Select Your Language

Notifications

webdunia
webdunia
webdunia
webdunia

ಧೋನಿ ಶಾಂತಚಿತ್ತತೆಗೆ ಪಾಕಿಸ್ತಾನದ ರೂಪದರ್ಶಿ ಬೌಲ್ಡ್

ಧೋನಿ ಶಾಂತಚಿತ್ತತೆಗೆ ಪಾಕಿಸ್ತಾನದ ರೂಪದರ್ಶಿ ಬೌಲ್ಡ್
ನವದೆಹಲಿ: , ಶನಿವಾರ, 25 ಜೂನ್ 2016 (19:15 IST)
ಧೋನಿ ತಮ್ಮ ಶಾಂತಚಿತ್ತತೆಯಿಂದ ಭಾರತ ಕ್ರಿಕೆಟ್ ತಂಡಕ್ಕೆ ಅನೇಕ ಪ್ರಶಸ್ತಿಗಳನ್ನು ದಕ್ಕಿಸಿಕೊಟ್ಟಿದ್ದಾರಲ್ಲದೇ ಆ ದಾರಿಯಲ್ಲಿ ಅಸಂಖ್ಯಾತ ಅಭಿಮಾನಿಗಳನ್ನು ಗಳಿಸಿದ್ದಾರೆ. ಅವರ ಅಭಿಮಾನಿ ಪಟ್ಟಿಯಲ್ಲಿ ಇತ್ತೀಚೆಗೆ ಸೇರಿದ ಪಾಕಿಸ್ತಾನದ ರೂಪದರ್ಶಿ ಮಥಿರಾ ಮೊಹಮದ್.
 
ಧೋನಿಯ ಶಾಂತಚಿತ್ತತೆಯಿಂದ ತಾನು ಬೌಲ್ಡ್ ಆಗಿದ್ದಾಗಿ ರೂಪದರ್ಶಿ ಉದಾಹರಣೆಯೊಂದು ನೀಡಿ ಹೇಳಿದ್ದಾಳೆ. ಈ ಘಟನೆಯನ್ನು ಸ್ಮರಿಸಿಕೊಂಡ ಮಥಿರಾ ಭಾರತ ಪಾಕಿಸ್ತಾನಕ್ಕೆ ಪ್ರವಾಸ ಹೋಗಿದ್ದ ಸಂದರ್ಭದಲ್ಲಿ ಎರಡೂ ತಂಡಗಳ ಆಟಗಾರರು ತಂಗಿದ್ದ ಹೊಟೆಲ್‌ನಲ್ಲಿ ಅವಳು ಭೋಜನ ಸ್ವೀಕರಿಸುತ್ತಿದ್ದಳು. ಪಾಕಿಸ್ತಾನ ಕ್ರಿಕೆಟರುಗಳ ಹಸ್ತಾಕ್ಷರ ಕೇಳಲು ತೆರಳಿದಾಗ ಕಠಿಣ ಕಾಮೆಂಟ್‌ಗಳನ್ನು ಮಾಡಿದ ಬಳಿಕ ಹಸ್ತಾಕ್ಷರ ನೀಡಿದರು. ತಾವು ಭೋಜನ ಮಾಡುವಾಗ ತೊಂದರೆ ಮಾಡಿದ್ದಾಳೆಂದು ಅವಳನ್ನು ತರಾಟೆಗೆ ತೆಗೆದುಕೊಂಡಿದ್ದರು. 
 
ಅವರ ಪ್ರತಿಕ್ರಿಯೆಯಿಂದ ಬೇಸರಗೊಂಡಿದ್ದಾಗ ಅವಳ ಕ್ಯಾಪ್ ಮೇಲೆ ಹಸ್ತಾಕ್ಷರ ನೀಡಲು ಭಾರತದ ಕ್ರಿಕೆಟ್ ಆಟಗಾರರೊಬ್ಬರು ಕರೆದರು. ಆ ಕ್ರಿಕೆಟರ್ ಎಂ.ಎಸ್.ಧೋನಿ ಅಲ್ಲದೇ ಬೇರಾರೂ ಅಲ್ಲ. ಧೋನಿ ಅವಳಿಗೆ ಕುಳಿತು ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಿದರು.
 
ಮಥಿರಾ ಈಗ ಪಾಕಿಸ್ತಾನದಲ್ಲಿ ಧೋನಿಯನ್ನು ಅಪಾರವಾಗಿ ಹೊಗಳುತ್ತಾ ಆಗಾಗ್ಗೆ ಸುದ್ದಿಮಾಡಿದ್ದಾಳೆ.  ಪಾಕಿಸ್ತಾನದ ರೂಪದರ್ಶಿ ಕಾಂಡೀಲ್ ಬಲೋಚ್ ಕೂಡ ಭಾರತದ ಪೋಸ್ಟರ್ ಬಾಯ್ ವಿರಾಟ್ ಕೊಹ್ಲಿ ಕಡೆ ತನ್ನ ಅನುರಾಗವನ್ನು ವ್ಯಕ್ತಪಡಿಸಿದ್ದಳು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

1983ರಲ್ಲಿ ಇದೇ ದಿನದಂದು ಕ್ರಿಕೆಟ್ ವಿಶ್ವಕಪ್ ಪ್ರಶಸ್ತಿ ಗೆದ್ದ ಸಂಭ್ರಮ