Select Your Language

Notifications

webdunia
webdunia
webdunia
webdunia

ಐಪಿಎಲ್ ಮುಗಿದ ಮೇಲೆ ಬಾಂಗ್ಲಾ ಪ್ರವಾಸ

ಐಪಿಎಲ್ ಮುಗಿದ ಮೇಲೆ ಬಾಂಗ್ಲಾ ಪ್ರವಾಸ
ಮುಂಬೈ , ಮಂಗಳವಾರ, 5 ಮೇ 2015 (09:58 IST)
ಐಪಿಎಲ್​​‌ನ್ನು ಮುಗಿಸುತ್ತಿದ್ದಂತೆಯೇ ಭಾರತ ಕ್ರಿಕೆಟ್ ತಂಡ ಬಾಂಗ್ಲಾದೇಶಕ್ಕೆ ಪ್ರವಾಸ ಕೈಗೊಳ್ಳಲಿದೆ. ಬಾಂಗ್ಲಾ ಕ್ರಿಕೆಟ್ ಬೋರ್ಡ್​​​ ಜತೆ ಈ ಕುರಿತು ಮಾತುಕತೆ ನಡೆಸಿರುವ ಬಿಸಿಸಿಐ ಕಳೆದ ರಾತ್ರಿ ಪ್ರವಾಸದ ದಿನಾಂಕವನ್ನು ಪ್ರಕಟಿಸಿದೆ. 
 

 
ಬಾಂಗ್ಲಾದಲ್ಲಿ ಭಾರತ 1 ಟೆಸ್ಟ್​​ ಹಾಗೂ 3 ಏಕದಿನ ಪಂದ್ಯಗಳ ಸರಣಿಯನ್ನಾಡಲಿದೆ. ಜೂನ್ 7 ರಂದು ಭಾರತ ತಂಡ ಬಾಂಗ್ಲಾ ತಲುಪಲಿದೆ.10 ರಿಂದ 14ರವರೆಗೆ ಫಾತುಲ್ಹಾದಲ್ಲಿ ಏಕೈಕ ಟೆಸ್ಟ್​​ ಪಂದ್ಯ ನಡೆಯಲಿದ್ದು,  ಆ ಬಳಿಕ 18, 21 ಹಾಗೂ 24 ರಂದು ಮಿರ್​​ಪುರ್​​ನಲ್ಲಿ 3 ಏಕದಿನ ಪಂದ್ಯಗಳನ್ನು ಆಡಲಿದೆ ಎಂದು ಬಿಸಿಸಿಐ ಪ್ರಕಟನೆ ತಿಳಿಸಿದೆ.
 
ಸದ್ಯದಲ್ಲಿಯೇ ಟೆಸ್ಟ್ ಮತ್ತು ಏಕದಿನ ಪಂದ್ಯಗಳಿಗೆ ತಂಡವನ್ನು ಪ್ರಕಟಿಸಲಾಗುವುದು ಎಂದು ಬಿಸಿಸಿಐ ತಿಳಿಸಿದೆ. ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ತೋರಿರುವ ಯುವ ಆಟಗಾರರಿಗೆ ಬಿಸಿಸಿಐ ಆದ್ಯತೆ ಕೊಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. 
 
ಸದ್ಯ ಬಾಂಗ್ಲಾ ಪಾಕ್ ಜತೆ ಟೆಸ್ಟ್ ಪಂದ್ಯಗಳನ್ನಾಡುತ್ತಿದೆ.

Share this Story:

Follow Webdunia kannada