Select Your Language

Notifications

webdunia
webdunia
webdunia
webdunia

ಬಾಂಗ್ಲಾ ಪ್ರವಾಸದ ಭಾರತ ಟೆಸ್ಟ್ ತಂಡಕ್ಕೆ ಹರ್ಭಜನ್ ಸಿಂಗ್ ಪುನಃ ಸೇರ್ಪಡೆ

ಬಾಂಗ್ಲಾ ಪ್ರವಾಸದ ಭಾರತ ಟೆಸ್ಟ್ ತಂಡಕ್ಕೆ ಹರ್ಭಜನ್ ಸಿಂಗ್ ಪುನಃ ಸೇರ್ಪಡೆ
, ಬುಧವಾರ, 20 ಮೇ 2015 (15:02 IST)
ಟೀಂ ಇಂಡಿಯಾದ ಮಾಜಿ ಸ್ಪಿನ್ ಬೌಲರ್ ಹರ್ಭಜನ್ ಸಿಂಗ್  ಅವರನ್ನು ಜೂನ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ ಪಂದ್ಯಕ್ಕಾಗಿ  ಭಾರತ ಟೆಸ್ಟ್ ತಂಡಕ್ಕೆ ಪುನಃ ಕರೆಸಲಾಗಿದೆ. ಮುಂಬೈನಲ್ಲಿ ಬುಧವಾರ ಹೆಸರಿಸಲಾದ 15 ಆಟಗಾರರ ತಂಡದಲ್ಲಿ ಹರ್ಭಜನ್ ಎರಡನೇ ಆಫ್‌ಸ್ಪಿನ್ನರ್ ಆಗಿದ್ದಾರೆ.  2103ರ ಮಾರ್ಚ್‌ನಲ್ಲಿ ಹರ್ಭಜನ್ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಪಂದ್ಯವಾಡಿದ್ದು ಕೊನೆಯದಾಗಿತ್ತು.
 
 ಬಾಂಗ್ಲಾದೇಶದ ಬ್ಯಾಟಿಂಗ್ ಬಲವನ್ನು ಮತ್ತು ಆಡುವ ಸ್ಥಿತಿಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಎರಡನೇ ಆಫ್ ಸ್ಪಿನ್ನರ್ ಹೊಂದುವುದು ಅವಶ್ಯಕವಾಗಿತ್ತು ಎಂದು ಆಯ್ಕೆದಾರರ ಅಧ್ಯಕ್ಷ ಸಂದೀಪ್ ಪಾಟೀಲ್ ವಿವರಿಸಿದರು.  ರವಿಚಂದ್ರನ್ ಅಶ್ವಿನ್ ಮತ್ತು ಕರಣ್ ಶರ್ಮಾ ಟೆಸ್ಟ್ ತಂಡದಲ್ಲಿರುವ ಇತರೆ ಸ್ಪಿನ್ನರುಗಳಾಗಿದ್ದಾರೆ.
 
ವಿರಾಟ್ ಕೊಹ್ಲಿ ಟೆಸ್ಟ್ ತಂಡದ ಸಾರಥ್ಯ ವಹಿಸಿದರೆ ಧೋನಿ ಏಕದಿನ ಸರಣಿಯ ನಾಯಕರಾಗಲಿದ್ದಾರೆ. ಭಾರತ ವಿದೇಶ ಪ್ರದರ್ಶನದಲ್ಲಿ ಕಳಪೆ ದಾಖಲೆ ಹೊಂದಿರುವುದನ್ನು ಗಮನದಲ್ಲಿಟ್ಟುಕೊಂಡು ಪೂರ್ಣ ಬಲದ ತಂಡವನ್ನು ಆಯ್ಕೆಮಾಡಲಾಗಿದೆ ಎಂದು ಪಾಟೀಲ್ ಹೇಳಿದ್ದು, ವಿಶ್ರಾಂತಿಗಾಗಿ ಯಾವುದೇ ಆಟಗಾರ ಮನವಿ ಸಲ್ಲಿಸಿಲ್ಲ. ತಂಡಗಳನ್ನು ಆಯ್ಕೆ ಮಾಡುವಾಗ ಯಾವುದೇ ಭಾವನಾತ್ಮಕ ಸಂಬಂಧ ಇಟ್ಟುಕೊಂಡು ಆಯ್ಕೆ ಮಾಡಿಲ್ಲ ಎಂದೂ ಪಾಟಿಲ್ ಹೇಳಿದರು.
 
 ಎಡಗೈ ಸ್ಪಿನ್ನರ್ ರವೀಂದ್ರ ಜಡೇಜಾ ಅವರನ್ನು ಕೈಬಿಡಲಾಗಿದೆ. ಭಾರತ ಜೂನ್ 7-24ರವರೆಗೆ ಟೆಸ್ಟ್ ಮತ್ತು ಮೂರು ಏಕದಿನ ಪಂದ್ಯಗಳನ್ನು ಆಡಲಿದೆ.  ಫಾಟುಲ್ಲಾದಲ್ಲಿ ಜೂನ್ 10-14ರವರೆಗೆ ಟೆಸ್ಟ್ ಪಂದ್ಯ ಮತ್ತು ಮಿರ್ಪುರದಲ್ಲಿ ಜೂನ್ 18, 21 ಮತ್ತು 24ರಂದು 3 ಏಕದಿನಗಳನ್ನು ಪ್ರವಾಸಿ ತಂಡ ಆಡಲಿದೆ. 
 
ಟೆಸ್ಟ್ ತಂಡ: ವಿರಾಟ್ ಕೊಹ್ಲಿ (ನಾಯಕ), ಮುರಳಿ ವಿಜಯ್, ಶಿಖರ್ ಧವನ್, ಕೆ.ಎಲ್ ರಾಹುಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ರೋಹಿತ್ ಶರ್ಮ, ವೃದ್ಧಿಮಾನ್ ಸಹಾ, ರವಿಚಂದ್ರನ್ ಅಶ್ವಿನ್, ಹರ್ಭಜನ್ ಸಿಂಗ್, ಕರಣ್ ಶರ್ಮ, ಭುವನೇಶ್ವರ ಕುಮಾರ್, ಉಮೇಶ್ ಯಾದವ್, ವರುಣ್ ಆರೋನ್, ಇಶಾಂತ್ ಶರ್ಮಾ .
 
ಏಕದಿನ ತಂಡ: ಮಹೇಂದ್ರ ಸಿಂಗ್ ಧೋನಿ (ನಾಯಕ), ರೋಹಿತ್ ಶರ್ಮಾ, ಅಜಿಂಕ್ಯ ರಹಾನೆ, ಶಿಖರ್ ಧವನ್, ವಿರಾಟ್ ಕೊಹ್ಲಿ, ಸುರೇಶ್ ರೈನಾ, ಅಂಬಾಟಿ ರಾಯುಡು, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಸರ್ ಪಟೇಲ್, ಭುವನೇಶ್ವರ ಕುಮಾರ್, ಉಮೇಶ್ ಯಾದವ್, ಮೋಹಿತ್ ಶರ್ಮಾ, ಸ್ಟುವರ್ಟ್ ಬಿನ್ನಿ ಮತ್ತು ಧವಳ್ ಕುಲಕರ್ಣಿ. .

Share this Story:

Follow Webdunia kannada