ ಸುಪ್ರೀಂ ಕೋರ್ಟ್ ಒಪ್ಪಿಗೆ ಪಡೆಯುವ ಪರಿಸ್ಥಿತಿ ಇದೆ. ಈ ಮೊದಲು ಸುಪ್ರೀಂ ಕೋರ್ಟ್ ಮೂರು ಟೆಸ್ಟ್ ಪಂದ್ಯಗಳಿಗೆ 58 ಲಕ್ಷ ರೂ. ಬಿಡುಗಡೆ ಮಾಡಿತ್ತು.

ಸರಣಿಯ ಮುಂದಿನ ಪಂದ್ಯಗಳಿಗೆ ಹಣ ಬಿಡುಗಡೆ ಮಾಡಲು ನ್ಯಾಯಾಲಯದ ಮೊರೆ ಹೋದ ಬಿಸಿಸಿಐಗೆ 1.13 ಕೋಟಿ ರೂ. ಬಿಡುಗಡೆ ಮಾಡಲು ಸುಪ್ರೀಂ ಕೋರ್ಟ್ ಒಪ್ಪಿದೆ. ಹೀಗಾಗಿ ಪ್ರತಿ ಪಂದ್ಯಗಳಿಗೆ 25 ಲಕ್ಷ ರೂ.ಗಳಂತೆ ಬಿಸಿಸಿಐ ಖರ್ಚು ವೆಚ್ಚ ನಿಭಾಯಿಸಬೇಕಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನಿಂದ ಹಾಕಿ ವಿಶ್ವಕಪ್, ಭಾರತಕ್ಕೆ ಕೆನಡಾ ಸವಾಲು