Webdunia - Bharat's app for daily news and videos

Install App

ಟಿ20 ಶಕೆಯಲ್ಲಿ ಟೆಸ್ಟ್ ಕ್ರಿಕೆಟ್‌ ಪರ ಬ್ಯಾಟ್ ಮಾಡಿದ ಸೋಬರ್ಸ್

Webdunia
ಬುಧವಾರ, 20 ಮೇ 2015 (18:55 IST)
20 ಓವರುಗಳ ಕಿರು ಸ್ವರೂಪದ ಕ್ರಿಕೆಟ್ ಆಟವು ಪ್ರವೇಶ ಪಡೆದಾಗಿನಿಂದ ಟೆಸ್ಟ್ ಕ್ರಿಕೆಟ್‌ಗೆ ದೊಡ್ಡ ಸವಾಲನ್ನು ಒಡ್ಡಿದೆ.ದುರದೃಷ್ಟವಶಾತ್ ಯಾವುದು ಉತ್ತಮ ಎಂದು ನಿರ್ಧರಿಸುವ ಯಾವುದೇ ಮಾರ್ಗವಿಲ್ಲ. ಆದರೆ ವೆಸ್ಟ್ ಇಂಡೀಸ್‌ನ ಸರ್ವಕಾಲಿಕ ಆಲ್‌ರೌಂಡ್ ಆಟಗಾರ ಸರ್ ಗಾರ್‌ಫೀಲ್ಡ್ ಸೋಬರ್ಸ್  ಎರಡರಲ್ಲಿ ಒಂದನ್ನು ಆಯ್ಕೆ ಮಾಡುವುದಾದರೆ ತಾವು ಟೆಸ್ಟ್ ಕ್ರಿಕೆಟ್ ಆಯ್ಕೆ ಮಾಡುವುದಾಗಿ ಹೇಳಿದ್ದಾರೆ. 
 
 ಆಟದ ಸ್ವರೂಪವು ಬದಲಾಗಿದೆ.  ಟಿ20 ಕ್ರಿಕೆಟ್‌ನಲ್ಲಿ ಒಳಗೊಂಡಿರುವ ಹಣದ ಮೊತ್ತವು ಜಗತ್ತಿನಾದ್ಯಂತ ಆಟಗಾರರನ್ನು ಸೆಳೆಯುತ್ತಿದೆ. ಆದರೆ ಟೆಸ್ಟ್ ಕ್ರಿಕೆಟ್ ಅಥವಾ ಟಿ20 ಆಡುವ ನಿರ್ಧಾರ ಆಟಗಾರರಿಗೆ ಬಿಟ್ಟಿದ್ದು ಎಂದು ಹೇಳಿದರು. 
 
ಸೋಬರ್ಸ್ ಅವರ ಆಲ್‌ರೌಂಡ್ ಪ್ರತಿಭೆಯು ಈ ಪೀಳಿಗೆಯ ಟಿ20ಯಲ್ಲಿ ಖಂಡಿತವಾಗಿ ಅವರನ್ನು ಸ್ಟಾರ್ ಆಟಗಾರನಾಗಿ ರೂಪಿಸುತ್ತಿತ್ತು. ಇದಲ್ಲದೇ ರವಿಶಾಸ್ತ್ರಿ, ಗಿಬ್ಸ್ ಅಥವಾ ಯುವರಾಜ್ ಸಿಂಗ್‌ಗಿಂತ ಬಹು ಹಿಂದೆಯೇ   ಓವರಿಗೆ ಆರು ಸಿಕ್ಸರ್ ಸಿಡಿಸಿ ದಾಖಲೆ ಪುಸ್ತಕದಲ್ಲಿ ತಮ್ಮ ಹೆಸರನ್ನು ಬರೆದಿದ್ದರು. 
 
 ಪ್ರಸಕ್ತ ಮತ್ತು ಮುಂದಿನ ಪೀಳಿಗೆ ಆಟಗಾರರು ಟೆಸ್ಟ್ ಬದಲಿಗೆ ಟಿ20ಗೆ ಆದ್ಯತೆ ನೀಡುತ್ತಾರೆಂಬುದು ಸತ್ಯವಾಗಿದೆ. ಬ್ರೇವೋ ಮತ್ತು ಸಾಮಿ 31 ಮತ್ತು 30ರ ವಯಸ್ಸಿನಲ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ ಹಾಗೂ ಕ್ರಿಸ್ ಗೇಲ್ ಕೂಡ ಅನುಸರಿಸುವ ಸಾಧ್ಯತೆ ಇದೆ. ಒಂದು ದೃಷ್ಟಿಕೋನದಿಂದ ಅವರನ್ನು ನಾವು ದೂಷಿಸಲು ಸಾಧ್ಯವಿಲ್ಲ. ಬೌಲರುಗಳಿಗೆ ಹೆಚ್ಚು ಬೌಲ್ ಮಾಡಬೇಕಿಲ್ಲ. ಕೇವಲ ನಾಲ್ಕು ಓವರು ಬೌಲ್ ಮಾಡಬೇಕಾಗುತ್ತದೆ. ಅವರು 20 ಪಂದ್ಯಗಳನ್ನಾಡಿದರೆ 80 ಓವರುಗಳನ್ನು ಬೌಲ್ ಮಾಡುತ್ತಾರೆ. ನೀವು 3 ಟೆಸ್ಟ್ ಪಂದ್ಯಗಳನ್ನಾಡಿದರೆ 100ಕ್ಕಿಂತ ಹೆಚ್ಚು ಓವರು ಬೌಲ್ ಮಾಡಬೇಕಾಗುತ್ತದೆ. 
 
ಆಟಗಾರರು ತಮಗೆ ವಯಸ್ಸಾಗುತ್ತಿರುವುದರಿಂದ ಟಿ20ಗೆ ಯಾಕೆ ಹೋಗಬಾರದು ಎಂದು ದೃಷ್ಟಿಕೋನ ಹೊಂದಿರುತ್ತಾರೆ. ಕೆಲವು ವರ್ಷಗಳ ಹಿಂದೆ ಆಟಗಾರರಿಗೆ ಟೆಸ್ಟ್ ಕ್ರಿಕೆಟ್ ಬಿಟ್ಟರೆ ಬೇರೆ ದಿಕ್ಕಿರಲಿಲ್ಲ. ಟಿ 20 ಇಲ್ಲದಿದ್ದರೆ ಅನೇಕ ಕ್ರಿಕೆಟಿಗರು ಈಗಲೂ ಟೆಸ್ಟ್ ಕ್ರಿಕೆಟ್‌ಗೆ ಜೋತು ಬೀಳುತ್ತಿದ್ದರು ಎಂದು ಸೋಬರ್ಸ್ ಹೇಳಿದರು. 
 

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments