Webdunia - Bharat's app for daily news and videos

Install App

ಬಿಗ್ ಬ್ಯಾಶ್ ಲೀಗ್‌ನಲ್ಲಿ ಮೆಲ್ಬರ್ನ್ ರೆನೆಗೇಡ್ಸ್ ತಂಡಕ್ಕೆ ಕ್ರಿಸ್ ಗೇಲ್ ಸಹಿ

Webdunia
ಶುಕ್ರವಾರ, 15 ಮೇ 2015 (16:35 IST)
ವೆಸ್ಟ್ ಇಂಡೀಸ್ ಮತ್ತು ಐಪಿಎಲ್‌ನ ಆರ್‌ಸಿಬಿ ತಂಡದ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್  2015/16ನೇ ಸಾಲಿನ ಬಿಗ್ ಬ್ಯಾಶ್ ಲೀಗ್‌ನ  ಮೆಲ್ಬರ್ನ್ ರೆನೆಗೇಡ್ಸ್ ತಂಡಕ್ಕೆ ಸಹಿ ಹಾಕಿದ್ದಾರೆ.  ಗೇಲ್ ಅವರು ಆರಾನ್ ಫಿಂಚ್ ಜೊತೆಗೆ ಮೇಲಿನ ಕ್ರಮಾಂಕದಲ್ಲಿ ಇದ್ದಾರೆ. ಇದರಿಂದ ಮೆಲ್ಬರ್ನ್ ರೆನೇಗೇಡ್ಸ್ ಓಪನಿಂಗ್ ಜೋಡಿ ಈ ಆವೃತ್ತಿಯ ಅತ್ಯಂತ ವಿನಾಶಕಾರಿ ಜೋಡಿಯಾಗಿದೆ. 
 
ಅಧಿಕೃತ ಕ್ರಿಕೆಟ್ ಆಸ್ಟ್ರೇಲಿಯಾ ವೆಬ್‌ಸೈಟ್ ಜೊತೆ ಮಾತನಾಡಿದ ಫಿಂಚ್ ಆರಂಭಿಕ ಜೊತೆಗಾರರಾಗಿ ಗೇಲ್ ಇರುವುದು ರೋಮಾಂಚನ ಮೂಡಿಸಿದೆ ಎಂದು ಹೇಳಿದ್ದಾರೆ. ಗೇಲ್ ಈ ಮಾದರಿಯ ಕ್ರಿಕೆಟ್‌ನಲ್ಲಿ ಸುದೀರ್ಘ ಕಾಲ ಪ್ರಾಬಲ್ಯ ಮೆರೆದಿದ್ದಾರೆ.  ಈ ಮಾದರಿಯ ಆಟದಲ್ಲಿ  ವಿಲಿಯರ್ಸ್ ಜೊತೆಗೆ  ಗೇಲ್ ಅವರನ್ನು ಬಿಟ್ಟರೆ ಬೇರೆಯಾರೂ ಇಲ್ಲ. ಅವರು ಆಟದಲ್ಲಿ ಪ್ರಾಬಲ್ಯ ಮೆರೆದು ಸೀಮಿತ ಅವಧಿಯಲ್ಲಿ ಜಯ ತಂದುಕೊಡುತ್ತಾರೆ. ಆರಂಭಿಕ ಬ್ಯಾಟ್ಸ್‌ಮನ್ ಆಗಿ ಗೇಲ್ ಆಡುವುದು ರೆನೆಗೇಡ್ಸ್ ತಂಡಕ್ಕೆ ದೊಡ್ಡ ಬೋನಸ್ ಆಗಿದೆ ಎಂದು ಫಿಂಚ್ ಹೇಳಿದ್ದಾರೆ.  

2012/13 ರ ಆವೃತ್ತಿಯಲ್ಲಿ ಸಿಡ್ನಿ ಥಂಡರ್ ತಂಡದಲ್ಲಿ ಕಾಣಿಸಿಕೊಂಡ ಬಳಿಕ  ಬಿಗ್ ಬ್ಯಾಶ್ ಲೀಗ್‌ನಲ್ಲಿ ಎರಡನೇ ಬಾರಿಗೆ ಗೇಲ್ ಆಡುತ್ತಿದ್ದಾರೆ. 
 
ಬಿಗ್ ಬ್ಯಾಶ್ ಲೀಗ್‌ನಲ್ಲಿ ಮೆಲ್ಬರ್ನ್ ರೆನೆಗೇಡ್ಸ್ ತಂಡದ ಆಟಗಾರರು
ಆರಾನ್ ಫಿಂಚ್, ಕ್ರಿಸ್ ಗೇಲ್, ಕ್ಯಾಮೆರಾನ್ ವೈಟ್, ಮ್ಯಾಥೀವ್ ವೇಡ್, ಪೀಟರ್ ಸಿಡಲ್, ಜೇಮ್ಸ್ ಪ್ಯಾಟಿಸನ್, ಫರ್ಗ್ಯುಸನ್, ರಿಮಿಂಗ್‌ಟನ್, ಟಾಮ್ ಕೂಪರ್, ಟಾಮ್ ಬೀಟನ್, ಮ್ಯಾಥೀವ್ ಶಾರ್ಟ್, ನಿಕ್ ವಿಂಟರ್ 

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments