Webdunia - Bharat's app for daily news and videos

Install App

ಲಿಂಗ ತಾರತಮ್ಯವೇ: ಹಾಕಿಯ ಇಬ್ಬರು ಮಾಜಿ ನಾಯಕರ ಭಿನ್ನವಾದ ಕಥೆ

Webdunia
ಸೋಮವಾರ, 1 ಆಗಸ್ಟ್ 2016 (17:20 IST)
ನವದೆಹಲಿ: ಹಾಕಿ ಕ್ರೀಡೆ ಭಾರತದಲ್ಲಿ ಇಂದಿಗೂ ಪ್ರಸ್ತುತವಾಗಿದೆ. ರಾಷ್ಟ್ರೀಯ ತಂಡಗಳ ಶೋಚನೀಯ ಪ್ರದರ್ಶನದ ನಡುವೆಯೂ ಹಾಕಿ ರಾಷ್ಟ್ರೀಯ ಕ್ರೀಡೆಯಾಗಿ ಉಳಿದಿದೆ. ಮೊದಲ ಬಾರಿಗೆ ಸುದೀರ್ಘ ಕಾಲದ ಬಳಿಕ ಪುರುಷ ಮತ್ತು ಮಹಿಳಾ ತಂಡವೆರಡಕ್ಕೂ  ಒಲಿಂಪಿಕ್ಸ್‌ನಲ್ಲಿ ಆಡುವ ಅವಕಾಶ ಸಿಕ್ಕಿದೆ. ಆದರೆ ಒಲಿಂಪಿಕ್ಸ್ ಅವಕಾಶದ ಸಂಭ್ರಮದ ಕ್ಷಣದ ನಡುವೆಯೂ ಕಪ್ಪು ಚುಕ್ಕೆಯನ್ನು ಹಾಕಿ ಹಂಚಿಕೊಂಡಿದೆ. ಅತೀ ಗಮನಾರ್ಹ ಮಹಿಳಾ ಹಾಕಿ ಆಟಗಾರ್ತಿ ರಿತು ರಾಣಿಗೆ ರಿಯೊ ಕ್ರೀಡಾಕೂಟಕ್ಕೆ ಮುನ್ನ ಕೊಕ್ ನೀಡಿರುವುದು. ಕಾರಣ ಅವರ ನಡವಳಿಕೆ ಮತ್ತು ಫಿಟ್ನೆಸ್.
 
24 ವರ್ಷದ ರಿತು ರಾಣಿ ತಂಡದ ನಾಯಕಿಯಾಗಿ ಚಾಲನಾ ಶಕ್ತಿಯಾಗಿದ್ದರು ಮತ್ತು ಭಾರತ ಒಲಿಂಪಿಕ್‌‌ಗೆ ಅರ್ಹತೆ ಗಳಿಸುವುದರ ಹಿಂದಿದ್ದರು.ಆದಾಗ್ಯೂ ರಿಯೊಗೆ ಭಾರತ ಟಿಕೆಟ್ ಪಡೆಯಲು ನೆರವಾದ 10 ತಿಂಗಳ ಬಳಿಕ ತಂಡದಿಂದ ಅವರನ್ನು ದಬ್ಬಲಾಗಿದೆ. ಅವರನ್ನು ಕೈಬಿಟ್ಟಿರುವುದು ಫಿಟ್‌ನೆಸ್ ಮತ್ತು ನಡವಳಿಕೆ ಆಧಾರವಾಗಿದ್ದರೆ, ಸರ್ದಾರ್ ಸಿಂಗ್ ಕಥೆ ಭಿನ್ನವಾಗಿದೆ.

ಭಾರತದ ಮಾಜಿ ನಾಯಕನ ಮೇಲೆ ರೇಪ್ ಆರೋಪ ಮಾಡಲಾಗಿದ್ದರೂ ಅವರು ತಂಡದಲ್ಲಿ ಉಳಿದಿದ್ದಾರೆ. ನಾಯಕನ ಸ್ಥಾನವನ್ನು ಗೋಲ್ ಕೀಪರ್ ಶ್ರೀಜೇಶ್‌ಗೆ ನೀಡಲಾಗಿದೆ. ಆದರೆ ಸರ್ದಾರ್ ಸಿಂಗ್ ಅವರನ್ನು ತಂಡದಲ್ಲಿ ಸೇರ್ಪಡೆ ಮಾಡಿದ್ದು ಸೂಕ್ತ ವಿಶ್ಲೇಷಣೆಗೆ ಒಳಪಡಬೇಕಾಗಿದೆ. 
 
ಭಾರತದ ಹಾಕಿ ಮುಜುಗರಪಡುವ ಸಂಗತಿಯೆಂದರೆ ರಿತು ಅವರನ್ನು ಶಿಸ್ತು ಮತ್ತು ಫಿಟ್ನೆಸ್ ಪ್ರಶ್ನೆಗಳನ್ನು ಎತ್ತಿ  ಕೈಬಿಟ್ಟಿರುವುದು.  ಫಾರಂ ಇಲ್ಲದ , ರೇಪ್ ಆರೋಪಕ್ಕೆ ಗುರಿಯಾದ ಸರ್ದಾರ್ ಸಿಂಗ್‌ಗೆ ರಿಯೊಗೆ ಟಿಕೆಟ್ ನೀಡಿರುವುದು. ರೇಪ್ ವಿವಾದವಷ್ಟೇ ಅಲ್ಲದೇ  ಪಂಜಾಬಿನ ಆಟಗಾರ ಸಿಂಗ್ ಹಾಕಿ ಅಧಿಕಾರಿಗಳ ಜತೆ ತಿಕ್ಕಾಟಕ್ಕೆ ಇಳಿದಿದ್ದರು. ಸಂದೀಪ್ ಸಿಂಗ್ ಜತೆ ಸರ್ದಾರ್ ಸಿಂಗ್ ರಾಷ್ಟ್ರೀಯ ಶಿಬಿರದಿಂದ ತೆರಳಿದ್ದರಿಂದ ಅಶಿಸ್ತಿನ ಆರೋಪದ ಮೇಲೆ 2 ವರ್ಷ ನಿಷೇಧ ವಿಧಿಸಲಾಗಿತ್ತು. ಅವರು ಕ್ಷಮೆಯಾಚನೆ ಮಾಡಿದ ಮೇಲೆ  ಪುನಃ ರಾಷ್ಟ್ರೀಯ ತಂಡಕ್ಕೆ ನಾಯಕರಾಗಿ ಆಯ್ಕೆಯಾಗಿದ್ದರು.
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಐಸಿಸಿ ಹೊಸ ಸಿಇಓ ಆಗಿ ಭಾರತೀಯ ಸಂಜೋಗ್ ಗುಪ್ತಾ, ಇವರ ಸಾಧನೆ ಇಲ್ಲಿದೆ

ಅಭಿನಂದಿಸಲು ಸಿರಾಜ್‌ನನ್ನೇ ಕೈಬಿಟ್ಟ ಜಯ್‌ಶಾ: ಮುಸ್ಲಿಂ ಎಂಬ ಕಾರಣವೇ ಹೊಗಳಿಕೆಯಿಂದ ದೂರವಿರಲು ಕಾರಣವಾಯಿತೆ,ವಿವಾದ

IND vs ENG: ವೇಗಿ ಆಕಾಶ್ ದೀಪ್ ಕುಟುಂಬದ ಕತೆ ಕೇಳಿದ್ರೆ ಕಣ್ಣೀರೇ ಬರುತ್ತದೆ

IND vs ENG: ಮುಂದಿನ ಪಂದ್ಯಕ್ಕೆ ಈ ಇಬ್ಬರೂ ಕನ್ನಡಿಗರಿಗೆ ಗೇಟ್ ಪಾಸ್

IND vs ENG: ಗೆಲುವಿನ ಬಳಿಕ ಶುಭಮನ್ ಗಿಲ್ ಹೇಳಿದ ಒಂದು ಮಾತು ಇಂಗ್ಲೆಂಡ್ ಭಯ ಹೆಚ್ಚಿಸುತ್ತೆ

ಮುಂದಿನ ಸುದ್ದಿ