Webdunia - Bharat's app for daily news and videos

Install App

ಮಧ್ಯಸೇವಿಸಿ ವಾಹನ ಚಾಲನೆ ಮಾಡಿದ ಫಾಕ್ನರ್ ವಿರುದ್ಧ ಆರೋಪ

Webdunia
ಶನಿವಾರ, 4 ಜುಲೈ 2015 (14:17 IST)
ಆಸ್ಟ್ರೇಲಿಯಾ ಆಲ್‌ರೌಂಡರ್ ಜೇಮ್ಸ್ ಫಾಕ್ನರ್  ಅವರ ವಿರುದ್ಧ ಗ್ರೇಟರ್ ಮ್ಯಾಂಚೆಸ್ಟರ್ ಪೊಲೀಸ್ ಮಧ್ಯಪಾನ ಸೇವಿಸಿ ವಾಹನ ಚಾಲನೆ ಮಾಡಿದ ಆರೋಪವನ್ನು ಹೊರಿಸಿದೆ.  ಫಾಕ್ನರ್ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದ್ದು, ಜುಲೈ 21ರಂದು ಮ್ಯಾಂಚೆಸ್ಟರ್‌ನಲ್ಲಿ ಕೋರ್ಟ್ ವಿಚಾರಣೆ ಎದುರಿಸಲಿದ್ದಾರೆ.  ಯುಕೆಯ ಕಾನೂನುಬದ್ಧ ಮಿತಿಗಿಂತ  ಫಾಕ್ನರ್  ರಕ್ತದಲ್ಲಿ ಆಲ್ಕೋಹಾಲ್ ರೀಡಿಂಗ್ ಎರಡು ಪಟ್ಟು ಹೆಚ್ಚಿಗೆಯಿತ್ತು.
 
ಇಂಗ್ಲೆಂಡ್ ಸ್ಥಳೀಯ ಕ್ರಿಕೆಟ್ ಸ್ಪರ್ಧೆಗಳಲ್ಲಿ  ಫಾಕ್ನರ್  ಲಂಕಾಶೈರ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.  ಕ್ರಿಕೆಟ್ ಆಸ್ಟ್ರೇಲಿಯಾದ ನಡವಳಿಕೆ ಸಂಹಿತೆ ಅನ್ವಯ ಕೂಡ ಅವರು ಆರೋಪಗಳನ್ನು ಎದುರಿಸಲಿದ್ದಾರೆ. 
 
ಕ್ರಿಕೆಟ್ ಆಸ್ಟ್ರೇಲಿಯಾ ಎಕ್ಸಿಕ್ಯೂಟಿವ್ ಜನರಲ್ ಮ್ಯಾನೇಜರ್ ಪ್ಯಾಟ್ ಹೊವಾರ್ಡ್ ಈ ಕುರಿತು ಮಾತನಾಡುತ್ತಾ, ತಾವು ಜೇಮ್ಸ್ ಜತೆ ಸಂಪರ್ಕ ಹೊಂದಿ ವಿಷಯವನ್ನು ತಿಳಿದುಕೊಂಡೆ. ಯುವಜನರಿಗೆ ಮಾದರಿಯಾಗಬೇಕಿದ್ದ ಅವರು ತಮ್ಮ ಕ್ರಿಯೆಯಿಂದ ನಿರಾಶೆಗೊಂಡಿದ್ದು,  ಮುಜುಗರಕ್ಕೀಡಾಗಿರುವುದು ಸ್ಪಷ್ಟವಾಗಿದೆ.

ನಾನು ಕೂಡ ತೀವ್ರ ನಿರಾಶೆ ವ್ಯಕ್ತಪಡಿಸಿದ್ದು,ಇಂಗ್ಲೀಷ್ ಕಾನೂನು ಮತ್ತು ಕ್ರಿಕೆಟ್ ಆಸ್ಟ್ರೇಲಿಯಾ ನಿಯಮಗಳ ಅನ್ವಯದ ಪರಿಣಾಮಗಳ ಬಗ್ಗೆ ಅವರಿಗೆ ಮಾಹಿತಿ ನೀಡಿದ್ದಾಗಿ ತಿಳಿಸಿದರು. ಏತನ್ಮಧ್ಯೆ,  ಫಾಕ್ನರ್  ಅವರನ್ನು ಯಾರ್ಕ್‌ಶೈರ್ ವೈಕಿಂಗ್ಸ್ ವಿರುದ್ಧ ನ್ಯಾಟ್‌ವೆಸ್ಟ್ ಟಿ20 ಬ್ಲಾಸ್ಟ್ ಪಂದ್ಯಕ್ಕೆ ಆಯ್ಕೆ ಮಾಡುವುದಿಲ್ಲ ಎಂದು  ಲಂಕಾಶೈರ್  ಕೌಂಟಿ ಕ್ರಿಕೆಟ್ ಕ್ಲಬ್ ಖಚಿತಪಡಿಸಿದೆ. 

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments