Select Your Language

Notifications

webdunia
webdunia
webdunia
webdunia

ಅರೆನಗ್ನ ಡ್ರೆಸ್‌ ಧರಿಸಿದ್ದ ಸಂದರ್ಶಕಿಗೆ ಸಂದರ್ಶನ ನೀಡಲು ನಿರಾಕರಿಸಿದ ಕ್ರಿಕೆಟಿಗ ಹಾಶೀಂ ಅಮ್ಲಾ

ಅರೆನಗ್ನ ಡ್ರೆಸ್‌ ಧರಿಸಿದ್ದ ಸಂದರ್ಶಕಿಗೆ ಸಂದರ್ಶನ ನೀಡಲು ನಿರಾಕರಿಸಿದ ಕ್ರಿಕೆಟಿಗ ಹಾಶೀಂ ಅಮ್ಲಾ
ನವದೆಹಲಿ , ಶುಕ್ರವಾರ, 5 ಫೆಬ್ರವರಿ 2016 (18:58 IST)
ದೇಹ ತೋರಿಸುವಂತಹ ಡ್ರೆಸ್ ಧರಿಸಿದ್ದ  ಖಾಸಗಿ ಟಿವಿ ಸಂದರ್ಶನಕಾರ್ತಿಗೆ ಸಂದರ್ಶನ ನೀಡಲು ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಹಾಶಿಂ ಅಮ್ಲಾ ನಿರಾಕರಿಸಿದ್ದಾರೆ.
 
ವರದಿಗಳ ಪ್ರಕಾರ, ಟಿವಿ ಸಂದರ್ಶಕಿಯ ಅರೆನಗ್ನ ಡ್ರೆಸ್‌‌ನಿಂದ ಮುಜಗರಕ್ಕೊಳಗಾದ 32 ವರ್ಷ ವಯಸ್ಸಿನ ಆಮ್ಲಾ, ಆಯೋಜಕರಿಗೆ ಕರೆ ಮೀಡಿ ಸಂದರ್ಶಕಿಗೆ ಸೂಕ್ತ ಡ್ರೆಸ್ ಧರಿಸಿಕೊಂಡು ಬರುವಂತೆ ಸಲಹೆ ನೀಡಿ ಎಂದು ಗುಡುಗಿದ್ದಾಗಿ ಮೂಲಗಳು ತಿಳಿಸಿವೆ.  
 
ಕಟ್ಟಾ ಇಸ್ಲಾಂ ಧರ್ಮದ ಬೆಂಬಲಿಗರಾದ ಹಾಶೀಂ ಅಮ್ಲಾ, ಈ ಹಿಂದೆ ತಮ್ಮ ತಂಡದ ಜರ್ಸಿಯಲ್ಲಿ ಕ್ಯಾಸ್ಟಲ್ ಬಿಯರ್ ಭಾವಚಿತ್ರ ಹೊಂದಿದ್ದ ಕಾರಣಕ್ಕಾಗಿ ಧರಿಸಲು ನಿರಾಕರಿಸಿ ಸುದ್ದಿಗೆ ಗ್ರಾಸವಾಗಿದ್ದರು.
 
ಭಾರತ ಮತ್ತು ಇಂಗ್ಲೆಂಡ್ ವಿರುದ್ಧದ ಕಳಪೆ ಪ್ರದರ್ಶನದಿಂದಾಗಿ ದಕ್ಷಿಣ ಆಫ್ರಿಕಾ ಟೆಸ್ಟ್ ತಂಡದ ನಾಯಕನ ಸ್ಥಾನದಿಂದ ಕೆಳಗಿಳಿದಿದ್ದರು. 

Share this Story:

Follow Webdunia kannada