Webdunia - Bharat's app for daily news and videos

Install App

ರಣಜಿ ಫೈನಲ್ ನಲ್ಲಿ ಪ್ರಬಲ ಮುಂಬೈಗೇ ಚಳ್ಳೆಹಣ್ಣು ತಿನ್ನಿಸಿದ ಗುಜರಾತ್

Webdunia
ಬುಧವಾರ, 11 ಜನವರಿ 2017 (21:07 IST)
ಇಂಧೋರ್: ರಣಜಿ ಟ್ರೋಫಿ ಫೈನಲ್ ನಲ್ಲಿ ಗುಜರಾತ್ ತಂಡ ಪ್ರಬಲ ಮುಂಬೈಯನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿದೆ. ದ್ವಿತೀಯ ದಿನದಂತ್ಯಕ್ಕೆ ಮೊದಲ ಇನಿಂಗ್ಸ್ ನಲ್ಲಿ 63 ರನ್ ಗಳ ಮುನ್ನಡೆ ಪಡೆದಿದೆ.

ನಿನ್ನೆ ಮುಂಬೈ ಗುಜರಾತ್ ದಾಳಿಗೆ ತತ್ತರಿಸಿ ಕೇವಲ228 ಕ್ಕೆ ಆಲೌಟ್ ಆಗಿತ್ತು. ಅದಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಗುಜರಾತ್ ದಿನದಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು291 ರನ್ ಗಳಿಸಿ ಸುಸ್ಥಿತಿಯಲ್ಲಿತ್ತು.

ನಾಯಕ ಪಾರ್ಥಿವ್ ಪಟೇಲ್ ಬಿರುಸಿನ ಆಟವಾಡಿ 90 ರನ್ ಗಳಿಗೆ ವಿಕೆಟ್ ಒಪ್ಪಿಸಿದರು. ಮನ್ ಪ್ರೀತ್ ಜುನೇಜಾ 77 ರನ್ ಗಳಸಿ ನಾಯಕನಿಗೆ ಉತ್ತಮ ಸಾಥ್ ನೀಡಿದರು. ಮುಂಬೈ ಪರ ಅಭಿಷೇಕ್ ನಾಯರ್ ಮೂರು ವಿಕೆಟ್ ಕಿತ್ತರು.

ಈ ದಿನದ ಗೌರವವೂ ಗುಜರಾತ್ ಪಾಲಾಯಿತು. ಮುಂಬೈ ಫೀಲ್ಡರ್ ಗಳು ಮೂರು ಕ್ಯಾಚ್ ಬಿಟ್ಟಿದ್ದು ದುಬಾರಿಯಾಯಿತು. ಮುಂಬೈ ಮತ್ತೆ ಹಿರಿಯ ಬೌಲರ್ ನಾಯರ್ ಮೇಲೇ ಅವಲಂಬಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್, ಕಶ್ಯಪ್ ದಾಂಪತ್ಯದಲ್ಲಿ ಬಿರುಕು

IND vs ENG: ಎಷ್ಟೇ ಕೆಣಕಿದ್ರೂ ನಾನು ಕೇರ್ ಮಾಡಲ್ಲ: ಕೆಎಲ್ ರಾಹುಲ್ ವಿಡಿಯೋ ವೈರಲ್

IND vs ENG: ರೋಚಕ ಘಟ್ಟದಲ್ಲಿ ಲಾರ್ಡ್ಸ್ ಟೆಸ್ಟ್, ಟೀಂ ಇಂಡಿಯಾ ಗೆದ್ದರೆ ದಾಖಲೆ

IND vs ENG: ಶುಭಮನ್ ಗಿಲ್ ಈ ವಿಚಾರದಲ್ಲಿ ಥೇಟ್ ಕೊಹ್ಲಿನೇ ಎಂದ ಫ್ಯಾನ್ಸ್

ENG vs IND: ಜಸ್ರೀತ್ ಬೂಮ್ರಾನನ್ನು ಪದೇ ಪದೇ ಕೆಣಕಿದ ಝಾಕ್ ಕ್ರಾಲಿ, ಕೆರಳಿ ಕೆಂಡವಾದ ಗಿಲ್‌

ಮುಂದಿನ ಸುದ್ದಿ
Show comments