Select Your Language

Notifications

webdunia
webdunia
webdunia
webdunia

ಲಾರಾ ದಾಖಲೆ ಮುರಿಯುವುದಕ್ಕೆ ಚಂದ್ರಪಾಲ್‌ರನ್ನು ಆಡಿಸುವುದು ತರವಲ್ಲ: ಲಾಯ್ಡ್

ಲಾರಾ ದಾಖಲೆ ಮುರಿಯುವುದಕ್ಕೆ ಚಂದ್ರಪಾಲ್‌ರನ್ನು ಆಡಿಸುವುದು ತರವಲ್ಲ: ಲಾಯ್ಡ್
ಬ್ರಿಜ್‌ಟೌನ್ , ಬುಧವಾರ, 27 ಮೇ 2015 (13:54 IST)
ವೆಸ್ಟ್ ಇಂಡೀಸ್ ಕ್ರಿಕೆಟ್‌ನಲ್ಲಿ ಬ್ರಿಯನಾ ಲಾರಾ ಅವರ ಅತ್ಯಧಿಕ ರನ್  ದಾಖಲೆಯನ್ನು ಮುರಿಯಲು ಶಿವ  ಚಂದ್ರಪಾಲ್ ಅವರಿಗೆ ಆಟದಲ್ಲಿ ಮುಂದವರಿಯುವಂತೆ ಅವಕಾಶ ನೀಡುವುದು ಒಳ್ಳೆಯ ಕಾರಣವಲ್ಲ ಎಂದು ವೆಸ್ಟ್ ಇಂಡೀಸ್ ತಂಡದ ಮುಖ್ಯ ಆಯ್ಕೆದಾರ ಕ್ಲೈವ್ ಲಾಯ್ಡು ಹೇಳಿದರು. 
 
 ಚಂದ್ರಪಾಲ್ ಅವರನ್ನು ಭಾನುವಾರ ಆಸ್ಟ್ರೇಲಿಯಾ ವಿರುದ್ಧ ಮುಂದಿನ ತಿಂಗಳ ಎರಡು ಟೆಸ್ಟ್ ಸರಣಿಯಿಂದ ವೆಸ್ಟ್ ಇಂಡೀಸ್ ತಂಡದಿಂದ ಕೊಕ್ ನೀಡಲಾಗಿದೆ. ಇದರಿಂದ ಚಂದ್ರಪಾಲ್ ಅವರ 164 ಟೆಸ್ಟ್ ವೃತ್ತಿಜೀವನಕ್ಕೆ ಕೊನೆಬೀಳಲಿದ್ದು, ಲಾರಾ ಅವರ ದಾಖಲೆಯ 11,953 ರನ್ ಗಡಿಯನ್ನು ದಾಟಲು 87 ರನ್ ಕೊರತೆ ಅನುಭವಿಸಿದ್ದಾರೆ.  ಚಂದ್ರಪಾಲ್ 51 ರನ್ ಸರಾಸರಿಯೊಂದಿಗೆ 11, 867 ರನ್ ಸ್ಕೋರ್ ಮಾಡಿದ್ದು, 30 ಟೆಸ್ಟ್ ಶತಕಗಳನ್ನು ಬಾರಿಸಿದ್ದಾರೆ. 
 
 ಚಂದ್ರಪಾಲ್ ಅವರಿಗೆ ಕೊಕ್ ನೀಡಿದ್ದರ ಬಗ್ಗೆ ವಿವರಿಸಿದ ಲಾಯ್ಡ್, ಆಟಗಾರ ಶೀಘ್ರಗತಿಯ ಕುಸಿತ ಅನುಭವಿಸಿದ್ದು, ಕಳೆದ 11 ಇನ್ನಿಂಗ್ಸ್‌ಗಳಲ್ಲಿ ಸರಾಸರಿ 16 ರನ್ ಗಳಿಸಿದ್ದಾರೆ. ಇದಲ್ಲದೇ ಅವರು 40ರ ಆಸುಪಾಸಿನಲ್ಲಿ ವೃತ್ತಿಜೀವನದ ಮುಸ್ಸಂಜೆಯಲ್ಲಿರುವುದರಿಂದ ಯುವ ಆಟಗಾರರರನ್ನು ತಂಡದಲ್ಲಿ ಸೇರಿಸಿಕೊಳ್ಳಲು ಸಮಿತಿ ನಿರ್ಧರಿಸಿತು ಎಂದು ಲಾಯ್ಡ್ ಹೇಳಿದ್ದಾರೆ. 
 
 ಆಯ್ಕೆದಾರರಾಗಿ ನಮ್ಮ ಗುರಿ ಯುವ ಆಟಗಾರರಿಗೆ ಅವಕಾಶ ನೀಡಿ  ಕ್ರಿಕೆಟ್‌ಗೆ ಒಡ್ಡಿಕೊಳ್ಳುವಂತೆ  ಮಾಡುವುದಾಗಿದೆ. ಜಗತ್ತಿನ ಶ್ರೇಷ್ಟ ತಂಡದ ವಿರುದ್ಧ ಆಡುವುದಕ್ಕಿಂತ ಒಳ್ಳೆಯ ಅವಕಾಶ ಸಿಗುವುದಿಲ್ಲ ಎಂದು ಆಸ್ಟ್ರೇಲಿಯಾವನ್ನು ಉಲ್ಲೇಖಿಸಿ ಲಾಯ್ಡ್ ಹೇಳಿದರು. 

Share this Story:

Follow Webdunia kannada