Select Your Language

Notifications

webdunia
webdunia
webdunia
webdunia

ನಿಜವಾದ ಅರ್ಥದಲ್ಲಿ ಬಿಸಿಸಿಐ ಅತೀ ಶ್ರೀಮಂತ ಮಂಡಳಿ ಆಗಿದ್ದು ಹೇಗೆ?

ನಿಜವಾದ ಅರ್ಥದಲ್ಲಿ ಬಿಸಿಸಿಐ ಅತೀ ಶ್ರೀಮಂತ ಮಂಡಳಿ ಆಗಿದ್ದು ಹೇಗೆ?
ನವದೆಹಲಿ , ಶುಕ್ರವಾರ, 22 ಏಪ್ರಿಲ್ 2016 (13:10 IST)
ಭಾರತೀಯ ರಾಷ್ಟ್ರೀಯ ಕ್ರಿಕೆಟ್ ಮಂಡಳಿ ಭಾರತದ ಎಲ್ಲಾ ಕ್ರಿಕೆಟ್‌ಗಳಿಗೆ ಆಡಳಿತ ಮಂಡಳಿಯಾಗಿದ್ದು, ಜಗತ್ತಿನ ಅತೀ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾಗಿ ಹೊರಹೊಮ್ಮಿದೆ. ಅವರ ಬಳಿ ಹಣ ಮಾತ್ರವಲ್ಲದೇ ಶಕ್ತಿ ಕೂಡ ಇದ್ದು, ಅದನ್ನು ಸಂಭವನೀಯ ಮಾರ್ಗದಲ್ಲಿ ಬಳಸುತ್ತಿದ್ದಾರೆ.
 
 ಕ್ರಿಕೆಟ್ ಜಾಗತಿಕ ಆದಾಯಕ್ಕೆ ಶೇ. 80ರಷ್ಟು ಬಿಸಿಸಿಐ ಕೊಡುಗೆ ನೀಡುತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆ. ಒಂದು ಕಾಲದಲ್ಲಿ ಮಂಡಳಿ ತಮ್ಮ ಆಟಗಾರರಿಗೆ ಪಂದ್ಯ ಶುಲ್ಕವನ್ನು ಸಕಾಲದಲ್ಲಿ ಕೊಡಲು ಸಾಧ್ಯವಾಗುತ್ತಿರಲಿಲ್ಲ. ಆದರೆ ನಿಧಾನವಾಗಿ ಪರಿಸ್ಥಿತಿ ಬದಲಾಗಿ ಅನೇಕ ಅಂಶಗಳು ಬಿಸಿಸಿಐ ಆರ್ಥಿಕ ಶಕ್ತಿಗೆ ಕೊಡುಗೆ ನೀಡಿದವು.  ಇಂದು ನಾವು ಅವುಗಳ ಬೆಳವಣಿಗೆಗೆ ಕಾರಣವಾದ ಅಂಶಗಳನ್ನು ಚರ್ಚಿಸುವುದಿಲ್ಲ. ಆದರೆ ಇತರೆ ಕ್ರಿಕೆಟ್ ಮಂಡಳಿಗಳಿಗೆ ಬಿಸಿಸಿಐ ತೋರಿದ ಅನುಕಕಂಪವನ್ನು ಕುರಿತು ಮಾತನಾಡುತ್ತೇವೆ.
 
 ಬಿಸಿಸಿಐಯನ್ನು ನಿಜವಾದ ಅರ್ಥದಲ್ಲಿ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾಗಿ ಮಾಡಿದ ಕೆಲವು ಘಟನೆಗಳನ್ನು ನಾವು ನೋಡೋಣ . ಬಿಸಿಸಿಐ ವೆಸ್ಟ್ ಇಂಡೀಸ್ ತಂಡಕ್ಕೆ ಐಸಿಸಿ ಟಿ 20 ಪಂದ್ಯಾವಳಿಗೆ ಮುನ್ನ ನೆರವಾಯಿತು. ಪಂದ್ಯಾವಳಿ ಆರಂಭಕ್ಕೆ ಮುಂಚೆ ವೆಸ್ಟ್ ಇಂಡೀಸ್ ವೇತನ ವಿವಾದ ಎದುರಿಸಿದ್ದು, ಭಾರತಕ್ಕೆ ಆಗಮಿಸಿದ ಮೇಲೂ ಆಟಗಾರರು ಸೂಕ್ತ ಸಮವಸ್ತ್ರದ ಕೊರತೆ ಎದುರಿಸುತ್ತಿದ್ದರು. ಈ ಹಂತದಲ್ಲಿ ಬಿಸಿಸಿಐ ತಂಡಕ್ಕೆ ನೆರವಾಗಲು ನಿರ್ಧರಿಸಿತು. 
 
 ನಮಗೆ ಇಲ್ಲಿ ಸಿಕ್ಕಿದ ಪ್ರೀತಿಯನ್ನು ನೋಡಿ, ಬಿಸಿಸಿಐ ನಮ್ಮ ಮಂಡಳಿಗಿಂತ ಹೆಚ್ಚು ನೆರವಾಗಿದೆ ಎಂದು ಬ್ರೇವೊ ಐಸಿಸಿ ಟಿ 20 ವಿಶ್ವಕಪ್ ಗೆಲುವಿನ ನಂತರ ಉದ್ಗರಿಸಿದರು. ಭಾರತಸರ್ಕಾರ ಆಫ್ಘಾನಿಸ್ತಾನದ ಕಂದಹಾರ್‌ನಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ 1 ದಶಲಕ್ಷ ಡಾಲರ್ ನೆರವು ನೀಡಿದೆ. ಭಾರತ ಸರ್ಕಾರದ ಸಣ್ಣ ಅಭಿವೃದ್ಧಿ ಯೋಜನೆಯಡಿಯಲ್ಲಿ ಈ ಆರ್ಥಿಕ ನೆರವನ್ನು ನೀಡಿದೆ.

ಭಾರತದ ಪಂದ್ಯಾವಳಿಗಳಲ್ಲಿ ಬಾಂಗ್ಲಾದೇಶಿ ಕ್ರಿಕೆಟಿಗರ ಭಾಗವಹಿಸುವಿಕೆಯಿಂದ ಸಿಕ್ಕಿದ ಲಾಭವನ್ನು ಯಾರೂ ಅಲ್ಲಗಳೆಯುವಂತಿಲ್ಲ. ಈಗ ಬಾಂಗ್ಲಾ ಶ್ರೇಯಾಂಕ ಪಟ್ಟಿಯಲ್ಲಿ ಮೇಲೇರುವ ಮೂಲಕ ಅತ್ಯುತ್ತಮ ಎನಿಸಿಕೊಂಡಿದೆ. 80 ರ ದಶಕದಲ್ಲಿ ಬಿಸಿಸಿಐ ಶ್ರೀಲಂಕಾಗೆ ನೆರವಾಗಿದೆ. ದುಲೀಪ್ ಟ್ರೋಫಿಯಲ್ಲಿ ಶ್ರೀಲಂಕಾ ಆಟಗಾರರನ್ನು ಆಡಿಸುವ ಮೂಲಕ ಶ್ರೀಲಂಕಾ ಕ್ರಿಕೆಟ್‌ಗೆ  ಬಿಸಿಸಿಐ ನೆರವಾಗಿದೆ.
 ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
 

Share this Story:

Follow Webdunia kannada