Select Your Language

Notifications

webdunia
webdunia
webdunia
webdunia

ಕೋಲ್ಕತಾ: ಅಂಡರ್-19 ತಂಡದ ಮಾಜಿ ನಾಯಕ ಅಂಕಿತ್ ಕೇಸರಿ ನಿಧನ

ಕೋಲ್ಕತಾ: ಅಂಡರ್-19 ತಂಡದ ಮಾಜಿ ನಾಯಕ ಅಂಕಿತ್ ಕೇಸರಿ ನಿಧನ
ಕೋಲ್ಕತಾ , ಸೋಮವಾರ, 20 ಏಪ್ರಿಲ್ 2015 (14:46 IST)
ಕಳೆದ ನವೆಂಬರ್ ತಿಂಗಳಲ್ಲಿ ಫಿಲಿಪ್ ಹ್ಯೂಗೆಸ್ ಸಾವಿನ ಆಕ್ರಂದನ ಮಾಚುವ ಮುನ್ನವೇ ಬಂಗಾಳದ ಭರವಸೆಯ ಕ್ರಿಕೆಟಿಗ  ಅಂಕಿತ್ ಕೇಸರಿ ರಾಜ್ಯಮಟ್ಟದ ಪಂದ್ಯವೊಂದರ ವೇಳೆ ತಲೆಗೆ ಗಂಭೀರವಾಗಿ ಏಟು ಬಿದ್ದ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.  

ಬಂಗಾಳ ಕ್ರಿಕೆಟ್ ಅಸೋಸಿಯೇಶನ್ ಏಪ್ರಿಲ್ 17 ರಂದು ಆಯೋಜಿಸಿದ್ದ ಹಿರಿಯರ ಏಕದಿನ ಕ್ರಿಕೆಟ್ ಪಂದ್ಯದ ಸಂದರ್ಭದಲ್ಲಿ ಅಂಕಿತ ಗಂಬೀರವಾಗಿ ಗಾಯಗೊಂಡಿದ್ದರು.

ಕಳೆದ ಮೂರು ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಂಕಿತ ರವಿವಾರದವರೆಗೆ ಚೇತರಿಸಿಕೊಳ್ಳುವ ಸಂಕೇತ ನೀಡುತ್ತಿದ್ದರು. ಆದರೆ, ಇಂದು ಬೆಳಿಗ್ಗೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

20 ವರ್ಷ ವಯಸ್ಸಿನ ಪ್ರತಿಭಾವಂತ ಬಲಗೈ ಆಟಗಾರನಾಗಿದ್ದ ಅಂಕಿತ್, ಬಂಗಾಳದ ಅಂಡರ್-19 ತಂಡದ ನಾಯಕನಾಗಿಯೂ ಮಿಂಚಿದ್ದರು. ಸಿ.ಕೆ.ನಾಯ್ಡು ನ್ಯಾಷನಲ್ ಚಾಂಪಿಯನ್‌ಶಿಪ್‌ಗಾಗಿ ಅಂಡರ್-23 ತಂಡಕ್ಕೆ ಕೂಡಾ ಆಯ್ಕೆಯಾಗಿದ್ದರು.

Share this Story:

Follow Webdunia kannada