Select Your Language

Notifications

webdunia
webdunia
webdunia
webdunia

ಜಿಂಬಾಬ್ವೆ ವಿರುದ್ದ ಮೊದಲ ಟಿ 20: ಸೋಲಿನ ಭೀತಿಯಲ್ಲಿ ಭಾರತ

ಜಿಂಬಾಬ್ವೆ  ವಿರುದ್ದ ಮೊದಲ ಟಿ 20: ಸೋಲಿನ ಭೀತಿಯಲ್ಲಿ ಭಾರತ
ಹರಾರೆ: , ಶನಿವಾರ, 18 ಜೂನ್ 2016 (19:14 IST)
ಜಿಂಬಾಬ್ವೆ ಮತ್ತು ಭಾರತದ ನಡುವೆ ಮೊದಲ ಟಿ 20 ಪಂದ್ಯದಲ್ಲಿ ಭಾರತದ ಗೆಲುವಿನ ನಿರೀಕ್ಷೆ ತಲೆಕೆಳಗಾಗುವಂತೆ ಕಾಣುತ್ತಿದೆ. ಭಾರತ ಟಿ 20ಯಲ್ಲೂ ಕ್ಲೀನ್ ಸ್ವೀಪ್ ಮಾಡಿ ಅಜೇಯರಾಗಿ ಭಾರತಕ್ಕೆ ಹಿಂತಿರುಗುವ ಆಲೋಚನೆ ಮಾಡಿದ್ದರು.

ಆದರೆ ಮೊದಲ ಟಿ 20 ಪಂದ್ಯದಲ್ಲಿ ಜಿಂಬಾಬ್ವೆ 6 ವಿಕೆಟ್‌ಗೆ 170 ರನ್‌ಗಳ ಬೃಹತ್ ಮೊತ್ತವನ್ನು ದಾಖಲಿಸಿದ್ದು, ಈ ಸ್ಕೋರ್ ಬೆನ್ನಟ್ಟುವುದು ಭಾರತಕ್ಕೆ ಪ್ರಯಾಸದ ಕೆಲಸವಾಗಿ ಕಾಣುತ್ತಿದೆ. ಭಾರತ ತಂಡವು ಈಗಾಗಲೇ 4 ವಿಕೆಟ್ ಕಳೆದುಕೊಂಡು 13. 4 ಓವರುಗಳಲ್ಲಿ 106 ರನ್ ಮಾತ್ರ ಗಳಿಸಿದ್ದು, 55 ಎಸೆತಗಳಲ್ಲಿ 93 ರನ್ ಗಳಿಸಿ ಗುರಿಯನ್ನು ಮುಟ್ಟುವ ಸವಾಲು ಭಾರತಕ್ಕೆ ಎದುರಾಗಿದೆ. ಏಕ ದಿನ ಪಂದ್ಯದಲ್ಲಿ ಸೆಂಚುರಿ ದಾಖಲಿಸಿದ್ದ ಲೋಕೇಶ್ ರಾಹುಲ್ ಡೊನಾಲ್ಡ್ ಟಿರಿಪಾನೊ ಅವರ ಮೊದಲ ಎಸೆತಕ್ಕೆ ಬೌಲ್ಡ್ ಆಗಿ ಪೆವಿಲಿಯನ್ ಹಾದಿ ಹಿಡಿದರು.

ಅಂಬಾಟಿ ರಾಯುಡು ಚಿಬಾಬಾ ಎಸೆತಕ್ಕೆ ಬೌಲ್ಡ್ ಆಗಿ 19 ರನ್ ಮಾಡಿ ಔಟಾದರು. ಮಂದೀಪ್ ಸಿಂಗ್ 27 ಎಸೆತಕ್ಕೆ 31 ರನ್ ಸ್ಕೋರ್ ಮಾಡಿ ಚಿಬಾಬಾಗೆ ಔಟಾದರು. ಭಾರತದ ಪರ ಮನೀಶ್ ಪಾಂಡೆ ಅಜೇಯ 34  ಮತ್ತು ಧೋನಿ 1 ರನ್ ಸ್ಕೋರ್ ಮಾಡಿದ್ದು ಇವರಿಂದ ಉತ್ತಮ ಜತೆಯಾಟ ಮೂಡಿಬಂದರೆ ಗೆಲುವಿನ ಭರವಸೆ ಮೂಡಬಹುದು.  ಜಿಂಬಾಬ್ವೆ ಪರ ಚಿಗುಂಬರಾ ಅತೀ ವೇಗದಲ್ಲಿ 26 ಎಸೆತಗಳಲ್ಲಿ 54 ರನ್ ಗಳಿಸಿದ್ದು ಅವರಿಗೆ ನೆರವಾಯಿತು. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕಾಲ್ಪನಿಕ ಸೂಪರ್ ಹೀರೋ ಹಲ್ಕ್ ರೀತಿ ಕಾಣುವ ಇರಾನ್ ವೇಟ್ ಲಿಫ್ಟರ್